Tuesday, December 1, 2009

ಕುಣಿಸಿ ಬಿಟ್ಟೆಯಲ್ಲೇ... ಹುಡುಗಿ... !!!!!









ನನ್ನಲ್ಲಿ..



ಹುಚ್ಚು ಭಾವಗಳ


ಕಿರೀಟ ಕಟ್ಟಿ..


ಆಸೆ ಕನಸುಗಳ


ಗೆಜ್ಜೆ ಕಟ್ಟಿ...


ಕುಣಿಸಿ ಬಿಟ್ಟೆಯಲ್ಲೇ...


ಹುಡುಗಿ...


ಹೃದಯದೊಳಗೆ..


ಪ್ರೇಮ ತಾಳದ 


ಚಂಡೆ ಮದ್ದಲೆ


ಬಾರಿಬಾರಿಸಿ...!!

Monday, November 23, 2009

ನೀನು.. ಬಣ್ಣದವ...!

ನನ್ನಪ್ಪನ ಕೆಂಗಣ್ಣು

ತಪ್ಪಿಸಿ..

ಬಣ್ಣವಿಲ್ಲದೆ..

ಕುಂಚವಿಲ್ಲದೆ..

ಎಂದೂ..
ಅಳಿಸದ ..

ನಿನ್ನ.. ಚಿತ್ರ

ಬಿಡಿಸಿ ಬಿಟ್ಟೆಯಲ್ಲ....

ಹುಡುಗಾ...

ನನ್ನ....

ಹೃದಯದೊಳಗೆ..!!..







Thursday, November 19, 2009

ಮತ್ತೂ.. ಮತ್ತು......!!


ಮತ್ತು... ಮತ್ತು...

ಈ ಮುತ್ತು..

ಮತ್ತೂ.. ಮತ್ತೂ ...
ಮತ್ತು...!

ನೀ...

ಕೊಡುವ ಮೊದಲೂ...

ಇತ್ತು..

ಕೊಟ್ಟ ಮೇಲೂ...ಮತ್ತು....

ನನಗಂತೂ....

ನಿನ್ನ ಮುತ್ತು..

ಮತ್ತೂ.. ಮತ್ತೂ... ಗಮ್ಮತ್ತು... !







Sunday, November 1, 2009

ಈ...ಗಲ್ಲ ಆಗಲ್ಲ...!




ಈ ಗಲ್ಲ ಈಗಲ್ಲ..

ಮುದ್ದಾಗಿದೆಯಲ್ಲ

ಆಗಲ್ಲ ಎನ್ನಲಾಗುತ್ತಿಲ್ಲವಲ್ಲ...

ನೆನಪಾಗುತ್ತಿದೆಯಲ್ಲ

ನನ್ನಾಕೆಯ...

ಆ ಗಲ್ಲ

...ಆಗಲ್ಲ


Monday, October 26, 2009

ಬೆಳಗುವ ಬೆಳಕಿದೆ...


ಬೆಳಗುವ ಬೆಳಗು..

ದೂರವಿದ್ದರೂ...

ಸುತ್ತಲೂ...ಕವಿದ..

ಕತ್ತಲೆಯಿದ್ದರೂ...

ನನ್ನೆದೆಯಲ್ಲಿ..

ನಿನ್ನ...

ನೆನಪಿನ..ಬುತ್ತಿಯ...

ತುಣುಕು ಇದೆ...

ಗೆಳೆಯಾ...

ನೀ....

ಹಚ್ಚಿದ ..ಆಸೆಯ...

ಹಣತೆಯಿದೆ...





Tuesday, October 20, 2009

ವಿರಹವೆಂದರೆ...

ಮಧುರ ಪ್ರೇಮದ

ವಿರಹವೆಂದರೆ.....

ಬಯಸದ

ಭಾವದಲ್ಲಿ

ಹುಟ್ಟಿದ..

ಬಯಕೆಗಳಂತೆ..............

ಬೇಡದ..

ಬಸಿರಲ್ಲಿ

ಬಂದಿಹ

ಉಸಿರಿನಂತೆ .....









Thursday, October 15, 2009

ನೀ...ನಿಲ್ಲದ ಹೊತ್ತು...!


ನೀ...ನಿಲ್ಲದ... ಹೊತ್ತು....

ನಿನ್ನ

" ಹೂ "....ನಗುವ...

ನನ್ನ..

ತುಟಿಯಲಿಟ್ಟು...

ನಿನ್ನ ಚಂದದ ಚಿತ್ರವ...

ನನ್ನ ಹೃದಯದ ತುಂಬಾ......

ಬಿಡಿಸಿಟ್ಟಿರುವೆ.........

ನಿನಗೂ...

ಗೊತ್ತಾಗದೇ ಹಾಗೆ...

ಕದ್ದು... ಕದ್ದು....!!










Saturday, October 10, 2009

ಮರೆಯದೇ... ಮರೆಯಾದವರು...


ನೆನಪಾಗುತ್ತಾರೆ...

ನನ್ನಲ್ಲಿ....

ನಗುವಾಗಿ ಬರುತ್ತಾರೆ...

ಹಿತವಾಗಿ....

ಮಧುರವಾಗಿ ..ಕಾಡುತ್ತಾರೆ...

ಕಣ್ಣಲ್ಲಿ..ಕನಸಾಗಿ...

ಮನದಲ್ಲಿ ಭ್ರಮೆಯಾಗಿ..

ಮತ್ತೆ ಮತ್ತೆ..

ಮರೆಯದೆ....

ಮರೆಯಾಗುತ್ತಾರೆ...

ದೂರ ಗಗನದ ತಾರೆಯಾಗುತ್ತಾರೆ.....



Sunday, October 4, 2009

ಮನದ ಮನಸಾಗಿ.. ...

ಆಸೆಗಳ..ಆಶಯವಾಗಿ...

ಆಸರೆಯಾದೆ...

ಹೊಸ ಆಸೆಗಳ..ಭಾಷೆಯಾಗಿ..

ಭವಿಷ್ಯದ.

ಭರವಸೆಯಾದೆ...

ನನ್ನ...

ಕನಸಿನ ಕೂಸಾಗಿ...

ಮನದ..

ಮನಸಾಗಿ..

ಮನದನ್ನೆಯಾಗಿ..

ನಮ್ಮನೆಯ.. ಮನದಂಗಳದ...

ಮೊಗ್ಗಿನ ಹೂವಾಗಿರುವೆಯಲ್ಲೆ... ನನ್ನ ನಲ್ಲೆ..,,,

Friday, October 2, 2009

ನೀ....ಹನಿ.. ಹನಿಯಾಗಿ...!

ಹೋದವಳು..

ತಿರುಗಿ

ನೋಡಲಿಲ್ಲ..

ಮತ್ತೆ

ಮತ್ತೆ...

ಯಾಕಾದರೂ ಬರುತ್ತೀಯಾ...?

ನೆನಪಾಗಿ...

ನನ್ನ ಕಣ್ಣಲ್ಲಿ...

ಹನಿ...

ಹನಿಯಾಗಿ....



Thursday, September 24, 2009

ಹೃದಯದ ಭಾವ ಕಣ್ಣಂಚಲಿ....



ತುಟಿಕಚ್ಚಿ ಬಿಗಿಹಿಡಿದು

ಉಮ್ಮಳಿಸಿದ

ದುಃಖ ತಡೆ ತಡೆದು..

ತುಟಿಯಂಚಿನಲ್ಲಿ

ನಗುವಿನ ಪ್ರಯತ್ನವಿದ್ದರೂ..

ನಿನ್ನ ಕಂಡು..

ಹೃದಯದ ಭಾವ...

ಅರಿವಿಲ್ಲದೆ... ಉದುರಿತ್ತು...

ಕಣ್ಣಂಚಿನಲ್ಲಿ..

ಹನಿಹನಿಯಾಗಿ...







Monday, September 21, 2009

ನೀನೆಂದರೆ...ನನಗೆ...!!


ನೀನೆಂದರೆ...

ಮಧ್ಯರಾತ್ರಿಯ

ಮದ್ಯ...

ಬೇಕು ಬೇಕೆನಿಸುವಷ್ಟು...

ತೇಲುವ ನಶೆಯಲ್ಲಿ

ಹೇಳಲಾಗದೆ ಒದ್ದಾಡುವ..

ಪದ್ಯ ಭಾವದ ...

ಗದ್ಯ...


Sunday, September 20, 2009

ನಲ್ಲೆ.... ನಿನ್ನ ...ನೆನಪೆಂದರೆ..


ನಲ್ಲೆ....

ನಿನ್ನ ...

ನೆನಪೆಂದರೆ....

ಏಕಾಂತದಿ..

ನವಿರಾದ..

ನವೆಯ ತುರಿಕೆಯಂತೆ..

ಬೇಡವೆಂದರೂ...

ತಡೆಯಲಾರದೆ.....

ನೆನಪಾಗಿ.....

ಮತ್ತೆ ಮತ್ತೆ ಕಾಡುತ್ತಿಯಲ್ಲೇ...


.






Monday, September 14, 2009

ಅಂದಿನಂತಲ್ಲ.. ಇಂದು .. ನಿನ್ನ ನೆನಪು...!


ಅಂದಿನಂತಲ್ಲ..

ಇಂದು ..

ನಿನ್ನ ನೆನಪು...

ತರವಲ್ಲದೆ.. ...

ತಹ ತಹಿಸಿ..

ತರುವ..

ತರಲೆ..

ತುರಿಕೆಯಂತೆ....

ತಡೆಯಲಾರದ....

ಕಿರಿ ಕಿರಿ...!


Saturday, September 12, 2009

ಹುಚ್ಚು.. ಹರೆಯ.. ಪ್ರೇಮಿಸಿ ಬಿಟ್ಟಿತ್ತು...!


ನನ್ನ...

ಹುಚ್ಚು
ಹರೆಯ...ಪ್ರೇಮಿಸಿಬಿಟ್ಟಿತ್ತು..

ಹಿಂದುಮುಂದು ನೋಡದೆ.....

ನಿನ್ನನ್ನು ನಂಬಿ..

ಹೃದಯವನ್ನು ಅರ್ಪಿಸಿ ಬಿಟ್ಟಿತ್ತು...

ಗೆಳೆಯಾ...

ನನ್ನ ಮುಗ್ಧ ಪ್ರೇಮಕ್ಕೆನು ಗೊತ್ತಿತ್ತು...

ನಿನ್ನ ಕುತಂತ್ರದ ಕರಾಮತ್ತು...?

ಹಗಲು ಹೊತ್ತಿನಲ್ಲಿ..

ನನ್ನ ಬೆಳ್ಳನೆಯ ಬಣ್ಣದ...

ಬೆಡಗಿನ ತಿಟ್ಟು....

ಬೇಕಿತ್ತು.. ನಿನಗೆ...

ಕತ್ತಲೆಯಾಗುತ್ತಲೇ...

ಕರಿ ಕಾಗೆಯ.
..

ಕಾಕಸ್ವರದ ಹುಚ್ಚು....!




Thursday, September 10, 2009

ನಿನ್ನೆಯ... ನಿನ್ನ.. ನೆನಪುಗಳು...!



ನೀ...

ಬಿಟ್ಟು ಹೋದ..

ನಿನ್ನೆಯ.. ನಿನ್ನ... ನೆನಪುಗಳು..

ಹೃದಯ ಹಿಂಡಿ ತಿರುಚುವ..

ಕಹಿ ನೋವುಗಳು...

ಹೇಳಾಲಾಗದ ಹಿಂಸೆಯು...

ಕಳೆಯಲಾಗದ ಕಾಲವು...

ನಿನ್ನೊಡನೆ..

ನಾ..

ಕಳೆದ ..

ಪ್ರತಿ ಕ್ಷಣ ಕ್ಷಣವೂ...

ನನ್ನಲ್ಲೇ......

ಉಳಿದು
ಬಿಟ್ಟವು.....




Friday, August 28, 2009

ಗರಿ ಬಿಚ್ಚಿ ಹಾರುತಿದೆ.. ಗಗನದೆತ್ತರಕೆ...

ವಿರಹದ...ಬಳಲಿಕೆಗೆ..

ಬಹುದಿನಗಳ ಅಗಲಿಕೆಗೆ...

ನಲ್ಲೆ... ನೀ..

ಕಳುಹಿದ..

ಸಿಹಿ ಮುತ್ತು...

ಮತ್ತೆ ...

ಮೊಳಕೆಯೊಡೆದು...

ಚಿಗುರುತಿದೆ...

ಬಣ್ಣ... ಬಣ್ಣದ ಕನಸುಗಳು...

ಬಚ್ಚಿಟ್ಟ ಬಯೆಕಗಳು....

ಗರಿಬಿಚ್ಚಿ ಹಾರತೊಡಗಿವೆ....

ಗಗನದೆತ್ತರಕೆ.....

(photo :: Ashish)




Monday, August 24, 2009

ಅದೇ...... ಪ್ರೇಮ ರಾಗದ ಹಾಡು.......!!.

ಮತ್ತೆ ಮುಖ ತಿರುಗಿಸಿ ....

ಹೊರಟೇ.. ಬಿಟ್ಟೆಯಲ್ಲಾ.....ನಲ್ಲಾ....

ನೆನಪಾಗುವದಿಲ್ಲವೇ...

ಅಂದು...

ನನ್ನ ಕಣ್ಣಲ್ಲಿ ...ಕಣ್ಣಿಟ್ಟು....

ನೀ.... ಕೊಟ್ಟ ಭಾಷೆ.....

ನೀನಿಟ್ಟ.... ಪ್ರೀತಿ...

ತುಂಬು ಪ್ರೀತಿಯ ...

ನಂಬಿಕೆಯ....ಭರವಸೆಯ..
ಮಾತು...

ಗೆಳೆಯಾ...

ನಿನ್ನ ನಡೆನುಡಿಯ ವ್ಯವಹಾರ....

ಅರಿಯದ.....


ನನ್ನ ಪುಟ್ಟ ಹೃದಯ...

ಇಂದೂ.... ಸಹ.. ಗುನುಗುತ್ತಿದೆ...

ಅದೇ.. ಸ್ನೇಹದ....

ಅದೇ..ಭಾವದ....

ಪ್ರೇಮ ರಾಗದ ಹಾಡು....
...!!.


Wednesday, August 12, 2009

ಹೂ ಸು ವಾಸನೆ...??



ಎಷ್ಟೊಂದು
ದಿನಗಳ ನಂತರ

ಸಿಕ್ಕಿದ್ದಿಯಲ್ಲ...

ನಲ್ಲಾ...

ನನ್ನೆಲ್ಲ

ಮನಸ್ಸಿನ ಭಾವಗಳನ್ನು.
..

ಹೇಳಿಕೊಳ್ಳ ಬೇಕಿತ್ತು..

ನಿನ್ನ ಬಿಸಿ ಅಪ್ಪುಗೆಯಲ್ಲಿ..

ನಿನ್ನ ಹರವಾದ ಎದೆಯಲ್ಲಿ..


ವಿರಹದ
ಬೇಗೆಯನ್ನು ಮರೆಯ ಬೇಕಿತ್ತು...

ಛೇ...

ರಸ ಭಂಗ ಮಾಡಿ ಬಿಟ್ಟೆಯಲ್ಲ...!!

ಗೆಳೆಯಾ...

ಹೇಗೆ ತಡೆದು ಕೊಳ್ಳಲಿ ..??

ಈ... ಕೆಟ್ಟ...

ಹೂ ಸು ವಾಸನೆಯನ್ನು.....???

Monday, August 10, 2009

ನಾನು... ಮೊದಲು ... !!

ನೀನಿರುವೆ...

ನನ್ನ .. ಕಣ.. ಕಣದಲ್ಲಿ...

ತನು ಮನ ..ಹೃದಯದಲ್ಲಿ...

ನಿನ್ನ ...

ಉತ್ಕಟ ಪ್ರೀತಿ.. ಪ್ರೇಮ...

ಹಗಲಿರಳೂ ಕಾಡುತ್ತದೆ...

ವಾಸ್ತವದಲ್ಲಿ... ಕನಸಿನಲ್ಲಿ...

ನಿನ್ನ ಬಿಟ್ಟು ನನಗೆ ಯಾರಿಲ್ಲ...

ನನ್ನ ಜೀವ .. ಜೀವನ ನೀನು...


ಏನು ಮಾಡಲಿ ನಾನು.....??..!!

ನನ್ನ ...

ಪುಟ್ಟ ಹೊಟ್ಟೆಯ ಹಸಿವಿಗೆ..

ಇದು ಯಾವುದೂ ಬೇಕಿಲ್ಲ...

ಕ್ರೂರ ನಿರ್ದಯಿ...ಇದು...

" ನಾನು... ಮೊದಲು ...

ಆಮೇಲೆ... ನಿನ್ನ ..ಗೆಳತಿ...."


ಎನ್ನುತ್ತಿದೆಯಲ್ಲ.....!!!

Wednesday, August 5, 2009

ಅರ್ಥವಾಗದೆ ... ನಿನಗೆ...?





ನನ್ನೊಳಗೆ....ನಾನೇ...

ಅರಳಿಸಿಕೊಂಡ

ನೂರಾರು ಸುಂದರ .. ಕನಸುಗಳು....

ಹೃದಯ ತುಂಬಾ

ಹುದುಗಿಟ್ಟ...ಬಣ್ಣದ.. ಬಯಕೆಗಳು..

ನಿನ್ನ ಒಂದು ನೋಟಕ್ಕೆ

ಕಾತರಿಸಿ

ಪುಳಕಗೊಳ್ಳುವ

ನನ್ನ ಮೈಮನಗಳು......

ಅರ್ಥವಾಗದೆ ...ನಿನಗೆ.....

ಹೇಳಿಕೊಳ್ಳಲಾಗದ

ನನ್ನಲ್ಲಿಯ

ಬಚ್ಚಿಟ್ಟ ಭಾವಗಳು....??..??

???

Sunday, August 2, 2009

ನಿನ್ನ .. ಸ್ನೇಹ ಬಯಸುವೆ.... ಗೆಳೆಯಾ...!


ನನ್ನ ...

ಪುಟ್ಟ ಹೃದಯ.....

ಬಯಸುತ್ತದೆ...ಹಂಬಲಿಸುತ್ತದೆ...

ಮೇರೆಯಿಲ್ಲದ ಬಾಂಧವ್ಯ...

ಬೇಲಿಯಿಲ್ಲದ ಬಂಧನ...

ವಾಂಛೆಯಿಲ್ಲದ.... ಆಸೆಗಾಗಿ.......

ಕಾದಿರುತ್ತದೆ...ಕಾತರಿಸುತ್ತದೆ....

ಪ್ರತಿ ಕ್ಷಣ.. ಕ್ಷಣವೂ...

ಹೊತ್ತು ಗೊತ್ತಿನ ಪರಿವಿಲ್ಲದೆ...

ಪ್ರೀತಿ ಪ್ರೇಮದ ಸೆಲೆಗಾಗಿ....

ಗೆಳೆಯಾ.....

ನಿನ್ನ.....

ಸ್ವಚ್ಚ ಮನಸ್ಸಿನ..ಸ್ನೇಹಕ್ಕಾಗಿ.....




Thursday, July 30, 2009

ಮುಸ್ಸಂಜೆ... ಮಾತು...!!


ಕೊಟ್ಟುಬಿಡು...

ಮತ್ತೊಂದು..

ಮತ್ತೇರಿಸುವ ಮುತ್ತು...

ನಿನ್ನ..

ಬೆಚ್ಚನೆಯ ಸಿಹಿ ಕನಸಿಗಾಗಿ..

ನೆನಪಿಗಾಗಿ...

ಪಕ್ಕದಲ್ಲಿ ..

ನೀನಿದ್ದರೂ...

ಕಳೆಯ ಬೇಕಲ್ಲ...

ಒಂಟಿತನದ ರಾತ್ರಿ...

ಸಖಿ...

ನನ್ನ..ಅಪ್ಪ, ಅಮ್ಮನ..

ಪುಟ್ಟ ಗೂಡಿನಲ್ಲಿ.....

ಎಲ್ಲಿದೆ ಪ್ರೈವೆಸಿ...?
..?.


Sunday, July 26, 2009

ಹಾರಿ ಹೋದೆಯಲ್ಲೆ... ಗೆಳತಿ..




ಹ್ರದಯದಲ್ಲಿ..

ಪುಟ್ಟನೆಯ ಗೂಡು ಕಟ್ಟಿ..

ಪ್ರೀತಿ ಸ್ನೇಹದ..

ಮೊಟ್ಟೆಯಿಟ್ಟು..

ಬೆಟ್ಟದಷ್ಟು..

ಬೆಚ್ಚನೆಯ..

ಸವಿ ನೆನಪುಗಳ..

ಕಾವು ಕೊಟ್ಟು...

ಹಾರಿ ಹೋದೆಯಲ್ಲೆ... ಗೆಳತಿ...

ನನ್ನನೊಬ್ಬನೆ..

ಒಂಟಿಯಾಗಿ..

ಬಿಟ್ಟು.. ಬಿಟ್ಟು....

Friday, July 24, 2009

ನೀ.. ಕೊಟ್ಟ ಮುತ್ತಿನ ಹನಿಗಳು .......


ನನ್ನ ...

ಮೈ...ಮನ...

ಬೆಚ್ಚಗಾಗಿಸಿ...

ಮೋಹಿಸಿ..ಮತ್ತೇರಿಸಿ..

ಕದಿಯುತ್ತಿದಾನೆ...

ಇನಿಯಾ...

ನಿನ್ನ ಸಿಹಿ ನೆನಪುಗಳನು..

ನೀ...

ನನಗಾಗಿಕೊಟ್ಟ..

ಮುತ್ತಿನ ಹನಿಗಳನು.......

ಈ ...

ಮುಂಜಾನೆಯ .. ರಂಗು ರಂಗಿನ...

ಭಾಸ್ಕರ...!


Wednesday, July 22, 2009

ಮಾತು... ಮೌನವಾಗುವ ಮುನ್ನ....







ಬದುಕಲ್ಲಿ... ....

ಅತ್ತಿತ್ತ....

ತಡಕಾಡಿ ...

ಹುಡುಕುತ್ತಿರುವ ಹಾಗೆ......

ಗೊತ್ತಿಲ್ಲದೆ.....

ಹೊತ್ತು...

ಕಳೆದು ಹೋಗುತ್ತದೆ.... ಗೆಳೆಯಾ....!!

ಮನಬಿಚ್ಚಿ ಮಾತಾಡು....

ಕತ್ತಲೆಯಲಿ...

ಮಾತು...

ಕರಗಿ ಹೋಗುವ ಮುನ್ನ...