Saturday, November 13, 2010

ಹಾಡಾಗು... ನೀ.. ಹುಡುಗಿ...



ಹಾಡಾಗು.. ನೀ... ಹುಡುಗಿ....
ನನ್ನೊಳಗೆ...
ಹುದುಗಿದ..
ಭಾವಗಳು..
ಗರಿಗೆದರಿ..
ಗಗನದಿ.. 
ಹಾರುವಂತೆ...

ಹಾಡಾಗಿ.. 
ಹಾಡು.... ನೀ.. ಹುಡುಗಿ...
ಹೃದಯ..
ಹಿಂಡಿ ...
ಹಿಡಿದಿಡಲಾಗದ ..
ಕನಸುಗಳು....
ನೋವಾಗಿ... 
ನಗುವಂತೆ......

ಹಾಡಾಗಿ...
ಹಾಡು ... ನೀ.. ಹುಡುಗಿ...
ನೀ..
ಹರಿ.. 
ಹರಿದುಹೋಗು .. 
ನಿರಾಸೆಗಳ..
ನೆನಪಾಗಿ.. 
ಹನಿ ...
ಹನಿಗಳಾಗಿ..

ಹಾಡಾಗಿ.. 
ಹಾಡು... ನೀ.. ಹುಡುಗಿ....




24 comments:

  1. ನೀ ಹರಿ
    ಹರಿದು ಹೋಗು..
    ನಿರಾಸೆಗಳ ನೆನಪಾಗಿ...
    ನಿರಾಸೆ ಹರಿದು ಹೋಗಬೇಕೆನ್ನುವ ಪ್ರಯೋಗ ಇಷ್ಟವಾಯಿತು..ನಿರಾಸೆ ಮಾಯವಾಗು..ಅನ್ನೋದಕ್ಕಿಂತ ಹರಿದು ಹೋಗು..ಸಮಂಜಸ ಏಕೆಂದರೆ ಹರಿಯುವ ನದಿ ಮತ್ತೆ ಹೊಸ ನೀರಿನೊಂದಿಗೆ ಬರಬಹುದು..ಅಂದರೆ ಪ್ರತಿ ಆಸೆಗೆ ನಿರಾಸೆಯ ಸಾಧ್ಯತೆ ಇದೆ ಎನ್ನುವುದರ ಇಂಗಿತ ವ್ಯಕ್ತವಾಗುತ್ತೆ...ಚನ್ನಾಗಿದೆ..ಪ್ರಕಾಶ್...

    ReplyDelete
  2. ಆಜಾದು...

    ಹರಿದು..
    ಹೋದ...
    ಸಂಬಂಧದಿ..
    ಹರಿಯುವದು..
    ನಿರಾಸೆಗಳು..
    ಹನಿ..
    ಹನಿಗಳು..
    ನೆನಪಾಗಿ...

    ಇಷ್ಟಪಟ್ಟಿದ್ದಕ್ಕೆ ಜೈ ಹೋ ಗೆಳೆಯಾ...

    ಭಾರತಕ್ಕೆ..
    ನಮ್ಮ ನಾಡಿಗೆ ಸ್ವಾಗತ..

    ReplyDelete
  3. superb!!! hani haniyagi ilida hani :)

    ReplyDelete
  4. ಪ್ರಕಾಶಣ್ಣ;ಸುಂದರ ಹನಿಗಳು.
    ಹೃದಯ ಹಿಂಡಿ
    ಹಿಡಿದಿಡಲಾಗದ
    ಕನಸುಗಳು
    ನೋವಾಗಿ
    ನಗುವಂತೆ!
    ಮೇಲಿನ ಸಾಲುಗಳು ಅರ್ಥವಾಗಲಿಲ್ಲ.ನಲಿವಾಗಿ ನಗುವಂತೆ ಇದ್ದರೆ ಚೆನ್ನಲ್ಲವೇ.
    ಕವಿಯ ಮನಸ್ಸು ಏನೆನ್ನುತ್ತದೆ?

    ReplyDelete
  5. ಪ್ರಿಯ ಸಂದೇಶ್...

    ಅಗಲಿದ
    ಹುಡುಗಿಯ..
    ಪ್ರೀತಿಯ
    ನೆನಪು.. ನೋವಾದರೂ...
    ನಗುವದಿದೆಯಲ್ಲ...

    ಅಂಥಹ ಹಾಡಾಗು.. ಹುಡುಗಿ...
    ನೀ...
    ಹಾಡಾಗು...

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು... ಸಂದೇಶ್...

    ReplyDelete
  6. Super Sir....
    Wah kya GEETH hai !!!

    ReplyDelete
  7. ಚಿಕ್ಕ ಚಿಕ್ಕ ಹನಿಗಳನ್ನು ಚೊಕ್ಕವಾಗಿ ಜೋಡಿಸಿ ಸು೦ದರ ಕವನ(ಭವನ) ನಿರ್ಮಾಣ ಮಾಡಿದ್ದೀರಿ ಪ್ರಕಾಶ್ ಸರ್. (ಭವನ ನಿರ್ಮಾಣ ಮಾಡುವ ಪ್ರೊಫೆಷನ್ ಅಲ್ಲವೆ ತಮ್ಮದು...).. ಧನ್ಯವಾದಗಳು. ಸರ್.


    ಅನ೦ತ್

    ReplyDelete
  8. ರಂಜಿತಾ...

    ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು..

    ಹಾಡಾಗು..
    ನೀ ಹುಡುಗಿ..
    ನನ್ನೊಳಗೆ
    ಬಚ್ಚಿಟ್ಟ
    ಭಾವಗಳಿಗೆ...
    ನೀ ..
    ರಾಗವಾಗು.... ಹಾಡಾಗು..

    ReplyDelete
  9. ವಿ,ಆರ್.ಭಟ್ ಜೀ...

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ಹಾಡಾಗಿ..
    ಹಾಡು.... ನೀ.. ಹುಡುಗಿ..
    ನಾ..
    ಆಡದ..
    ಮಾತುಗಳಿಗೆ..
    ನನ್ನೊಳಗೇ..
    ಉಳಿದುಹೋದ..
    ಭಾವಗಳಿಗೆ...

    ಹಾಡಾಗು.. ನೀ.. ಹುಡುಗಿ..

    ReplyDelete
  10. ಚೆನ್ನಾಗಿದೆ ಸರ್.ಅಮ್ಮಾವ್ರು ಕೋಪಿಸಿಕೊಂಡಾರು ಜಾಗ್ರತೆ:-)

    ReplyDelete
  11. ಪ್ರೀತಿಯ ತರುಣ್...

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ಹಾಡಾಗು.. ನೀ.. ಹುಡುಗಿ..
    ನೀ..
    ನಿನ್ನ..
    ಕಣ್ಣಲ್ಲೇ..
    ಮೂಡಿಸಿದ..
    ನವಿರಾದ..
    ಭಾವಗಳು..
    ಇಂಗಿ..
    ಹೋಗುವ ಮುನ್ನ...

    ಹಾಡಾಗಿ..
    ಹಾಡು.. ನೀ.. ಹುಡುಗಿ...

    ReplyDelete
  12. tumbaa sundaravaada chitra prakaashannna ..:) saalugalu kooda:)

    ReplyDelete
  13. Bellaneya
    Hrudaya Vaishaalyda
    Shubhra Kangala Hudugiya
    Kannalli Madugattida
    Hanigalu keluttive
    Baruvudendu badukinalli
    santasada dinagalu...???
    Avu barade iddare innentu....

    ReplyDelete
  14. ತುಂಬಾ ಸುಂದರವಾದ ಫೋಟೋ ಪ್ರಕಾಶಣ್ಣ ,
    ಒಂಟಿ ಹಕ್ಕಿಯ ಹಾಡಿಗೆ ಸೂಕ್ತವಾಗಿದೆ.
    ಕವನ ಕೂಡ .. ( ಆದರೆ , ಎಷ್ಟು ಸಲ ಅದನ್ನೇ ಅದನ್ನೇ ಬರೆಯದು ನಾನು ? ಚೊಲೋ ಇದ್ದು , ಚಂದ ಇದ್ದು, ಸುಂದರವಾಗಿದ್ದು ಹೇಳಿ ...... ಶಬ್ದ ಬೇರೆ , ಅನಿಸಿಕೆ ಒಂದೇ ..)

    ReplyDelete
  15. ಗೆಳತಿ
    ನಿನ್ನ ಕೂಗಿ ಕರೆದಿದ್ದು
    ನನ್ನೆದೆಯ ಒಲವ ಮಿಡಿತ
    ವೈಣಿಕನ ವೀಣೆ ತಂತಿಯಲ್ಲ

    ನನ್ನನೇ ನಾ ಮರೆಯುವಷ್ಟು
    ನಿನ್ನ ನೆನಪು ಜೊತೆಯಿದೆ
    ದೇವರಾಣೆ ನಾನು ಒಂಟಿಯಲ್ಲ

    ಚೆಂದದ ಚಿತ್ರ ಮತ್ತು ಸಾಲುಗಳು ಪ್ರಕಾಶಣ್ಣ

    ReplyDelete
  16. ಮನಮುಕ್ತಾರವರೆ...

    ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು....

    ನನ್ನಾಸೆ..
    ನಿರಾಸೆಗಳ
    ವೇದನೆಯ..
    ನೀವೇದನೆಯಾಗಿ..

    ಕಣ್ಣ..
    ಹನಿ.. ಹನಿಗಳ..
    ದನಿಯಾಗಿ...

    ಹಾಡಾಗಿ
    ಹಾಡು ... ನೀ.. ಹುಡುಗಿ..

    ReplyDelete