Tuesday, March 26, 2013

ಭಾವಕೂ ನಿಲುಕದ .. ..ನಿತ್ಯ ಬದುಕಿನ .. ಬಣ್ಣದೋಕುಳಿ .. !


ಕಳೆ
ಕಳೆದ ಕಾಲ ಬಳಿದ .. 
ಕಪ್ಪು
ಬಿಳಿಗಳ ಜೊತೆ ...
ಮತ್ತೆ
ಮತ್ತೆ ಚಿಗುರಿಸುವೆಯಲ್ಲೆ 
ಅದೇ.. 
ಹುಚ್ಚು ಹಸಿರಿನ ಮೊಗ್ಗು..

ಎನ್ನ
ಮನದಂಗಳದಿ.. 
ಚುಕ್ಕಿ
ತಾರೆಗಳಾಡುವ ಪಿಸು ಮಾತು..
ಹಳತು 
ಹಳಸದೆ ಹಾಡುವೆಯಲ್ಲೆ..
ನವ
ನವಿರು 
ನೆನಪು ಕನಸುಗಳ ಗುಂಗಿನ ಗುನುಗು.... 

ನಲ್ಲೇ..
ಭಾವಕೂ..  ನಿಲುಕದ 
ನೀ.. 
ನಿತ್ಯ 
ಬದುಕಿನ 
ಬಣ್ಣ 
ಬಣ್ಣದ ರಂಗಿನೋಕುಳಿ.. ಕಣೆ ..!

Thursday, March 14, 2013

ನಾಚಿಕೆ ನವೀರಾಗಿ... ನಾಚಿ ನೀರಾಗಿ...



ನಾಚಿಕೆ
ನವೀರಾಗಿ...
ನಾಚಿ

ಪ್ರೇಮದ ..
ಬಣ್ಣ 
ಕೆನ್ನೆಯಲಿ ರಂಗಾಗಿ...
ಮಧುರ
ಭಾವಗಳು.. ಕಣ್ಮುಚ್ಚಿ..

ಅಧರದಲಿ 
ಕಂಪಿಸುವ..
ಸಾವಿರ ಮಾತುಗಳ ಸಿಹಿ...
ಮುತ್ತು
ನಾನಾಗಲೇನೆ   ಹುಡುಗಿ.. ?...









Saturday, March 9, 2013

ಹೊಸಿಲ .. ರಂಗೋಲಿ ಅಳಿಸಬೇಡ ...


ಹೊಸಿಲ
ಹೊರಗಿನಂಗಳದ..
ರಂಗೋಲಿ ಅಳಿಸಬೇಡ ... 

ನೀನೇ ..
ಅರಳಿಸಿದ..
ಬಣ್ಣ .. 
ಬಣ್ಣದ ರಂಗಿನ .. ಗುಂಗುಗಳ 
ಹೊಸಕಿ... 
 ತುಳಿದು ಕದಡ ಬೇಡ...

ಎಲ್ಲ... 
ಇಲ್ಲಗಳ ಮರೆತು..
ಭಾವ 
ನೋವಿನ ಅಳುವಿನಲಿ..
ಭಾರ 
ಹೆಜ್ಜೆಗಳ ತಾಳದಲಿ..
ನಾ 
ಕುಣಿಯಬೇಕಿದೆ..
ನಿನ್ನ 
ಗೆಜ್ಜೆ ನೆನಪುಗಳ ಸವಿ ಸದ್ದಿನಲಿ...

ಬಾಳ ಬದುಕಿನ 
ರಂಗದಲಿ 
ಇನ್ನೂ...
ಪದರಗಳ ಪರದೆಯಿದೆ... 
ನಿನ್ನೇ..
 ಕಳೆದ   ನಾಳೆಗಳಿವೆ... 

ಹೊಸಿಲ
ಹೊರಗಿನಂಗಳದ..
ರಂಗೋಲಿ   ಅಳಿಸಬೇಡ ... 




(ರೂಪದರ್ಶಿ :: ನಿರುಪಮಾ ರಾಜೇಂದ್ರ 
ಖ್ಯಾತ ಅಂತರರಾಷ್ಟ್ರೀಯ ನೃತ್ಯ ಪಟು)