Wednesday, September 17, 2014

ಕಂಗಳಲಿ ನಾಚಿ.. ರಂಗಾದ ಮುತ್ತು...

ತುಟಿಗೆ
ಬಾರದ ಮಾತು
ಭಾವ...

ನನ್ನೆದೆಯ 
ಢವ 
ಢವದಲಿ ಹುದುಗಿ ಹೋಗುವ ಮುನ್ನ...


ಕೆನ್ನೆಯಲಿ ನಾಚಿ  ರಂಗಾಗಿ..
ಈ 
ನಿನ್ನ 
ಕಂಗಳಲಿ
ಮುದ್ದಾದ 
ಮುತ್ತಾಗಬಾರದೇನೆ ಹುಡುಗಿ... ?
ರೂಪದರ್ಶಿ :::::: "ಕುಮಾರಿ ಅರ್ಪಿತಾ "
                           ಯಕ್ಷಗಾನ ಪ್ರತಿಭೆ 

Friday, September 5, 2014

ಬೆಳ್ಳಿಚುಕ್ಕಿ... ಮಿನುಗು ತಾರೆಗಳ ತಾರೆ... ನೀ ತಾರೆ... !

ಬಾ 
ಬಾರೆ ಹುಡುಗಿ 
ಭಾವ 
ಬಂಧನಕೆ ಭಾವವಾಗಿ..  

ನನ್ನೆದೆಯ ಮೌನದಲಿ
ನೀ
ಮೌನವಾಗಿ...

ತೇಲು
ಕನಸುಗಳ ರೆಕ್ಕೆಯಾಗಿ..

ನನ್ನ
ಕತ್ತಲ
ಮಾತಲಿ  ಮಿನುಗುವ
ಬೆಳ್ಳಿಚುಕ್ಕಿ 
ತಾರೆಗಳ ತಾರೆ... 
ನೀ
ತಾರೆ...

ಬಾ 

ಬಾರೆ ಹುಡುಗಿ 
ಭಾವ ಗೀತೆಯಾಗಿ.. 
                                                    ರೂಪದರ್ಶಿ  :::  " ಕುಮಾರಿ ಅರ್ಪಿತಾ "
                                                                               ಯಕ್ಷಗಾನ ಪ್ರತಿಭೆ