ಇಳಿ
ಸಂಜೆಯ ತಿಳಿಗೆಂಪು...
ಮತ್ತದೆ...
ಅರೆ ಮುಚ್ಚಿದ ಕಂಗಳು....
ಸಿಹಿ ತುಟಿ ...
ಸರಿ..
ಸರಿದಾಡುವ..
ನಿನ್ನೀ.. ಸೆರಗಿನಂಚು..
ಈ..
ಸವಿ..
ಸಮಯ ಸ್ತಬ್ಧವಾಗಲಿ ಬಿಡು...
ನಲ್ಲೇ..
ಬಿಸಿಯುಸಿರ ಆಲಿಂಗನದಲಿ...!
ನನ್ನ...
ಒಂಟಿ ಕತ್ತಲ
ಏಕಾಂತದ..
ಕ್ಷಣಗಳು ನಗುತ್ತವೆ...
ಬೆಳಕು...
ಭಾವ
ಬೆಳದಿಂಗಳಾಗಿ...
ಹುಣ್ಣಿಮೆ ಚಂದ್ರಮನಾಗಿ...
ನಲ್ಲೆ..
ನಿನ್ನ
ಬೊಗಸೆ ಕಂಗಳ...
ಮೌನ
ಪ್ರೀತಿಯ ನೆನಪಾಗಿ....!