Wednesday, June 3, 2015

ಅಧರದಲಿ ಬಚ್ಚಿಟ್ಟ ಮಧುರ ಮಾತುಗಳ ಹಾಗೆ...

ಅಧರದಲಿ
ಬಚ್ಚಿಟ್ಟ
ಮಧುರ  ಮಾತುಗಳ ಹಾಗೆ
ಮೌನ ಕಣೆ 
ನಿನ್ನ 
ನೆನಪುಗಳು...

ಖಾಲಿ
ಖಾಲಿ ಏಕಾಂತದಲಿ
ಚುಕ್ಕಿ
ತಾರೆಗಳು ಕತ್ತಲಲಿ ಹಾಡುತ್ತವಲ್ಲೇ...
ನೀ
ಬಿಟ್ಟು 
ಹೋದ ನಗುವಿನ ಹಾಗೆ....

ಬಾ
ತಬ್ಬಿಬಿಡು ನನ್ನೆದೆಯ..
ಬೆಳ್ಳಿ
ಬೆಳದಿಂಗಳು 
ನನ್ನ
ಒಂಟಿತನವ 
ಆವರಿಸುವ ಹಾಗೆ...