Tuesday, January 4, 2011

ಗುಳಿ ಕೆನ್ನೆಗಳ.. ಕಚಗುಳಿಯಾಗಿ..!


ಈ......
ತುಟಿ..
ಮೊಗ್ಗಿನಲರಳುವ ..
ಮುಗುಳು ನಗುವಾಗಿ..
ಗುಳಿ..
ಕೆನ್ನೆಗಳ..
ಕಚಗುಳಿ.. ನಾಚಿಕೆಯಾಗಿ..


ನನ್ನ..
ಕಣ್ಣುಗಳಲಿ..
ಕಾಡುವ..
ಕನಸಾಗಿ..


ಗೆಳೆಯಾ...


ಸದಾ..
ಬರುವೆಯಲ್ಲ..
ನನ್ನೆದೆಯಲ್ಲಿ...
ನೀ..
ಸುಂದರ..
ಸಾವಿರ..
ಸವಿ..
ನೆನಪುಗಳಾಗಿ...!