Tuesday, November 30, 2010

ನೀ.. ನನ್ನ ಆಕಾಶ .. ಕಣೇ...

ಕರಿ...
ಮೋಡ..ಕವಿದು... 
ಹನಿ ...
ಹನಿ.. ಸುರಿದರೂ..

ನೀರಸದ...
ನಿರಾಸೆಯಲ್ಲೂ 
 ಆಶಾ ... 
ಚಿಗುರಿಸುವ   ಚಿತ್ತಾರ ...

ಬಿಳಿ.. 
ನೀಲಿ..
ಬಾನಿನ...
ಬಾಳಿನಂಗಳದಿ...


ಈ..
ನಿನ್ನ..
ಸ್ನೇಹ..

ಗೆಳತೀ.....
ನೀ...
ನನ್ನ .. "  ಆಕಾಶ   "... ಕಣೇ....!




Wednesday, November 24, 2010

ಎಳೆ..ಬಿಳಿ ..ಬಿಸಿಲು ..


ಎಳೆ..
ಎಲೆ..
ಎಲೆಗಳಂಚಿಂದ...
ಬಿಳಿ 
ಬಿಸಿಲು ...
ಎಳೆಯೆಳೆಯಾಗಿ..
ಇಳೆಗಿಳಿದು..
ಬಳಿ..
ಬರಸೆಳೆದು....
ಮೆಲ್ಲ... ಗೆ....
ಕೊಡುತ್ತಿರುವೆಯಾ.. 

ಗೆಳೆಯಾ....

ಈ...
ಬೆಳ್ಳ..
ಬೆಳಗಿನ..
ಬೆಚ್ಚನೆಯ ..
ಅಪ್ಪುಗೆಯಲ್ಲಿ......
ತುಟಿ 
ಚಪ್ಪರಿಸುವ..
ಸಿಹಿ...
ಚುಂಬನಾ...!!





Saturday, November 13, 2010

ಹಾಡಾಗು... ನೀ.. ಹುಡುಗಿ...



ಹಾಡಾಗು.. ನೀ... ಹುಡುಗಿ....
ನನ್ನೊಳಗೆ...
ಹುದುಗಿದ..
ಭಾವಗಳು..
ಗರಿಗೆದರಿ..
ಗಗನದಿ.. 
ಹಾರುವಂತೆ...

ಹಾಡಾಗಿ.. 
ಹಾಡು.... ನೀ.. ಹುಡುಗಿ...
ಹೃದಯ..
ಹಿಂಡಿ ...
ಹಿಡಿದಿಡಲಾಗದ ..
ಕನಸುಗಳು....
ನೋವಾಗಿ... 
ನಗುವಂತೆ......

ಹಾಡಾಗಿ...
ಹಾಡು ... ನೀ.. ಹುಡುಗಿ...
ನೀ..
ಹರಿ.. 
ಹರಿದುಹೋಗು .. 
ನಿರಾಸೆಗಳ..
ನೆನಪಾಗಿ.. 
ಹನಿ ...
ಹನಿಗಳಾಗಿ..

ಹಾಡಾಗಿ.. 
ಹಾಡು... ನೀ.. ಹುಡುಗಿ....