Thursday, May 27, 2010

ನೋವಾಗಿ... ನಗುವಾಗಿ...ನೆನಪಾಗಿ.....

ಪ್ರೇಮದ...

ತುಮಲಗಳು..
ತುಟಿಯಲಿ..
ಶಬ್ಧವಾಗದೆ..
ಒಳಗೊಳಗೇ..
ಹಿಂಡುವ ....
ಮೂಕ..
ವೇದನೆಯಾಗಿದ್ದರೂ...

ನೀ..
ನನ್ನೊಳಗೆ..

ಕಲ್ಪನೆಯ..
ಕನಸಾಗಿ..
ಭಾವಗಳ..
ಹೂವಾಗಿ..
ಮೃದುವಾಗಿ....
ಹಿತವಾಗಿ....
ಇದ್ದುಬಿಡು....

ಹುಡುಗೀ......

ನನ್ನಲ್ಲಿ.....

ನೋವಿನ ...
ನಗುವಾಗಿ.....
ನೆನಪಾಗಿ....

Sunday, May 16, 2010

ಅಂದಕೆ...ಚಂದಕೆ.. ಮಕರಂದಕೆ...!

ನನ್ನ..
ಹೃದಯದ..
ಭಾವಗಳ..
ಪುಟ್ಟ..
      ತೋಟದಲೀ.......

ಸುಂದರ..
ಕನಸಿನ..
ಹೂ..
ಅರಳಿದೆ..

ಬಾ..
ಗೆಳೆಯಾ..

ನನ್ನೀ..

ಅಂದ..
ಚಂದ..

ಈ..

ಮುಖಾರವಿಂದ...
ಕೆಂದುಟಿ....

ಮಕ ರಂದಕೆ.....!!

Sunday, May 2, 2010

ಕಪ್ಪನೆಯ.. ಬೆಡಗಿ.. !



ನಿನ್ನ..
ಮುಂಗುರುಳು..
ಸಿಹಿ..
ನಗು..
ನನ್ನ..
ಮನದಾಳಕ್ಕಿಳಿಯುವ..
ನಿನ್ನ ಚೆಲುವು..
ನೀ..
ಕೊಡುವ..
ಪ್ರತಿಕ್ಷಣದ....
ಪ್ರೇಮದಲ್ಲೂ..

ತಟ್ಟನೆ..

ನೆನಪಾಗಿ..
ಬಿಡುತ್ತದಲ್ಲ.......

ಆ....

ಕಪ್ಪು..
ಬೆಡಗಿಯ...
ದಟ್ಟನೆಯ....

ಕಣ್ಣು.. !!