ಛಾಯಾ ಚಿತ್ತಾರಾ....
Tuesday, November 30, 2010
ನೀ.. ನನ್ನ ಆಕಾಶ .. ಕಣೇ...
ಕರಿ...
ಮೋಡ..
ಕವಿದು...
ಹನಿ ...
ಹನಿ..
ಸುರಿದರೂ..
ನೀರಸದ...
ನಿರಾಸೆಯಲ್ಲೂ
ಆಶಾ ...
ಚಿಗುರಿಸುವ ಚಿತ್ತಾರ ...
ಬಿಳಿ..
ನೀಲಿ..
ಬಾನಿನ...
ಬಾಳಿನಂಗಳದಿ...
ಈ..
ನಿನ್ನ..
ಸ್ನೇಹ..
ಗೆಳತೀ.....
ನೀ...
ನನ್ನ .. " ಆಕಾಶ "... ಕಣೇ....!
Wednesday, November 24, 2010
ಎಳೆ..ಬಿಳಿ ..ಬಿಸಿಲು ..
ಎಳೆ..
ಎಲೆ..
ಎಲೆಗಳಂಚಿಂದ...
ಬಿಳಿ
ಬಿಸಿಲು ...
ಎಳೆಯೆಳೆಯಾಗಿ..
ಇಳೆಗಿಳಿದು..
ಬಳಿ..
ಬರಸೆಳೆದು....
ಮೆಲ್ಲ... ಗೆ....
ಕೊಡುತ್ತಿರುವೆಯಾ..
ಗೆಳೆಯಾ....
ಈ...
ಬೆಳ್ಳ..
ಬೆಳಗಿನ..
ಬೆಚ್ಚನೆಯ ..
ಅಪ್ಪುಗೆಯಲ್ಲಿ......
ತುಟಿ
ಚಪ್ಪರಿಸುವ..
ಸಿಹಿ...
ಚುಂಬನಾ...!!
Saturday, November 13, 2010
ಹಾಡಾಗು... ನೀ.. ಹುಡುಗಿ...
ಹಾಡಾಗು.. ನೀ... ಹುಡುಗಿ....
ನನ್ನೊಳಗೆ...
ಹುದುಗಿದ..
ಭಾವಗಳು..
ಗರಿಗೆದರಿ..
ಗಗನದಿ..
ಹಾರುವಂತೆ...
ಹಾಡಾಗಿ..
ಹಾಡು.... ನೀ.. ಹುಡುಗಿ...
ಹೃದಯ..
ಹಿಂಡಿ ...
ಹಿಡಿದಿಡಲಾಗದ ..
ಕನಸುಗಳು....
ನೋವಾಗಿ...
ನಗುವಂತೆ......
ಹಾಡಾಗಿ...
ಹಾಡು ... ನೀ.. ಹುಡುಗಿ...
ನೀ..
ಹರಿ..
ಹರಿದುಹೋಗು ..
ನಿರಾಸೆಗಳ..
ನೆನಪಾಗಿ..
ಹನಿ ...
ಹನಿಗಳಾಗಿ..
ಹಾಡಾಗಿ..
ಹಾಡು... ನೀ.. ಹುಡುಗಿ....
Sunday, September 26, 2010
ಅಳಿಸಲಾಗದ...ಬಣ್ಣ..
ನೀ ನೆಂದರೆ......
ನನ್ನೊಳಗೆ..
ನಾ..
ಬಿಡಿ..
ಬಿಡಿಯಾಗಿ..
ಬಿಡಿಸಿಟ್ಟು.....
ಬಚ್ಚಿ...
ಬಚ್ಚಿ..
ಬಚ್ಚಿಟ್ಟು..
ಬರಿದಾದರೂ...
ತೋರಿಸಲಾಗದ...
ನೀ...
ಅಳಿಸಿ..
ಅತ್ತರೂ...
ಅಳಿಸಲಾಗದ...
ನಿನ್ನ...
ಅಂದಿನ..
ಆ..
ಬಣ್ಣ
ಬಣ್ಣದ.....
ಚಿತ್ರ ..
Monday, August 16, 2010
ಮೆಲ್ಲುಸುರಿನ..ಮೌನದಲಿ..
ಗುಲಾಬಿ..
ಮೊಗದ..
ಸೊಬಗು..
ಬೊಗಸೆಯಲಿ..
ಸವಿದು..
ಈ..
ಮತ್ತೇರಿಸುವ....
ಮೌನದ..
ಮೆಲ್ಲುಸುರಿನಲಿ...
ಮೆಲ್ಲಗೆ..
ಮಾತು..
ಮುತ್ತಾಗಬೇಕಿತ್ತು...
ನಲ್ಲೆ..
ಮುಚ್ಚಿದ..
ನಿನ್ನ..
ಆ..
ಕಣ್ಣು
ರೆಪ್ಪೆಗಳೊಡನೆ....!
Thursday, July 22, 2010
ನೆನಪಾಗುತ್ತಿದೆ.... !
ಈ...
ಕವಿದ..
ಮೋಡಗಳ...
ತುಂತುರು..
ಹನಿಗಳ.....
ಬೆಳಗಿನ..
ಚುಮು ಚುಮು
ಛಳಿಯಲ್ಲಿ....
ನೆನಪಾಗುತ್ತಿದೆ..
ಗೆಳೆಯಾ...
ತುಂಬು..
ಬಾಹುಗಳ..
ಗಾಢಾಲಿಂಗನಾ....
ನಿನ್ನ
ಸಿಹಿ..
ಪಿಸು..
ಮಾತುಗಳ..
ಬಿಸಿಯುಸಿರಿನ..
ಬೆಚ್ಚನೆಯ ..
ಆ..
ಬಿಸಿ..
ಚುಂಬನಾ ...
Monday, June 28, 2010
ದೂರು..ದೂರುತ್ತ..,,
ದೂರು..
ದೂರುತ್ತ..
ದೂರಾದರೂ....
ನೆನಪಾಗಿಬಿಡುತ್ತೀಯಲ್ಲ.....
ನೀ....
ನವಿರಾಗಿ ...
ಹಸಿರಾಗಿ...
ಚಿಗುರಾಗಿ...
ಮೊಗ್ಗಾಗಿ....
ಈ...
ಹೂವಿನ
ಮೇಲಿನ
ಹನಿ..
ಹನಿಯಾಗಿ.....
ಆ...
ನಿನ್ನ..
ಬೆಚ್ಚನೆಯ..
ಕೆಂದುಟಿಯ..
ನಗುವಾಗಿ.....
Monday, June 7, 2010
ಎಳೆ.. ಎಳೆಯಾಗೀ..ಎಳೆದು...
ನೀ...
ಮರೆ..
ಮರೆಯಾಗಿ..
ಕಳೆ..
ಕಳೆದು..
ಹೋದರೂ....
ಎಳೆ..
ಎಳೆಯಾಗಿ..
ಎಳೆದು..
ಬಳಿ..
ಸೆಳೆದು...
ತೆರೆ..
ತೆರೆಯಾಗಿ..
ತೆರೆದು..
ತರ..
ತರಹದೀ.....
ತಹ
ತಹಿಸಿ...
ತರುವದು...
ನಿನ್ನ.....
ಆ...
ನೆನಪು......!
Thursday, May 27, 2010
ನೋವಾಗಿ... ನಗುವಾಗಿ...ನೆನಪಾಗಿ.....
ಪ್ರೇಮದ...
ತುಮಲಗಳು..
ತುಟಿಯಲಿ..
ಶಬ್ಧವಾಗದೆ..
ಒಳಗೊಳಗೇ..
ಹಿಂಡುವ ....
ಮೂಕ..
ವೇದನೆಯಾಗಿದ್ದರೂ...
ನೀ..
ನನ್ನೊಳಗೆ..
ಕಲ್ಪನೆಯ..
ಕನಸಾಗಿ..
ಭಾವಗಳ..
ಹೂವಾಗಿ..
ಮೃದುವಾಗಿ....
ಹಿತವಾಗಿ....
ಇದ್ದುಬಿಡು....
ಹುಡುಗೀ......
ನನ್ನಲ್ಲಿ.....
ನೋವಿನ ...
ನಗುವಾಗಿ.....
ನೆನಪಾಗಿ....
Sunday, May 16, 2010
ಅಂದಕೆ...ಚಂದಕೆ.. ಮಕರಂದಕೆ...!
ನನ್ನ..
ಹೃದಯದ..
ಭಾವಗಳ..
ಪುಟ್ಟ..
ತೋಟದಲೀ.......
ಸುಂದರ..
ಕನಸಿನ..
ಹೂ..
ಅರಳಿದೆ..
ಬಾ..
ಗೆಳೆಯಾ..
ನನ್ನೀ..
ಅಂದ..
ಚಂದ..
ಈ..
ಮುಖಾರವಿಂದ...
ಕೆಂದುಟಿ....
ಮಕ ರಂದಕೆ.....!!
Sunday, May 2, 2010
ಕಪ್ಪನೆಯ.. ಬೆಡಗಿ.. !
ನಿನ್ನ..
ಮುಂಗುರುಳು..
ಸಿಹಿ..
ನಗು..
ನನ್ನ..
ಮನದಾ
ಳಕ್ಕಿಳಿಯುವ..
ನಿನ್ನ ಚೆಲುವು..
ನೀ..
ಕೊ
ಡುವ..
ಪ್ರತಿಕ್ಷಣದ....
ಪ್ರೇಮದಲ್ಲೂ..
ತಟ್ಟನೆ..
ನೆನಪಾಗಿ..
ಬಿಡುತ್ತದಲ್ಲ.......
ಆ....
ಕಪ್ಪು..
ಬೆಡಗಿಯ...
ದಟ್ಟನೆಯ....
ಕಣ್ಣು.. !!
Thursday, April 29, 2010
ಜಾರುವ ಹನಿಗಳಾಗಿ...
ನಾ...
ನೋಡುವ..
ನೋಟದ..
ಪ್ರೇಮ ಚಂದಿರನಾಗಿ..
ಹೃದಯದ..
ಭಾವಗಳ..
ಹಾಡಾಗಿ..
ನೀನಿರಬೇಕಿತ್ತು..
ಗೆಳೆಯಾ..
ಮರೆಯದ..
ನೆನಪಾಗಿ..
ನನ್ನ..
ಕಣ್ಣಲ್ಲಿ..
ಜಾರುವ
ಹನಿಗಳಾಗಿ ಬಿಟ್ಟೆಯಲ್ಲ....!
Sunday, April 18, 2010
ಬದುಕಿಲ್ಲದ... ಚಿಗುರುಗಳು...
ನನ್ನಲ್ಲಿ..
ನನ್ನ..
ಕನಸಲ್ಲಿ ..
ನೀ,,,
ಇದ್ದರೂ..
ಅವೆಲ್ಲವೂ..
ನನ್ನವು.., ಹುಡುಗಿ...
ನನ್ನೊಳಗೆ..
ಮೊಳಕೆಯೊಡೆದು..
ಚಿಗುರಿದರೂ...
ಬದುಕಿಲ್ಲದ...
ಅವ್ಯಕ್ತ ..
ಭಾವಗಳು..
ಬಚ್ಚಿಟ್ಟ..
ನೋವುಗಳು...
(ದಯವಿಟ್ಟು..ಪ್ರತಿಕ್ರಿಯೆಗನ್ನೂ ಓದಿ...)
Wednesday, March 10, 2010
ನಿನ್ನಾ... ನೆನಪು.....!
ಏಕಾಂತದ ..
ಒಂಟಿತನದ
ರಾತ್ರಿ...
ಬೇಸರದ..
ಬೇಗುದಿಯಲಿ...
ದೂರ
ಗ
ಗನದ..
ಪೂರ್ಣ
ಚಂದ್ರಮನ
ನೋಟದಂತೆ...
ಗೆಳತಿ...
ನಿನ್ನಾ
... ನೆನಪು.....!
Wednesday, March 3, 2010
ಮೊಗ್ಗರಳುತಿದೆ...!
ನಾನು..
ನನ್ನೊಳಗೇ...
ಬೆಳೆಸಿದ..
ಭಾವಗಳು...
ಮೊಗ್ಗರಳುತಿದೆ...
ಸಂಭ್ರಮದಿ..
ಕಾದಿವೆ..
ಕಾತುರದಿ...
ನಿನಗಾಗಿ...
ನನ್ನ...
ಪ್ರೇಮ...
ನಿವೇದನೆಗಾಗಿ...!!
Monday, February 22, 2010
ಬಂದು ಬಿಡ... ಬೇಕಿತ್ತು...!
ಬದುಕ...
ಬೇಕಿತ್ತು...
ಇನ್ನಷ್ಟು..
ಚಂದದ..
"ಬದುಕು"
ಬೇಕಿತ್ತು..
ಎನ್ನುವಾಗಲೇ....
ಬೇಡದ..
ಬಾರದ...
ಬಯಸದ...
ಸಾವು...
ಬಂದು..
"ಬಂಧು..
ಬಂಧ" ...
ಬಿಡಬೇಕಿತ್ತು...!
Saturday, February 20, 2010
ನಿನ್ನಾ.. ನೆನಪು....
ಬೇಸರದ..
ಬೇಗುದಿಯ..
ಒಂಟಿತನದ..
ಏಕಾಂತದಲ್ಲಿ....
ತಣ್ಣನೆಯ..
ತಂಗಾಳಿಯಂತೆ...
ಗೆಳತಿ..
ನಿನ್ನ.. .. ನೆನಪು....!
Wednesday, January 27, 2010
ಮೆತ್ತಗೆ ... ಮುತ್ತಾಗ ಬೇಕಿತ್ತು...!!
ಸಂಜೆ...
ಸೂರ್ಯ ಕೆಳಗಿಳಿಯುವ..
ಕೆಲಹೊತ್ತು....
ನೀರೆ.....
ನೀ...ನಿರಬೇಕಿತ್ತು...
ನಿನ್ನ ..
ಮೌನದ ಜೊತೆ ಕಿವಿಯಾಗಬೇಕಿತ್ತು.....
ಮನದೊಳಗಿನ
ಮಾತು..
ತುಂಬು ಕೆನ್ನಗಳ ಮೇಲೆ..
ತುಟಿಯಿಂದ..
ಮೆತ್ತಗೆ...
ಮುತ್ತಾಗ ಬೇಕಿತ್ತು...
Thursday, January 14, 2010
ಕಣ್ಣಲ್ಲೇ.... ಮುತ್ತಿಡುವಾಸೆ...!
ಕಣ್ಣಲ್ಲೇ...
ಮುಟ್ಟಿ..
ಮುತ್ತಿಡುವಾಸೆ...
ಮೃದು ಕೆನ್ನೆಗಳ ..
ಕಚ್ಚುವಾಸೆ...
ಹವಳದ ತುಟಿಗಳ..
ಸವರುವಾಸೆ...
ಕಂದಾ...
ನಿನ್ನನ್ನು
ಬಾಚಿ
ನನ್ನೆದೆಯಲ್ಲಿ ಹುದುಗಿಕೊಳ್ಳುವಾಸೆ....
(ಪ್ರಿಯ ಓದುಗರೇ..
ನಿಮಗೆಲ್ಲರಿಗೂ..
"ಸಂಕ್ರಮಣದ ಶುಭಾಶಯಗಳು.."
Newer Posts
Older Posts
Home
Subscribe to:
Posts (Atom)