Wednesday, April 25, 2012

ಕಣ್ಮುಚ್ಚಿ ಬಾ...ಗೆಳೆಯಾ..ಬೆಳ್ಳಿ ಮೋಡದಾಚೆ ..!!

ಹಸಿರು..
ಹಳದಿ ರಂಗಿನ...
ಬಣ್ಣ 
ಬಣ್ಣದ  ಕನಸು ಕಟ್ಟುವೆ...
ಬಾ...

ಬಾರೋ..
ಬಾ..  ಗೆಳೆಯಾ ..
ಕಣ್ಮುಚ್ಚಿ..
ಬೆಳ್ಳಿ ಮೋಡದಾಚೆ  ..

ನೀಲಿ ಗಗನದ..
ನನ್ನ...
ಪ್ರೇಮ ಸೆರಗಿನಂಚಿನಲಿ...



Wednesday, April 4, 2012

ನನ್ನ ಕತ್ತಲೆಯ .. ತಾರೆಗಳ ಜೊತೆಯಲ್ಲಿ...

ಬಣ್ಣವಿಲ್ಲದ
ಗೆರೆಗಳು..
ರಂಗು  ರಂಗಿನ  ಚಿತ್ತಾರವಾಗುತ್ತಿವೆ..

ನನ್ನ 
ಕತ್ತಲೆಯ ..
ತಾರೆಗಳ  ಜೊತೆಯಲ್ಲಿ...
ನಿನ್ನ
ಮುಗುಳು  ನಗೆಯನ್ನು  ಬಿಡಿಸುತ್ತಿವೆ...

ಏಯ್ ..ಹುಡುಗೀ..

ಎಷ್ಟೆಲ್ಲ..
ಮಾತುಗಳು ..
ಉಳಿದು  ಬಿಟ್ಟಿವೆಯಲ್ಲೆ.....
ಇನ್ನೂ..
ಒಂಟಿಯಾಗಿ...
ಒಳಗೊಳಗೆ..  ನನ್ನೊಳಗೆ...!!