Thursday, July 12, 2012

ಎಂದಿಗೂ ದೂರಿಲ್ಲದ .. ಆ ಹತ್ತಿರದ ಬದುಕು.... ...!


ಅದೇ
ಪುಟ್ಟ ಗೂಡು...
ಬೆಚ್ಚಗಿನ 
ಆಸೆಗಳು ನೂರಾರು ಭರವಸೆ.. !


ಕಣ್ಣಂಚಿನಲೇ ..
ನಗು...
ಮೌನ
ಮಾತುಗಳ  ಕೊನೆಯಾಗದ  ಕನಸುಗಳು... !


ಹೇಯ್..
ಅಲ್ಲಿಗೇ ..
ಹೋಗೋಣ  ಬಾರೆ..
ಮತ್ತೊಮ್ಮೆ
ನಲ್ಲೆ....
ಎಂದಿಗೂ..
ದೂರಿಲ್ಲದ ..
ಆ 
   ಹತ್ತಿರದ  ಬದುಕು.... ... !

( photo :: Ashish )

16 comments:

  1. ಚಾಂದ್ ಚುರಾ ಕೆ ಲಾಯಾ ಹೂಂ... ಅನ್ನೋ ಥರಾ ಇದೆ...
    ಚಂದ್ರನ ಕದ್ದಿರುವೆ
    ಕರೆದೂ ತಂದಿರುವೆ
    ಹೇಗೆ ಬಚ್ಚಿಡಲಿ ನಿನ್ನ
    ಈ ಹುಣ್ಣಿಮೆ ಕೇವಲ
    ನನಗಾಗಿಯೇ ಚಿನ್ನ....

    ಸೂಪರ್...ಪ್ರಕಾಶೂ...ಚಿತ್ರ ಮತ್ತು ಕವನ ನಿನ್ನ ಛಾಪಿನಲ್ಲೇ.

    ReplyDelete
    Replies
    1. ಆಜಾದೂ...
      ವಾಹ್ ಕ್ಯಾ ಬಾತ್ ಹೈ... ನಿನ್ನ ಸಾಲುಗಳು ಸೂಪರ್.. !

      ಮನೆಯಲ್ಲಿ ಯಾವಾಗಲಾದರೂ ಅಡಿಗೆ ಮನೆ ಪಾತ್ರೆಗಳ ಸದ್ದು ಕೇಳಿದಾಗ ನಾನು ಕೇಳುವದುಂಟು..

      "ಇನ್ನೊಮ್ಮೆ ಮದುವೆ ಆಗೋಣವೆ? ಅಂತ...

      ಪ್ರೇಮದ ಬದುಕಿನ "ಶುರು"ಗಳು ಬಲು ಚಂದ..... ಅಲ್ವಾ?

      Delete
  2. ಮತ್ತದೇ ಕನಸು

    ReplyDelete
  3. ಪ್ರೀತಿಯ ಹೆಬ್ಬಾರ್ ಸರ್...

    ಕನಸುಗಳೆ ಭರವಸೆಗಳು...

    ಕನಸುಗಳೇ ನಮ್ಮ ಬದುಕನ್ನು ಬದುಕಿಸುತ್ತವೆ.. ಅಲ್ಲವೆ?

    ReplyDelete
  4. ಕೊನೆಯಾಗದ ಕನಸುಗಳ ನಮ್ಮ ಹತ್ತಿರದ ಬದುಕು ಚೆನ್ನಾಗಿ ಮೂಡಿ ಬಂದಿದೆ ....:))

    ReplyDelete
  5. ಸುಂದರ ಶಬ್ಧ ಮಣಿಗಳ ಜೋಡಣೆ ,ದಾಂಪತ್ಯದ ಪ್ರೀತಿಯ ಮಧುರ ಲಾಲಿತ್ಯದ ದರ್ಶನ ಜೈ ಹೋ ಪ್ರಕಾಶಣ್ಣ , ,

    ReplyDelete
  6. ಹತ್ತಿರದ ಬದುಕು ಸದಾ ಹುಡುಕುವುದರಲ್ಲೇ ನಿಮ್ಮ ಸೌಖ್ಯದ ಗುಟ್ಟಿದೆ.

    ಪ್ರೀತಿಯ ನಿರಂತರ ಅನ್ವೇಷಣೆಯು ಸುಖ ದಾಂಪತ್ಯದ ರಹಸ್ಯ. ಇದು ನಿಮಗೆ ಸಿದ್ಧಿಸಿದೆ.

    ಒಳ್ಳೆಯ ಕಾಶ್ಮೀರದ ಫೋಟೋ...

    ReplyDelete
  7. ಚಂದಿರನ ಬೆಳದಿಂಗಳು
    ಹುಣ್ಣಿಮೆಯಲ್ಲಿ ಮಾತ್ರ
    ನನ್ನ ಮನೆಯ ಅಂಗಳದಲ್ಲಿ..
    ಪ್ರತಿ ನಿತ್ಯ..ಪ್ರೀತಿ ಪ್ರೇಮವೇ ಬೆಳದಿಂಗಳು
    ಸುಂದರ ಸಾಲುಗಳು..ಒಳ್ಳೆಯ ಚಿತ್ರ..ತಲೆದೂಗುವ ಸಾಲುಗಳು

    ReplyDelete
  8. ಹುಣ್ಣಿಮೆಯಷ್ಟೇ ಚಂದದ ಚಿತ್ರಕ್ಕೆ ಬೆಳದಿಂಗಳ ತಂಪಿನಂತಹ ಸಾಲುಗಳು ಪ್ರಕಾಶಣ್ಣ..
    ಅಮೃತವರ್ಷಿಣಿ ಚಿತ್ರದ ನನ್ನ ನೆಚ್ಚಿನ "ತುಂತುರು ಅಲ್ಲಿ ನೀರ ಹಾಡು .... ಕಂಪಾನಾ ಇಲ್ಲಿ ಪ್ರೀತಿ ಹಾಡು " ಈ ಹಾಡನ್ನು ಕೆಳುವಾಗಾ ನೀವು ಮತ್ತು ಆಶಕ್ಕ ಯಾವಾಗಲೂ ನೆನಪಿಗೆ ಬರುತ್ತೀರಿ.
    ಇಷ್ಟದ ಗೀತೆಗೆ ಚಂದದ ಜೋಡಿಯಾಗಿ..

    ReplyDelete
  9. wah! very beautiful photo and poem

    ReplyDelete
  10. ಹೇಯ್..
    ಅಲ್ಲಿಗೇ ..
    ಹೋಗೋಣ ಬಾರೆ..
    ಮತ್ತೊಮ್ಮೆ
    ನಲ್ಲೆ....
    ಎಂದಿಗೂ..
    ದೂರಿಲ್ಲದ ..

    ಹತ್ತಿರದ ಬದುಕು.... ... !
    ಸಾಲುಗಳು ತುಂಬಾ ಚೆನ್ನಾಗಿವೆ....
    ಅಣ್ಣಯ್ಯ-ಅತ್ತಿಗೆಯರ ಪೋಟೋ ಅಂತು ಸೂಪರ್.

    ReplyDelete
  11. ಜೀವನದ ಮುಖಾಮುಖಿ! ಒಂದಾಗಿ ಪ್ರವಹಿಸಲಿ! ತುಂಗಾಭದ್ರದಂತೆ :)

    ReplyDelete
  12. ಟನ್ನುಗಟ್ಟಲೇ ಹೊಟ್ಟೆ ಕಿಚ್ಚು...

    ReplyDelete
  13. super guru... thumba thumba like madide... so nice

    ReplyDelete
  14. ಪ್ರಕಾಶಣ್ಣ,

    ಫೋಟೋ ಸೂಪರ್.....ಅದಕ್ಕೆ ತಕ್ಕ ಸುಂದರ ಸಾಲುಗಳು.....ಜೈ ಹೊ.....

    ReplyDelete