Thursday, June 30, 2011

ನನ್ನೆದೆಯ ಸಂಜೆಯಲಿ...




ನಿನ್ನ..
ಪಿಸು.. ಮಾತು..


ಮುತ್ತು..
ಮತ್ತದೇ..
ಮತ್ತಿನ ..ನೆನಪುಗಳು....


ಎಲ್ಲ ಕಲರವದಲಿ....
ಬಿಡದೆ..
ಕಾಡುವದು..


ಎಲ್ಲೆಯಿಲ್ಲದ ..
ಆಗಸದ...
ಒಂಟಿ..
ಏಕಾಂತ..


ನಿತ್ಯ...
ನನ್ನೆದೆಯ  ಸಂಜೆಯಲಿ...





Monday, June 27, 2011

ಕಟ್ಟಿಕೊಡುವೆ.. ಮೌನದರಮನೆ..!



ದೂರ.. 
ದೂರ..
ಯಾರೂ..
ಇರದ..
ತಾಣಕೆ..
ಬಾ ನಲ್ಲೆ.. ಕಟ್ಟಿಕೊಡುವೆ..
ಎಲ್ಲೆ...
ಮೀರದ..
ಮಾತಿನಾಚೆಯ..
ಮೌನದರಮನೆ..
ಈ..
ನನ್ನ..
ಪುಟ್ಟ..
ಭಾವಗೂಡಿನೊಳಗೆ...



Friday, June 24, 2011

ಕವಿದ.. ಮೋಡದ... ಕನಸುಗಳು..



ಕವಿದ..
ಮೋಡದಿ ...
ಕನಸುಗಳು..
ಕೊನರಿ...

ಕಹಿ...
ಮನದ..
ಕನವರಿಕೆಗಳು...
ಕರಗಿ..
ಕಮರಿಹೋಗುವದಲ್ಲೇ..

ಪ್ರತಿ ..
ಸಂಜೆ ..
ಈ..
ನನ್ನ ..
ಬಾನಿನಂಗಳದಿ....



Tuesday, June 21, 2011

ಮುಚ್ಚಿದ ತುಟಿಗಳ ಮುಗುಳುನಗು...ನೀನು.. !



ನನ್ನ 
ಒಂಟಿ..
ಏಕಾಂತಗಳಲಿ...
ಮುಚ್ಚಿದ 
ತುಟಿಗಳ..
ಮುಗುಳುನಗು ನೀನಾದರೂ...

ವಿಷಾದದ..
ಮೌನದಲಿ..
ನೀರಾಡುವ..ಕಣ್ಣಾಲಿಗಳಲಿ..
ಬಾರದ 
ಹನಿಗಳು...
ನೀನು...ಕಣೆ ಹುಡುಗಿ...

ಆ...
ಕ್ಷಣದಲಿ..
ಸಿಕ್ಕರೂ  
ಸಿಗದಿರುವದು. ..
ನಿನ್ನಂತೆ...
ನಿನ್ನ ..
ನೆನಪಿನ ಮುತ್ತುಗಳು...!


Sunday, June 19, 2011

ಬಾ..ನಲ್ಲೆ.. ಇಲ್ಲೇ.. ನನ್ನಲ್ಲೇ...!

ಅಲ್ಲಿ..
ಇಲ್ಲಿ..
ಎಲ್ಲೆಲ್ಲೋ ಯಾಕೆ..?

ಬಾ..ನಲ್ಲೆ..
ಇಲ್ಲೇ..


ನನ್ನಲ್ಲೇ...
ಅರಳಿಸಿಬಿಡು..
ಒಮ್ಮೆ..
ನನ್ನೊಳಗಿನ  ಬಾನಲ್ಲೇ..

ನಮ್ಮ.. 
ಪ್ರೀತಿ..ಪ್ರೇಮದ....
ಹೂ.. 
ಮೊಲ್ಲೆ...!


Monday, June 6, 2011

ಹನಿಗಳ.. ಹನಿ ಹನಿ.. ಮುತ್ತು..




ವಿರಹದ..
ಕರಿ... 
ಮೋಡಕೆ...
ನೆನೆ ನೆನೆವ..ಹನಿಗಳು..

ಹನಿ..
ಹನಿ..
ಮುತ್ತನಿತ್ತು.. 
ಮತ್ತೇರಿಸಿ..


ನೆನಪ ನೆನೆಸಿ.. ಜಾರುತಿವೆ....


ಮತ್ತೇಕೆ.. 
ಈ.. 
ದೂರ..?

ಬಾ ..ನಲ್ಲೆ...
ನೀ..
ನನ್ನ..
ಹೃದಯ ಪ್ರೇಮದಂಗಳಕೆ...

Friday, June 3, 2011

ಮರೆಯದ.. ಮರೆಯಾಗದ ..ನೆನಪುಗಳು..


ಅಂದು..
ನೀ..
ನಾಚಿ.. 
ನೀರಾಗಿ..
ಮುಚ್ಚಿದ..
ಕಣ್ಣಾಲಿಗಳು..
ಕಾಡುತ್ತವೆ ಹುಡುಗಿ..


ಇಂದೂ..
ದಿಟ್ಟಿಸಿ ನೋಡುತ್ತವೆ ..
ಭಾವಾಂತರಂಗದಲ್ಲಿ..
ನೋವಾಗಿ..
ಎಂದಿಗೂ..
ಹೃದಯ ಹಿಂಡುವ ...
ಮರೆಯದ.. 
ಮರೆಯಾಗದ ನೆನಪುಗಳಾಗಿ...






(ಗೆಳೆಯರೇ.. 

ಅಜ್ಞಾತ ಬ್ಲಾಗ್ ಓದುಗರೊಬ್ಬರು  ಬಿಡಿಸಿದ ಚಿತ್ರ ಇದು..

ಅವರು ಆಗಾಗ  ಇಂಥಹ ಪೆನ್ಸಿಲ್ ಸ್ಕೆಚ್ ಚಿತ್ರಗಳನ್ನು ಕಳುಹಿಸುತ್ತಿರುತ್ತಾರೆ..


ಕಣ್ಣು ಮುಚ್ಚಿದ್ದರೂ ಹೇಳುವ ಭಾವಗಳು ನೂರಾರು...


ಇಂಥದೊಂದು  ಫೋಟೋ ತೆಗೆಯಬೇಕೆಂಬುದು ನನ್ನ ಕನಸು...
ಇರಲಿ..


ಅಜ್ಞಾತ ಮಿತ್ರರಿಗೆ..
ಅವರ ಸ್ನೇಹಕ್ಕೆ..

ಪ್ರೀತಿಗೆ..
ಅವರ ಕೈಗಳಿಗೆ..
ಅವರ ಮನಸ್ಸು...
ಕಲೆಗಳಿಗೆ ನನ್ನ ನಮನಗಳು..)