Thursday, December 22, 2011

ಒಂಟಿ.. ಮೌನದಲಿ .. ಪಿಸು ಮಾತಾಗಿ...!!


ಹಗಲಿನ..
ಹುಚ್ಚಾಸೆಗಳಿಗೆ..
ಸಂಜೆ.. ರಂಗಿನ ಬಣ್ಣ ಬಳಿದು..

ಬೆಳದಿಂಗಳ ..
ತಾರೆ ..
ಚಂದಿರನ ಕನಸು .. ಕೊಟ್ಟು.. 

.. ಕಾಡುವೆಯಲ್ಲ ..
ಒಂಟಿ..
ಮೌನದಲಿ ..
ಪಿಸು ಮಾತಾಗಿ...
ಕೆನ್ನೆಯಲಿ ನಾಚಿಕೆಯ ಬಣ್ಣ ಬಳಿದು..!

Tuesday, December 20, 2011

ನಿನ್ನ .. ನೆನಪದು.. ಹೂವಾಗಲಿ..ಅಳಿದುಳಿದ..
ಭಾವದೆಳೆಗಳ..
ಎಳೆದೆಳೆದು ಅಳಿಸಬೇಡ..
ಉಳಿಯಲಿ ಬಿಡು..

ಹುಡುಗಿ..

ಅಳಿಸಿದರೂ..
ಮೂಲೆಯಲಿನ..
ನೆನಪು..
ಹನಿ ..
ಮೊಳಕೆಯೋಡೆಯಲಿ...ಚಿಗುರು ಚಿಗಿಯಲಿ..

ನಿನ್ನ ..
ನೆನಪದು ಹೂವಾಗಲಿ.. 
ನನ್ನೊಳಗೆ..
ಒಂಟಿ..
ಕತ್ತಲ ಮೌನ..
ಏಕಾಂತದೆದೆಯಲಿ..
ಒಳಗೊಳಗೆ.. ಒಳಗೊಳಗೆ..


Saturday, December 17, 2011

ಮುಸುಕಿನೊಳಗಿನ .. ಮಾದಕ.. ಮೌನ ...


ತುಟಿಗೆ...
ಬಾರದ ..
ಭಾವ ಸಂಕೋಚ..
ಪ್ರೀತಿ.. 
 ಹನಿ ಹನಿಗಳಾಗಿ..

ಮುಂಜಾನೆಯ .. 
ಮಂಜಿನ ಮುಸುಕಿನೊಳಗಿನ  ..
ಮೌನ ..
ಮಾದಕ..
ಮೋಹಕ  ಮಾತಿನಂತೆ....

ಅಲ್ಲಗಳೆಯದೆ..
ಬಾ..
ಎನ್ನ ಆಲಿಂಗನಕೆ..
ಅರೆ 
ಬೆಚ್ಚನೆಯ ..
ಭರವಸೆಯ   ಕನಸುಗಳಂತೆ..!
Wednesday, December 14, 2011

ನೀನಿದ್ದೆ .. ನನ್ನ ಇಂದು.. ನಿನ್ನೆಗಳಲಿ..


ಹೂ ..
ನಗುವಾಗಿ..
ಸುಂದರ  ಕನಸಿನಂತೆ...
ನೀನಿದ್ದೆ ...
ನಾ ..
ಕಳೆದ..
ಇಂದು..  ನಿನ್ನೆಗಳಲಿ..

ಅರಿಯದೆ..
ಅಳಿವ..
ನನ್ನ.. 
ಅಳಿದುಳಿದ  ನಾಳೆಗಳಲಿ ...

ಅಳು ..
ನೋವುಗಳ ..
ಅನಿವಾರ್ಯಗಳ....
ಹೇಗೆ  ನೋಡಲೇ  ನಾನೊಬ್ಬನೆ...
ಒಬ್ಬಂಟಿಯಾಗಿ.....
... ... ..
Tuesday, December 6, 2011

ನೀರಾಗಿಸುವೆ ನಿನ್ನೆಲ್ಲ ನಿರಾಸೆಗಳನು....!


ಅನುಮಾನ..
ಬಿಟ್ಟು..
ಮನಗೊಟ್ಟು..
ನಿನ್ನೊಳಗಿನ ದುಗುಡ ದುಮ್ಮಾನಗಳ ..
ಬಿಸಿ..
ಬೇಗೆಗಳ  ಮೋಡಗಳ ಹೊತ್ತು..
ಬಾ...

ಹನಿ..
ಹನಿಗಟ್ಟಿಸಿ..
  ನೀರಾಗಿಸುವೆ  ನಿನ್ನೆಲ್ಲ  ನಿರಾಸೆಗಳನು..
ಪ್ರೇಮ ಸಾಗರದಲಿ....

ನಲ್ಲೆ..
ಈ..
ನೀಲಿ  ಗಗನ ....
ನನ್ನೆದೆಯ  ಪ್ರೀತಿ  ಕಣೆ...!


Friday, December 2, 2011

ಹನಿ ಹನಿ. ಮುತ್ತುಗಳಾಗಿ ಮುದ್ದಾಡುವೆ..!


ನಾ...
ಆವಿಯಾಗಿ ಹೋದರೂ..

ಮತ್ತೆ..
ಮತ್ತದೇ....  ಹನಿ..
ಹನಿಗಳಾಗಿ.. 

ಮುತ್ತು..
ಮುತ್ತುಗಳಾಗಿ  ಮುದ್ದಾಡುವೆ..
ನಿನ್ನ..
ಕೆನ್ನೆಯಲಿ  ಮುದ್ದು  ನಾಚಿಕೆಯಾಗಿ...!


Tuesday, November 29, 2011

ಪಿಸುಮಾತು... ಮೃದು ಕೆನ್ನೆಯ ಮೇಲೆ.. !


ಹುಸಿ..
ಮುನಿಸು..
ತುಟಿಗಳಲಿ....
ತುಸು ..
ನಸು ನಗುವ ಹನಿಸು..


ಮೆಲ್ಲಗೆ..
ಬಿಸಿಯುಸಿರ ಪಿಸುಮಾತಲಿ..
ಮೃದು..
ಕೆನ್ನೆಯ ಮೇಲೆ..  .. !

ನಲ್ಲೆ..
ಬರೆಯಲೇನೆ..
ನಮ್ಮ ಪ್ರೇಮ ಕವಿತೆ..
ಹನಿ..
ಹನಿ ಮುತ್ತುಗಳಾಗಿ ...?
Sunday, November 27, 2011

ಕತ್ತಲಲಿ .. ಕಟ್ಟಲಾಗದ ಕನಸುಗಳು..


ಹೊತ್ತು..
ಹೊತ್ತು ಇಳಿದರೂ.. ..
ಅಳಿಯದೆ..
ಒಳಗುಳಿದ ನೆನಪುಗಳು .. 
ಮತ್ತೆ..
ಮತ್ತೆ  ಮರೆಯದೇ.. ಮರಳುವದು.. 

ಇಲ್ಲದಿರುವ..
ಇರುವುಗಳ .. 
ತರುವ ..
ಮರುಳು ಇರುಳಿನ ನೆರಳ  ಹಾಗೆ..

ಕತ್ತಲಲಿ ..
ಕಟ್ಟಲಾಗದ  ಕನಸುಗಳು..
ಕರಗಿ.... 
ಕೊರಗಿ ಕೊನರುವದು.. ..
ನಿನ್ನ ..
ಕನವರಿಕೆಗಳೇ.... ಹೀಗೆ...


Sunday, November 20, 2011

ನಲ್ಲೇ .. ನಾನಲ್ಲಿರಲಿಲ್ಲ...!!!


ಅರಳು..
ಹುರಿದಂತೆ..ಮರಳು ಮಾಡುವ 
ನಿನ್ನ ..
ಮಾತಿಗೆ..ಕಿವಿಯಾಗಿದ್ದರೂ..

ನಲ್ಲೇ .. ನಾನಲ್ಲಿರಲಿಲ್ಲ...!

ತುಟಿಗಳ..
ಅಂಚಲ್ಲಿ ಮಿಂಚು ಹರಿವ..
ಮುಂಗುರಳ..
ಕೆನ್ನೆಗಳ .. ನಾಚಿಕೆ ರಂಗಿನ..
ಕತ್ತಿನಡಿ .. 
ಸುತ್ತ ..
ಮತ್ತಿನ ಮುತ್ತುಗಳಾಗಿ...

ನನ್ನೊಳಗೇ...
ನಿನ್ನಂದ.. ಚಂದಗಳ.. ಆನಂದವಾಗಿ..
ಕಣ್ ..
ಮುಚ್ಚಿದ್ದೆ.. ಕಣೆ ...

ನಲ್ಲೇ ..... ನಾ ನಲ್ಲಿರಲಿಲ್ಲ... !!! 

Saturday, November 19, 2011

ಹತ್ತಾಸೆ ಬಯಕೆಗಳ ಹೊತ್ತ.. ಬೆಳ್ಳ ಬೆಳಗಿನ ಕನಸು ...


ಗುಳಿಕೆನ್ನೆ..
ಮುದ್ದು ಗಲ್ಲಗಳ ಮುದ್ದಾಗಿ...
ಕಣ್ಣು..
ತುಟಿಗಳ  ಮುಗುಳು  ನಗುವಾಗಿ..


ಇಲ್ಲೇ..
ನಿನ್ನೊಳಗಿನ...
ನಿತ್ಯ..
ಪ್ರೀತಿ  ಕ್ಷಣಗಳ  ಸಾಕ್ಷಿಯಾಗಿ...

ಹತ್ತಾಸೆ.. 
ಬಯಕೆಗಳ ಹೊತ್ತ..
ಬೆಳ್ಳ..  
ಬೆಳಗಿನ  ಕನಸಾಗಿ ..
ನಿನ್ನ ..
ಹೊಸ ಪ್ರೇಮದ ಗುಂಗು ನಾನಾಗಲೇನೆ ಹುಡುಗಿ....?


Wednesday, November 16, 2011

ನೀ.. ಅಂದ ... ಅಂದು.. ನೀನಂದ ಮಾತು...!ತುಟಿ ಕಚ್ಚಿ..
ಸೇರಗಿನಂಚನು ಬೆರಳ ತುದಿಗೆ ಸುತ್ತಿ..
ನಿನ್ನಾಸೆಯ ...
ಮೌನ ಭಾಷೆಯ ..
ಆ.. 
ತುಂಟ   ಕಿರುನೋಟ ..

ನೀನಿಲ್ಲದಿರೂ  ..
ನೀ...  ಅಂದ ...
ನೀನಂದ ಮಾತು..
ನಿನ್ನೊಡನೆಯ  ಕಳೆದ  ಕ್ಷಣಗಳಿವೆಯಲ್ಲೇ..


ನಲ್ಲೆ.. ನನಗಿಷ್ಟು ಸಾಕು ಕಣೆ..

ನನ್ನ ..
ತುಟಿಗೆ ಬಾರದ ..
ನೀಲಿ.. ಹಸಿರು ಹಾಸಿನ ..
ರಂಗು 
ರಂಗಿನ  ನೆನಪು  ಕನಸಿನ  ಚಿಗುರಿಗೆ.....

Friday, November 11, 2011

ಹಗಲಲಿ ಹೆಗಲೇರಿ ಬರುವದು.. ನಿನ್ನ ಪ್ರಿತಿ....


ಕನವರಿಕೆಯ ಕನಸಲಿ...
ತಾರೆಗಳ..
ತೇರನೇರಿ..
ಚಂದ್ರಮನೂ ಗುನುಗಿದನಲ್ಲೇ....
ನಿನ್ನಂದ 
ಚಂದದ ಹಾಡು..!

ಈ..
ಚುಮು ಚುಮು
ಬೆಳಗಲ್ಲೂ..
ನೆರಳಾಗಿ ಬರುವದು..
ನೀನಿತ್ತ..
ಸಿಹಿ..ಚುಂಬನದ ನೆನಪು...!

ಗೆಳತಿ..
ಕತ್ತಲಲಿ ಕಳೆದು ಹೋಗದು....
ಹಗಲಲಿ
ಹೆಗಲೇರಿ ಬರುವದು..
ನಿನ್ನ ..
ಪ್ರಿತಿಯಿದು ಸದಾ ಹಸಿರು..
ನನ್ನೊಳಗಿನ ಉಸಿರು...
Monday, November 7, 2011

ನಿರೀಕ್ಷೆಗಳೇ.. .. .. ಚಂದ...!

ಬರುವ  ಮುನ್ನ...
ನೀ...
ಹುಟ್ಟಿಸುವ..
ಹತ್ತಾರು ಹುಚ್ಚಾಸೆಗಳ..
ಆ...
ನಿರೀಕ್ಷೆಗಳೇ.. 
ಬಲು ..
ಚಂದ  ಗೆಳೆಯಾ...!!


Wednesday, November 2, 2011

ಕನಸುಗಳೇ ಹೀಗೆ... ಗೆಳೆಯಾ.. ಈ ಕ್ಷಣಕ್ಕಷ್ಟೇ ಚಂದ... !!


ಮುಂಜಾವಿನ ಮಂಜಲ್ಲಿ..
ಹನಿ..
ಹನಿ  ಗಟ್ಟಿಸಿ..
ಆರಿ ..
ಹೋಗುವ  ಹಾಗೆ..

ಚುಮು..
 ಚುಮು  ಛಳಿಯ..
ಬೆಚ್ಚನೆಯ ಚಾದರದೊಳಗೆ ..
ಬೇಕು ಬೇಕೆನಿಸುವ..
ನಿನ್ನ ..
ಮುದ್ದು .. 
ಮುದ್ದಿಸುವ  ನೆನಪುಗಳು..

ನೀ..
ಕಟ್ಟಿಕೊಡುವ ಕನಸುಗಳೇ ಹೀಗೆ...
ಗೆಳೆಯಾ..
ಈ ..
ಕ್ಷಣ...  ಕ್ಷಣಕ್ಕಷ್ಟೇ.. ಚಂದ... !!

Monday, October 31, 2011

ತುಟಿಯಂಚಿನ.. ಮೌನಗಳ ನಗು ....!


ನನ್ನ ..
ತುಟಿಯಂಚಿನ.. 
ಮೌನಗಳ.. 
ನಗು ..


ಈ..
ಕಣ್ಣೊಳಗಿನ ಭಾಷೆ...

ನಾ..
ಹೇಳಲಾಗದ..
ನನ್ನೊಳಗಿನ..
ನಿಶ್ಯಬ್ಧ..
ಭಾವಗಳ ಮಾತುಗಳೇ.. ನೀನು..!Friday, October 28, 2011

ಈ.. ಸಂಜೆ ಸರಿದು ಹೋಗುವ ಮುನ್ನ..!


ನಿನಗಾಗಿ..
ಬಿಡಿಸಿಡುವೆ ನಿನ್ನೊಲವಿನ..
ರಂಗು..
ರಂಗಿನ ರಂಗೋಲಿ..
ಬಾ..
ಗೆಳೆಯ..
ನೀ .. 
ನಿತ್ಯ..
ಸಂಜೆಯ ..
ಸೆರಗು ಸರಿದು ಹೋಗುವ ಮುನ್ನ..

Sunday, October 23, 2011

ನಿನ್ನ.. ಕಣ್ಣಂಚಿನ ಭಾವ..


ಪ್ರೀತಿಯೆಂದರೆ..
ಚುಮು ಚುಮು..
ಮುಸುಕಿನಲೂ ಮಸುಕಾಗದ  ...
ಬೆಳಕು.. 
ಹನಿ...
 ಮೂಡಿಸುವ  ಮೋಹಕ..
ಆಶಾಭಾವ...

ಪ್ರೀತಿಯೆಂದರೆ..
ನೀ..
ನುಡಿಯದೆ..
ನನ್ನೊಳಗೊಳಗೆ  ಮಿಡಿಯುವ..
ನಿನ್ನ..
ಕಣ್ಣಂಚಿನ... ಭಾವ..Wednesday, October 19, 2011

ಬೆಳಕಿನ ಸೆರಗಿನಂಚಿನಲಿ....ಈ..
ಸಂಜೆ  ತಿಳಿಗತ್ತಲಲಿ..
ಜಾರು..
ಜಾರುವ..
ಬೆಳಕಿನ ಸೆರಗಿನಂಚಿನಲಿ..

ಬೇಕು..ಬೇಕೆನಿಸುವ ..
ಈ..
ಸನಿಹದಲಿ..
ಹೇಳಲಾಗದೆ..ಸೋತಿರುವ 
ನನ್ನ.. 
ಮಾತುಗಳು.. ಶಬ್ಧಗಳು..

ನಿನ್ನ..
ಕಣ್ಣಂಚಿನ ಭಾವಗಳು ..
ಮಧುರ..
ಮೌನ ಸಂಭಾಷಣೆಗಳು..  
ಬಲು ..
ಇಷ್ಟ ಕಣೆ.. ಹುಡುಗಿ.. !!Tuesday, October 18, 2011

ನಿನ್ನೆದೆಯ ಹರವಿನಲಿ.. ಬೆಚ್ಚ ಬೆಳಗಿನ ಹಾಡು ..

ಹನಿ..
ಹನಿಗಳ ನಸುಕಲಿ..
ಮಂಜು..
ಮುಂಜಾವಿನ  ಮುಸುಕು..

ನಿನ್ನೆದೆಯ
ಹರವಿನಲಿ..
ಬೆಚ್ಚ ಬೆಳಗಿನ  ಹಾಡು ..
ನಾ ..
ಕೇಳಬೇಕಿದೆ.. ಗೆಳೆಯಾ...

ನೀ..
ಎಂದಿಗೂ ಅಲುಗದ..
ಬದುಕಿನಾಳದ ..
ಭರವಸೆಯ ಆಲಿಂಗನವಾಗಿ  ...
ಬಾ.. 
ಗೆಳೆಯಾ... ಬಾ....Thursday, October 13, 2011

ಮೊಳಕೆ ಪ್ರೇಮ ಕಣೆ .... !


ನಿನ್ನ..
ನೆನಪದು ..
ಕಾವು...
ಬೆದೆಯೊಡೆವ..
ಬೀಜ..


ಹಸಿ..
ಹಸಿರೆಲ್ಲ  ಮರವಾಗದು..


ಆಗಾಗ..
ಚಿಗುರೊಡೆದು..
ಮೇಲೇಳದ..
ಮೊಳಕೆ  ಪ್ರೇಮ  ಕಣೆ   ನನ್ನದು... !


ಚಿತ್ರ   ಗುರು ದಿಗ್ವಾಸ್..

Wednesday, October 12, 2011

ನಿನ್ನ.. ಪ್ರೇಮದ ಬೇರು..ನಿನ್ನ..
ಪ್ರೇಮದ ಬೇರು..
ಇಳಿಯಲಿ .
ಬಿಡು..
ನನ್ನೆದೆಯೊಳಗೆ..

ನೀರು ...
ಗೊಬ್ಬರ  ನೀಡುವೆ..
ಬೆಳೆದು ..
ಹೆಮ್ಮರವಾಗಲಿ..

ಹೂ.. 
ಮೊಗ್ಗುಗಳ  ಕಂಪ  ಹೊತ್ತು..

ತಂಪನ್ನೆರೆಯಲಿ..
ಈ....
ಪ್ರೀತಿಯ  ನೆರಳು..
ತಂಗಾಳಿಯಾಗಿ..
ನನ್ನ.. 
ಬಾಳ ಬಿಸಿಲ  ಬೇಗೆಯಲಿ...!Tuesday, October 11, 2011

ಭಾವ .. ನವಿಲಿನ.. ನಲಿವಾಗಿ..!ಜುಳು 
ಜುಳು ಹರಿವ..
ಪ್ರೇಮ..
ಮೌನ ... ಮನದ ಹಾಡಾಗಿ...

ನಿನ್ನ..
ಭಾವ ..
ನವಿಲಿನ ... ನಲಿವಾಗಿ..
ನಾ..
ಗರಿಗೆದರುವ..
ಗರಿಯಾಗಿ..

ಬಾ..
ಕರೆದೊಯ್ಯುವೆ ... ಬಾನಲ್ಲೆ..
ನನ್ನ..
ಪ್ರೇಮ..
ಬಾನಿನಂಗಳಕೆ..!


ಛಾ ಯಾ  ಚಿ ತ್ರ   ದಿಗ್ವಾಸ್

Monday, October 10, 2011

ಹೂ.. ಕೆನ್ನೆಗಳ ಮೇಲೆ..ಕಣ್ಣು
ಬಯಸಿದ..
ಹೃದಯ ಪೂಜಿಸಿದ..

ಈ..
ಹೂ..
ಕೆನ್ನೆಗಳ ಮೇಲೆ..
ಬಿಸಿಯುಸಿರ ರಂಗೇರಿಸಿ..

ನಾ..
ಕಟ್ಟಿ ..
ಕೊಡಲೇನೆ  ನಲ್ಲೆ..
ನಿನ್ನ..
ಕತ್ತಿನ  ಮೇಲೆ..
ನನ್ನ ..
ಸಿಹಿ ಮುತ್ತುಗಳ ಮಾಲೆ ?...


Tuesday, September 27, 2011

ಹಸಿರು ಮೌನದ.. ಮಾತುಗಳಂತೆ...!ಕಣ್ಣು...
ಗುಳಿ ಕೆನ್ನೆ.. ತುದಿ ಗಲ್ಲದಲಿ...
ನಿನ್ನ..
ಹೂ ...
ನಗುವಾಗಿ...

ಈ...
ಹಸಿರು ಮೌನದ..
ಮುಗಿಯದ..
ಮಾತುಗಳಂತೆ...

ನಾ...
ನಿನ್ನಂದದ ಚಂದದ...
ನಿನ್ನಿಷ್ಟದ ...
ಬಣ್ಣಗಳಾಗಿ..


ನಲ್ಲೆ..
ನಿನ್ನೊಳಗೇ..
ನಾನಾಗಿ..
ನಾನಿದ್ದುಬಿಡಲೇ ...?Thursday, September 22, 2011

ನೋವಿನಲಿ.. ನರಳುವ.. ನೆರಳಿವೆ....
ಬೆಳಕಿನಲಿ...
ನಗು  ಮುಖ...
ನಾ..
ಒಳಗೊಳಗೆ ಉಮ್ಮಳಿಸಿ..
ಬಿಕ್ಕಿದರೂ..
ಬರ 
ಬಾರದೆ ಉಳಿವ ಹನಿಗಳು...

ನಿನ್ನ..
ನೆನಪ ಛಾಯೆಯ ನೋವಲಿ...
ನರಳಿ..
ನರಳುವ..
ನೆರಳುಗಳು..


ನಲ್ಲಾ...

ನನ್ನ..
ಕತ್ತಲಲಿ..
ನಿನಗೆ ಕಾಣದ..
ನಿನ್ನದೇ.. ಚಿತ್ರಗಳು.....

Thursday, September 15, 2011

ಗಾಢ ಮೌನದ ಪ್ರೇಮಕೆ.....
ಹೃದಯದ..
ಮಾತೆಲ್ಲ ಕಣ್ಣಲ್ಲಿ ತುಂಬಿ..
ನೀ..
ನೋಡುವ ನೋಟ..
ನನ್ನೆದೆಯಲ್ಲಿ ಬಿಟ್ಟಿರುವೆಯಲ್ಲ..

ಈ 
ರಂಗು ರಂಗಿನ.. 
ಸಂಜೆಯಲಿ..
ತುಸು ತುಸು.. ನಷೆಯೇರುವ..
ನಿನ್ನಯ ಗುಂಗು..

ನಲ್ಲೆ...

ಸಾಕೆನಗೆ..
ಈ..
ತುಟಿಗೆ ಬಾರದ.. 
ನನ್ನ..
ಗಾಢ ಮೌನದ ಪ್ರೇಮಕೆ...

Friday, September 9, 2011

ಬದುಕಿದು.. ಕ್ಷಣ.. ಕ್ಷಣದ..ಬಣ್ಣಗಳು..!
ನೀನೆಂಬ..
ಅನಿವಾರ್ಯ ನನಗಿಲ್ಲದಿರುವಾಗ..

ಹಾರುವೆ..
ಹೀರುವೆ..
ಹೂ.. ಸುಮಗಳ
ಅಂದವ..
ಚಂದವ..
ಮಕರಂದವ..!

ಹೇಯ್..

ಬದುಕಿದು..
ಕ್ಷಣ..
ಕ್ಷಣದ..
ನನ್ನಿಷ್ಟದ  ಬಣ್ಣಗಳು ಕಣೆ..!


Wednesday, September 7, 2011

ಕದಡಬೇಡ ... ಬಣ್ಣಗಳನು....ಕಲ್ಪನೆಯ ...
ಕುಂಚದಲಿ..
ಬಿಡಿಸಿ..
ಬಚ್ಚಿಟ್ಟು ಕೊಂಡಿರುವೆ..

ನಾ..
ಒಳಗೊಳಗೇ..
ನನ್ನೊಳಗೆ..
ನಿನ್ನ..
ಚಂದದ ಚಿತ್ತಾರಗಳನು..

ನಲ್ಲೆ..
ಕದಡಬೇಡ ..
ನನ್ನ..
ಬಣ್ಣಗಳನು..
ನಿನ್ನ ನೆನಪಿನ ಪೂಜೆಯನು..

Monday, September 5, 2011

ನೀನೇ .. ನೀನೇ.... !!
ಕತ್ತಲು ..
ಕವಿಯುವ ..
ಆಸೆಗಳಿಗೂ..

ಬೆಳಕು ..
ಬೆಳಗುವ  ..
ಭಾವಗಳಿಗೂ..
ನೀನೇ ..
ನೀನೇ ... ಕಾರಣ ಗೆಳೆಯಾ...!


Sunday, September 4, 2011

ಕತ್ತಲ ರಾತ್ರಿಯಲಿ.. ಕಟ್ಟಲಾಗದ ಕನಸುಗಳು..

ಕತ್ತಲ
ರಾತ್ರಿಯಲಿ..
ಕಟ್ಟಲಾಗದ ..
ಕನಸುಗಳು.. ನಿಟ್ಟುಸಿರು..
ಹೊಟ್ಟೆ 
ತುಂಬಲಾರದು..

ನಲ್ಲೆ.....
ಹಾರಲೇ... ಬೇಕಲ್ಲೆ.....

ಹೊಸ..
ಆಸೆ.. 
ಬೆಸೆಯುವ..
ಸುಂದರ ಬೆಳಗಿನಲ್ಲೂ..
ಈ...
ಹಾಳು ಹಸಿವೆಯ ಹೊತ್ತು...!Saturday, September 3, 2011

ಆಸೆ .. ಕಣ್ಣಿನ.. ನಶೆ.. !ತಿಳಿ..
ನೀಲಿ ಬಾನ  ಚಂದ್ರಮ.. 
ನಲಿ..
ಮಿನುಗುವ  ತಾರೆಗಳು..!

ಅಲ್ಲೇಕೆ ..
ನೋಡಲಿ..?
ನಲ್ಲೆ..


ಆಸೆ ತುಂಬಿದ..
ಈ..
ಬೊಗಸೆ...
ಕಣ್ಣಲಿ..


ನಾ..
ಏರಿಸಿದಷ್ಟೂ.. ಇಳಿಯದ..
ನಿನ್ನ..
ಮೋಹಕ 
ನಶೆ 
ನನಗಿದೆಯಲ್ಲೇ....


Thursday, September 1, 2011

ನೆನಪುಗಳು.. ಹಸಿ.. ಹಸಿರಾಗಿ..

ಹನಿ 
ಹನಿಯಾಗಿ..
ಜಲ
ಧಾರೆಯಾಗಿ..
ನೀ..
ಭೋರ್ಗರೆದು..

ಹರಿದು..
ಬರುವೆಯಲ್ಲ..
ನಲ್ಲಾ..

ನನ್ನೆಲ್ಲ..
ಇಲ್ಲಗಳ ನಡುವೆಯೂ..
ನೆನಪುಗಳೊಡನೆ..
ಹಸಿ ..
ಹಸಿರಾಗಿ...
Tuesday, August 30, 2011

ನನ್ನಾಸೆ.. ಭರವಸೆಗಳಿಗೆ ಅಕ್ಕರೆಯ ಸಕ್ಕರೆ ಬೆರೆಸಲು ಬಾ..

ಇರುಳು
ಕಪ್ಪಲ್ಲಿ..
ಆಳಕ್ಕಿಳಿಗಿಳಿದು..
ಕಳೆದು ಹೋಗುವ..
ಕನಸು..


ಕರಗಿದ  
ಭಾವ..
ಘಳಿಗೆಗಳ..
ಮುಸುಕು ನೆನಪುಗಳ ..
ನಸುಕಿಗೆ..


ನನ್ನಾಸೆ.. ಭರವಸೆಗಳಿಗೆ ..
ಅಕ್ಕರೆಯ...
ಸಕ್ಕರೆ..
ಬೆರಸಲು..
ಬೆಳ್ಳನೆಯ ಬೆಳಕಾಗಿ..
ಬಾ...
ಗೆಳೆಯಾ.. ಬಾ..