Friday, December 14, 2012

ಉಸಿರು ಉಸಿರಲಿ ಉಲಿಯುವ ಭಾವ ..ಉಸಿರು 
ಉಸಿರಲಿ ಉಲಿಯುವ 
ಭಾವ ..
ಹಸಿ ..
ಬಿಸಿಯಲಿ ಕಂಪಿಸುವ ..
ನನ್ನೆಲ್ಲ
ಢವ 
ಢವಗಳು ..
ಪಿಸು
ಮಾತಾಗಬಾರದೇನೆ .. .. ಹುಡುಗಿ....
ತುಟಿಗಳಲಿ...
ನಿನ್ನ
ಕಣ್ಣಾಲಿಗಳಲಿ... .. ? ..(ರೂಪದರ್ಶಿ  :: ಪಲ್ಲವಿ ಮತ್ತಿಘಟ್ಟ )
ಉದಯೋನ್ಮುಖ  ಕಿರುತೆರೆ, ಯಕ್ಷಗಾನ ಪ್ರತಿಭೆ 

Tuesday, December 4, 2012

ನನಗೆ ನೀನೆಂದರೆ ನೀನೇ ... ಕಣೆ... !

ನೀನೆಂದರೆ 
ನನಗೆ ನೀನೇ  .. ಕಣೆ... !

ಏನೆಲ್ಲ 
ನಕ್ಕರೂ  ನನ್ನ   ತುಟಿಗಳು...
ನನ್ನೊಳಗಿನ 
ಒಂಟಿ..
ಮುಗುಳ್ನಗು  ನೀನು  ಕಣೆ...

ನನ್ನೆಲ್ಲ 
ಆವರಿಸಿದ..
ನನ್ನಿಷ್ಟದ ಮೌನ..
ಮಾತು 
ಹಾಡುವ ಸುಂದರ ಅವ್ಯಕ್ತ ಭಾವ ನೀನು ... !

ನನ್ನ...
ತುಮುಲಗಳ ..
ಪ್ರೇಮ ಛಾಯೆಯ ಚಿತ್ತಾರ ..
ನಿನ್ನ ನೋಟ
ಒಳಗೊಳಗೆ ಮುತ್ತಿಕ್ಕುವದು.....

ಹೇಯ್ .. 
ಹುಡುಗಿ
ನನಗೆ ..
ನೀನೆಂದರೆ  ನೀನೇ ... ಕಣೆ... !!!


(ರೂಪದರ್ಶಿ  :: ಸಮನ್ವಯಾ ಸುದರ್ಶನ್ )

Monday, November 26, 2012

ಚುಕ್ಕಿ.. ತಾರೆ.. ಚಂದ್ರಮ ಬರಬೇಕಿಲ್ಲ ಕಣೆ... !

ಚುಕ್ಕಿ..
ತಾರೆ..
ಬೆಳ್ಳಿ ಚಂದ್ರಮ ಬರಬೇಕಿಲ್ಲ ಕಣೆ... !
ಈ 
ನಿನ್ನ
ಒಂದು 
ಹೂ  ನಗು  ಸಾಕು....

ನನ್ನೀ..
ಒಂಟಿ .. ಕತ್ತಲ 
ಮನದ ..
ಹುಣ್ಣಿಮೆ  ಬೆಳದಿಂಗಳ  ಸಂಭ್ರಮಕೆ.... !

Sunday, November 11, 2012

ಬಾ .... ಗೆಳತಿ... ಗೆಜ್ಜೆ ಕಟ್ಟುವೆ ...

ನನ್ನೆದೆಯ ..
ಮೌನ
ಭಾವ 
ಕಣ್ಣಲ್ಲೇ...  ತುಂಬಿ..
ರಂಗು 
ರಂಗಿನ ಗೆಜ್ಜೆ  ಕಟ್ಟುವೆ ಬಾ ಗೆಳತಿ ...

ನನ್ನ..
ಪ್ರೇಮದ
ಕಂಪನದ  ಧ್ವನಿಯಾಗಿ ....
ಲಯ
ತಪ್ಪಿದ  ತಾಳದಲಿ...
ಪ್ರೀತಿ ..
ಹೆಜ್ಜೆಯ 
  ಗೆಜ್ಜೆ  ಕಟ್ಟುವೆ  ಬಾ  ಗೆಳತಿ...


Saturday, October 6, 2012

ನೀರೆ.. ನಿನ್ಯಾರೆ..? ..

ಒಳಗೆ..
ಕತ್ತಲೆ ..
ಚಂದ್ರಮನಿಲ್ಲದ ..
ತಾರೆಗಳ  ಮಿಣುಕು..
ನಿನ್ನ
ನೆನಪುಗಳ ಗಾಢ ಮೌನ.. ..

ಇಳಿದು..
ಎಳೆಯುವ.. 
ನೋವು ಎದೆಯಲಿ..
ಬಾರದ
ಹನಿ  ಹನಿಗಳ  ಭಾವ.....

ನಿಜ ಹೇಳೆ ..
ನೀರೆ..
ನಿನ್ಯಾರೆ..?
ನೀ..
ಬರಿ .. ನೀರೇ..... ?

Sunday, September 2, 2012

ನೀ... ಹಚ್ಚಿದ ನೆನಪುಗಳು...

ದಿನಗಳು...
ಕ್ಷಣ
ಕ್ಷಣಗಳು
ಕಳೆ
ಕಳೆದು ಹೋದರೂ...
ಬಿಡಲಾಗದೇ
ಬಿಗಿದಪ್ಪಿವೆ...

ಈ 
ನನ್ನ
ಕನಸುಗಳಿಗೆ..
ನಿನ್ನ
ನೆನಪುಗಳ ಮೇಲೆ
ಇನ್ನೂ 
ಆಸೆಗಳ ಹುಚ್ಚು  ಕಣೆ .....

Wednesday, July 25, 2012

ಆಗಲೂ ಈಗಲೂ .. ಸಿಕ್ಕಿದ್ದವು ..ಹೂಗಳು ನನಗೆ...ಸಿಕ್ಕಿದ್ದವು ಹೂಗಳು ನನಗೆ...


ನಕ್ಕಿದ್ದವು..
ಕೆಲವಷ್ಟು ನೂಕಿದ್ದವು...
ಚಚ್ಚಿ 
ಚುಚ್ಚಿದ್ದವು...
ರಕ್ತ ನೋವು ತಂದಿದ್ದವು...


ಸಿಕ್ಕಿದ್ದವು ಹೂಗಳು ನನಗೆ...


ಹಾರಿ
ಹೋಗಿದ್ದವು ಹಲವು...
ಹಿಂದೆ 
ಉಳಿದು ಬಿಟ್ಟಿದ್ದವು ..
ಕೆಲವು
ಬಿಸಿಲಿಗೆ ಬಾಡಿ ಹೋಗಿದ್ದವು..


ಮೊಗ್ಗು
ಅರಳಿದ್ದವು..
ಹಸಿರು ಹುಲ್ಲು ಹಾಸುಗಳಾಗಿದ್ದವು..
ಬದುಕಿನುದ್ದಕ್ಕೂ..
ಸುಂದರ 
 ಪುಳಕದ ಪಕಳೆ ಪರಿಮಳಗಳಾಗಿ..
ಜೊತೆ ಜೊತೆಯಾಗಿದ್ದವು..


ಗುರುತು
ಇಟ್ಟಿದ್ದವು ಕೆಲವು... 
ಕಾಣದೆ 
ಕಾಲದೊಳಗೆ ಕಲೆತುಹೋಗಿದ್ದವು ಹಲವು..
ಮರೆಯದೆ..
ಮರೆಯಾಗದೆ ಉಳಿದು ಬಿಟ್ಟಿದ್ದು ನನ್ನೊಲವು...


ಆಗಲೂ..
ಈಗಲೂ
ಸಿಕ್ಕಿದ್ದವು ಹೂಗಳು ನನಗೆ...


Thursday, July 12, 2012

ಎಂದಿಗೂ ದೂರಿಲ್ಲದ .. ಆ ಹತ್ತಿರದ ಬದುಕು.... ...!


ಅದೇ
ಪುಟ್ಟ ಗೂಡು...
ಬೆಚ್ಚಗಿನ 
ಆಸೆಗಳು ನೂರಾರು ಭರವಸೆ.. !


ಕಣ್ಣಂಚಿನಲೇ ..
ನಗು...
ಮೌನ
ಮಾತುಗಳ  ಕೊನೆಯಾಗದ  ಕನಸುಗಳು... !


ಹೇಯ್..
ಅಲ್ಲಿಗೇ ..
ಹೋಗೋಣ  ಬಾರೆ..
ಮತ್ತೊಮ್ಮೆ
ನಲ್ಲೆ....
ಎಂದಿಗೂ..
ದೂರಿಲ್ಲದ ..
ಆ 
   ಹತ್ತಿರದ  ಬದುಕು.... ... !

( photo :: Ashish )

Friday, June 29, 2012

ಇದ್ದುಬಿಡು ನೀ. ನನ್ನೊಳಗೆ.. ಬೆಳ್ಳಿ.. ಬಾನಿನ ನಿರ್ಮಲ ನೀಲಿಯಂತೆ.. !

ಹನಿ..
ಹನಿ  ಹನಿಸಿ..
ಹಸಿರು
ಹೂ.. ಹಾಸಿ..
ಹಾಗೇ  ..
ಹೋಗಬೇಡವೋ ಗೆಳೆಯಾ..
ಇಲ್ಲೇ
ಇದ್ದುಬಿಡು..
ನೀ...
ನಿತ್ಯ 
ನನ್ನೊಳಗೆ..
ಬೆಳ್ಳಿ..
ಬಾನಿನ ನಿರ್ಮಲ ನೀಲಿಯಂತೆ.. !

Tuesday, June 26, 2012

ನನ್ನೆಲ್ಲ .. ಮೌನದೊಳು ನಿನ್ನದೇ... ಮಾತುಗಳು...!

ಎಳೆ ..
ಬಿಸಿಲಿನ..
ಛಳಿ..
ಭಾವದೆಲೆಗಳ ನೆನಪಿನಾಳದಿ...

ಬೆಚ್ಚಗೆ  
ಬೆಳಗುವದು ...
ನಿನ್ನ..
ಪ್ರೀತಿ ಎಳೆಗಳ ಆಲಿಂಗನ....!
ನೀ ...
ನಕ್ಕು ನಗಿಸಿದ.. 
ಆ 
ಕಣ್ಣೋಟದ  ಚುಂಬನಾ.. !

ಗೆಳೆಯಾ..
ನನ್ನೆಲ್ಲ ..
ಮೌನದೊಳು..
ನಿನ್ನದೇ... ಮಾತುಗಳು...!

Sunday, June 17, 2012

ನನ್ನೆದೆಯಲಿ ನಾ.. ನಿತ್ಯ ಅಡಗಿಸಿಡುವ ಪ್ರೀತಿ... !ಮೆಲ್ಲ..
ಮೆಲ್ಲನೆ ...
ತೆರೆಯ ಸರಿಸಿ ..
ಇಣುಕಿ ನೋಡು ನಲ್ಲಾ....

ತುಟಿಯಲಿ ಶಬ್ಧವಾಗದೇ.. ಕಂಪಿಸುವ 
ಭಾವಗಳು ...
ಒಳಗೊಳಗೇ.. ಕಾಡಿ ...
ನಿನಗಾಗಿ..
ಕಾದಿರುವ ರೀತಿ...!


ನೀ 
ಕೇಳು ಗೆಳೆಯಾ...

ನನ್ನೆದೆಯ ..
ಢವ ಢವದಲಿ ..
ನಿತ್ಯವೂ ನನ್ನೊಳಗೆ ..
ನಾ...
ಕ್ಷಣ  ಕ್ಷಣವೂ ಅಡಗಿಸಿಡುವ ಪ್ರೀತಿ...!

Friday, June 8, 2012

ಆ.. ಆಲಿಂಗನ.. ಕಣ್ಣೋಟದ ಚುಂಬನ...!

ಹಸಿರು 
ಚಂದದ ಹೂ ಹಾಸು...
ಜೊತೆ..
ಜೊತೆಯಲಿ ...
ಎಂದೂ...
ಮುಗಿಯದ ಪಿಸು ಮಾತು..!


ಭರವಸೆಯ ..
ಆ..
ಆಲಿಂಗನ..
ಕಣ್ಣೋಟದ ಸಿಹಿ ಚುಂಬನ...!

ಗೆಳೆಯಾ...
ನಿನಗಿಂತ ..
ನೀ 
ಬಿಡಿಸಿದ ..
ಅಂದಿನ  ಅಂದದ  ಚಿತ್ತಾರಗಳೇ..  ಚಂದ  !


Photo  ::   Ashish

Wednesday, May 30, 2012

ಈ.. ಸವಿ.. ಸಮಯ ಸ್ತಬ್ಧವಾಗಲಿ.. ನಲ್ಲೇ..!

ಇಳಿ
ಸಂಜೆಯ ತಿಳಿಗೆಂಪು...
ಮತ್ತದೆ...
ಅರೆ ಮುಚ್ಚಿದ ಕಂಗಳು....
ಸಿಹಿ ತುಟಿ ...
ಸರಿ..
ಸರಿದಾಡುವ..
ನಿನ್ನೀ.. ಸೆರಗಿನಂಚು..

ಈ..
ಸವಿ..
ಸಮಯ ಸ್ತಬ್ಧವಾಗಲಿ ಬಿಡು...
ನಲ್ಲೇ..
ಬಿಸಿಯುಸಿರ ಆಲಿಂಗನದಲಿ...!

Wednesday, May 9, 2012

ನಿನ್ನ ಕಂಗಳ... ಮೌನ ಪ್ರೀತಿ...


ನನ್ನ...
ಒಂಟಿ  ಕತ್ತಲ 
ಏಕಾಂತದ..
ಕ್ಷಣಗಳು ನಗುತ್ತವೆ...

ಬೆಳಕು...
ಭಾವ 
ಬೆಳದಿಂಗಳಾಗಿ...
ಹುಣ್ಣಿಮೆ ಚಂದ್ರಮನಾಗಿ...

ನಲ್ಲೆ..
ನಿನ್ನ
ಬೊಗಸೆ ಕಂಗಳ...
ಮೌನ
ಪ್ರೀತಿಯ  ನೆನಪಾಗಿ....!Wednesday, April 25, 2012

ಕಣ್ಮುಚ್ಚಿ ಬಾ...ಗೆಳೆಯಾ..ಬೆಳ್ಳಿ ಮೋಡದಾಚೆ ..!!

ಹಸಿರು..
ಹಳದಿ ರಂಗಿನ...
ಬಣ್ಣ 
ಬಣ್ಣದ  ಕನಸು ಕಟ್ಟುವೆ...
ಬಾ...

ಬಾರೋ..
ಬಾ..  ಗೆಳೆಯಾ ..
ಕಣ್ಮುಚ್ಚಿ..
ಬೆಳ್ಳಿ ಮೋಡದಾಚೆ  ..

ನೀಲಿ ಗಗನದ..
ನನ್ನ...
ಪ್ರೇಮ ಸೆರಗಿನಂಚಿನಲಿ...Wednesday, April 4, 2012

ನನ್ನ ಕತ್ತಲೆಯ .. ತಾರೆಗಳ ಜೊತೆಯಲ್ಲಿ...

ಬಣ್ಣವಿಲ್ಲದ
ಗೆರೆಗಳು..
ರಂಗು  ರಂಗಿನ  ಚಿತ್ತಾರವಾಗುತ್ತಿವೆ..

ನನ್ನ 
ಕತ್ತಲೆಯ ..
ತಾರೆಗಳ  ಜೊತೆಯಲ್ಲಿ...
ನಿನ್ನ
ಮುಗುಳು  ನಗೆಯನ್ನು  ಬಿಡಿಸುತ್ತಿವೆ...

ಏಯ್ ..ಹುಡುಗೀ..

ಎಷ್ಟೆಲ್ಲ..
ಮಾತುಗಳು ..
ಉಳಿದು  ಬಿಟ್ಟಿವೆಯಲ್ಲೆ.....
ಇನ್ನೂ..
ಒಂಟಿಯಾಗಿ...
ಒಳಗೊಳಗೆ..  ನನ್ನೊಳಗೆ...!!

Thursday, March 8, 2012

ಕಣ್ಣು.. ಕಣ್ಣಾಲಿಯಲಿ ನೀನಂದ ಮಾತು.. ..ಕಣ್ಣು..
ಕಣ್ಣಾಲಿಯಲಿ  ನೀನಂದ 
ಮಾತು..
ನೀ..
ಅಂದು..
ಜೊತೆ ಜೊತೆಯಲಿ
ಇಟ್ಟ..
ಹೆಜ್ಜೆ ..
ಗುರುತುಗಳು..
ಸದ್ದಿಲ್ಲದೆ
ಗೆಜ್ಜೆಯ ದನಿಯಾಗುತ್ತಿವೆ ...
ನನ್ನೆದೆಯಲ್ಲಿ 
ಇಂದಿಗು...
ಎಂದೆಂದಿಗೂ....

Wednesday, February 8, 2012

ನಿನ್ನ.. ಕಣ್ಣುಗಳೊಡನೆ ಇನ್ನೊಮ್ಮೆ... ಮತ್ತೊಮ್ಮೆ..!!

ಕಾಲ..
ಕನಸುಗಳಲಿ....
ನಾ..
ಕಳೆ
ಕಳೆದುಕೊಳ್ಳುವ ಮೊದಲು...

ನಿನ್ನ..
ಕಣ್ಣುಗಳೊಡನೆ...
ಮಾತಾಡುತ್ತಲೇ..ಇರಬೇಕು    ಕಣೆ...
ನಾನೊಬ್ಬನೇ..

ಮೌನವಾಗಿ..
ನೀ..
ನುಡಿಯದೆ ಮಿಡಿಯುವ ಭಾವಗಳ ಜೊತೆ..
ಒಮ್ಮೆ...
ಇನ್ನೊಮ್ಮೆ...
ಮತ್ತೊಮ್ಮೆ...... 
....... ..... ............

Wednesday, January 18, 2012

ನನ್ನ.. ಮೌನ ಗುನುಗುವ ಹಾಡು....


ನನ್ನ..
ಒಂಟಿ..
ಏಕಾಂತದ  ..
 ಮೌನ  ಗುನುಗುವ  ಹಾಡುಗಳಿಗೆ.. 
ನಿನ್ನ..
ಪ್ರೀತಿ ನೋಟದ..
ಭಾವ.. 
ದ್ವನಿಯೇ.. ಸಾಕು    ಕಣೋ ....!

Thursday, January 12, 2012

ಕಚಗುಳಿಯ ಮುಂಗುರುಳಾಗಿ....


ಬಳಿ..
ಇಲ್ಲದಿರೆ  ಏನಂತೆ...
ಇಟ್ಟಿರುವೆ...
ತುಂಬು  ಗಲ್ಲದಲಿ..
ಕೆಂಪು ..
ರಂಗಿನ ಕೆನ್ನೆಯ  ಮೇಲೆ...

ನನ್ನೆಲ್ಲ ಪ್ರಿತಿಯನು...
ನಿನ್ನ..
ಕಣ್ಣಾಲಿಯ  ನಸು  ನಾಚಿಕೆಯ..
ಕಚಗುಳಿಯ ..
ಮುಂಗುರುಳಾಗಿ...!!