Tuesday, November 19, 2013

ನಿನ್ನ ಕಂಗಳಲಿ...ನನ್ನ ಕನಸು ಹಾಡಿದ ಹಾಡು...!

ಕತ್ತಲಲಿ
ಬೆಳ್ಳಿಚಂದ್ರಮ ...
ಚುಕ್ಕಿ 
ತಾರೆಗಳಿಗಾಗಿ..
ಬೆಳದಿಂಗಳಾಗಿ ಹಾಡಿದ ಹಾಡು..

ಮೊಗ್ಗರಳಿ
ಪುಳಕಿತ
ಹೂ.. 
ದುಂಬಿಗೆ ಪರಿಮಳವಾಗಿ ..
ಪಿಸುಗುಟ್ಟಿ 
ಹಾಡಿದ ಹಾಡು..

ನಿನ್ನ
ನಗುವ ಕಂಗಳಲಿ
ನನ್ನ 
ಕನಸು ಹಾಡಿದ ಹಾಡು..


 ಬೆಡಗು
ಬಿನ್ನಾಣ.. 
ಸಂಭ್ರಮ ಸೊಬಗು..
  ಹಾಡಾಗಿ ಹಾಡು..
ಹಾಡು 
ಬಾ ನೀ ಹುಡುಗಿ..!

Sunday, October 13, 2013

ಮೌನ... ನುಡಿದು ನಡೆವ ಹೆಜ್ಜೆಗೆ... ಗೆಜ್ಜೆ ಕಟ್ಟುವೆ ಬಾರೆ....!

ಕತ್ತಲ
ಒಂಟಿ 
ಮನದಲಿ
ನೆನಪುಗಳು ಗುನುಗುವ....
ನನ್ನ
ಮಿನುಗು
ಚುಕ್ಕಿ 
ತಾರೆಗಳ
ಪ್ರೀತಿಯ ಗೆಜ್ಜೆ ಕಟ್ಟುವೆ ಬಾರೆ...

ನಮ್ಮದೇ
ದಾರಿ..
ಇಬ್ಬರದೆಯೆಲಿ
ಮೌನ..
ನುಡಿದು ನಡೆವ 
ಹೆಜ್ಜೆಗೆ.. 
ಸಂಭ್ರಮದ ಗೆಜ್ಜೆ ಕಟ್ಟುವೆ ಬಾರೆ....

Tuesday, October 1, 2013

ಅವಳ ಪ್ರೀತಿ ಎಂದಿಗೂ ಮಾತನಾಡುವದಿಲ್ಲ...!

ಅವಳ
ಪ್ರೀತಿ
ಎಂದಿಗೂ ಮಾತನಾಡುವದಿಲ್ಲ...

ಬಿಸಿ
ಬಿಸಿಯ 
ಉಸಿರಲ್ಲಿ ರಂಗೇರುತ್ತವೆ..
ಕೆನ್ನೆಗಳ ಮೇಲೆ...
ಮೃದು 
ಹೂಗಳ 
ಸಿಹಿ
ನಗುವಿನ  ನಾಚಿಕೆಯಂತೆ..

ಸಾವಿರ
ಆಸೆಗಳ ಸುಂದರ ಭಾಷೆಯ
ಭಾವ..
ಒಂಟಿ ಕತ್ತಲ 
ಮೌನ 
ಮನಕೆ ಆವರಿಸುವಂತೆ......


 ಅರಳುತ್ತವೆ..
ಹಸಿ
ಹಸಿರ ಚಿಗುರ ಮೊಗ್ಗಿನಂತೆ..
ಒಳಗೊಳಗೆ 
ನನ್ನೊಳಗೆ...

ಅವಳ
ಪ್ರೀತಿಯೇ ಹೀಗೆ..
ಎಂದಿಗೂ 
ಮಾತನಾಡುವದಿಲ್ಲ...

Thursday, September 26, 2013

ಕಣ್ಣಂಚಿನ.. ಕುಡಿಮಿಂಚಲಿ ಗರಿಗೆದರುವ ಆಸೆಗಳಂತೆ...

ಎದುರಿದ್ದರೂ
ಎದೆಯೊಳಗೆ ಹೇಳಲಾಗದ 
ಢವ
ಢವಗಳ  ಮಾತು  ಕಂಪನ... ..


ಬತ್ತದ
ಭಾವಗಳ
ಕಣ್ಣಂಚಿನೊಳಗಿನ 
ಸಣ್ಣ
ಕುಡಿಮಿಂಚಲಿ ಗರಿಗೆದರುವ ಆಸೆಗಳು....

ಕಾತುರದ
ನನ್ನೆಲ್ಲ ಮೌನಗಳಿಗೆ
ನೀ
ಒಮ್ಮೆ
ಶಬ್ಧವಾಗು ಬಾ ಹುಡುಗಾ..


Tuesday, September 17, 2013

ಮಂಜು... ಮಂಜಾಗಿ.. ಹುಟ್ಟಿಸುವ ಹುಚ್ಚು ಭಾವಗಳು...

ಮಂಜು...
ಮಂಜಾಗಿ ಮುಂಜಾವು
ಹುಟ್ಟಿಸುವ
ಹುಚ್ಚು ಭಾವಗಳು...
ಹನಿ
ಹನಿಗಳಾಗಿ
ಕರಗಿ ಹೋಗುವ ಮುನ್ನ...

ನೀ
ಬಂದು ಬಿಡು ಗೆಳೆಯಾ...

ನನ್ನ
ಕಣ್ಣಾಸೆ ಕನಸುಗಳ
ಮುದ್ದು
ಮುತ್ತಾಗಿ
ನನಗಾಗಿ 
ನನಸಾಗಿ ನನ್ನೆದುರಿಗೆ...

Thursday, September 12, 2013

ಚಂದಮಾಮ.. ಮತ್ತೆ ಮತ್ತೆ... ನಕ್ಕ ಕಣೆ.. !

ನೀ..
ಕೊಟ್ಟು ಹೋದ 
ನನ್ನ 
ಒಂಟಿ ಮೌನ
ರಾತ್ರಿ
ಕತ್ತಲ ಆಗಸ ನೋಡುತ್ತಿತ್ತು...

ಚಂದದ 
ಚಂದಿರ ಅಂದದಿ ನಗುತ್ತಿದ್ದ... !

ಅಶ್ಚರ್ಯವಾಯಿತು... 

" ಇದು ಹೇಗೋ  ಮಾಮಾ.. .. 
ನೀನೊಬ್ಬನೆ
ಈ 
ಬೆಳಕಿಲ್ಲದ ಬೆಳದಿಂಗಳದಿ  ?.." 

ಚಂದಮಾಮ..
ನನ್ನ 
ನೋಡಿ 
ಮತ್ತೆ 
ಮತ್ತೆ ಸಿಹಿ ನಗು ನಕ್ಕ ಕಣೆ ... 

ಥೇಟ್..
ನಿನ್ನ ಹಾಗೆ... !

Sunday, August 18, 2013

ಇನಿ.. ಇನಿತಾಗಿ.. ಇಬ್ಬನಿ ಹನಿಯಾಗಿ..ನೀ ಬಾ ಇನಿಯಾ..!

ಇನಿ..
ಇನಿತಾಗಿ..
ಇಬ್ಬನಿ ಹನಿಯಾಗಿ..
ನೀ 
ಸನೀಹ 
ಬಾ
ಇನಿಯಾ..

ಸಕ್ಕರೆ
ಸವಿ ಜೇನ ಕನಸಲಿ..
ಅರೆ
ಕಣ್ಮುಚ್ಚಿದ ರೆಪ್ಪೆಯ
ಮುದ್ದು
ಮುದ್ದಿನಲಿ ಮುಚ್ಚಲು..
ನೀ 
ಸಿಹಿ 
ಮುತ್ತಾಗಿ ಬಾ ಗೆಳೆಯಾ...

ಇನಿ..
ಇನಿತಾಗಿ..
ಇಬ್ಬನಿ ಹನಿಯಾಗಿ..
ನೀ 
ಸನೀಹ 
ಬಾ
ಇನಿಯಾ...


                                                 ( ರೂಪದರ್ಶಿ :: ಕುಮಾರಿ ಅರ್ಪಿತಾ ಕೂರ್ಸೆ.... )

Tuesday, July 16, 2013

ಚಿಗುರೊಡೆವ.. ಮೊಗ್ಗಿನಲಿ ಅರಳುವ ಹೂವಾಗಿ ಬಾ...

ಒಳಗೊಳಗೇ..
ಅನಿಸುವ ಆಸೆಗಳಿಗೆ 
ಹನಿ
ಹನಿ ನೀರುಣಿಸು ಬಾ...

ಚಿಗುರೊಡೆವ
ಹಸಿರು 
ಮೊಗ್ಗಿನಲಿ
ಅರಳುವ ಹೂವಾಗಿ ಬಾ...

ಬಯಸುವ
ಬಯಕೆ
ಭಾವಗಳನು..
ನಿನ್ನ
ಕಣ್ಣಾಲಿಗಳಲಿ ಹೊತ್ತು ಬಾ...


ರೂಪದರ್ಶಿ :: ಸಮನ್ವಯಾ ಸುಧಿ.... 

Friday, July 12, 2013

ಕಂಗಳಲಿ ... ನೀ ನಾಚಿ ಹಾಡುವ ಹಾಡು.. !

ನಗು ಕೆನ್ನೆ 
ಕುಂಕುಮದ ಹಣೆ..  
ಈ 
ಬೊಗಸೆ ಕಂಗಳಲಿ
ನೀ
ನಾಚಿ ಹಾಡುವ  ಹಾಡು..

ಬಿಟ್ಟೂ
ಬಿಡದೆ ಆವರಿಸುವ.. 
ನಿನ್ನ 
ಪ್ರೇಮ ಪರಿಧಿ ಭಾವದೊಳಗೆ   

ನನ್ನ 
ನಾ ಹುಡುಕುತ.. 
ಇಲ್ಲೇ.. 
ಇರುವೆ ಕಣೆ  ಎಲ್ಲೂ ಹೋಗದೆ... 
ತುಂಬು 
ಪ್ರೀತಿ 
ನೆನಪು  ಕ್ಷಣಗಳ  ಹೊತ್ತು... 

Wednesday, July 3, 2013

ಭಾವಗಳು .... ಮೌನದಲಿ ಮೂಕವಾಗಿಬಿಡುತ್ತವೆ..

ಬಚ್ಚಿಟ್ಟ
ಬೆಚ್ಚನೆಯ ನೆನಪುಗಳು..
ಸದ್ದಿಲ್ಲದೆ
ಮೊಗ್ಗರಳಿ ಹೂವಾಗುತ್ತದೆ..

ನನ್ನ
ಒಂಟಿ..
ಏಕಾಂತದಲಿ
ಭಾವಗಳು  ಭಾರವಾಗಿ...
ಮೌನದಲಿ 
ಮೂಕವಾಗಿಬಿಡುತ್ತವೆ..

ಹುಡುಗಿ... 
ನಿನ್ನೆಲ್ಲ .. 
ಕಣ್ಣಾಲಿಗಳ  ಮಾತುಗಳೇ...  ಹೀಗೆ..


Wednesday, June 26, 2013

ನಗುತ್ತಾನೆ ... ನನ್ನಾಗಸದ... ಪ್ರೇಮ ಬಿದಿಗೆ ಚಂದ್ರಮ...!

ನಾ
ಬಚ್ಚಿಟ್ಟ...
ಭಾವ 
ಕತ್ತಲೆಯಲ್ಲಿ ಮಿನುಗುತ್ತವೆ
ಬೆಳ್ಳಿ 
ಚುಕ್ಕಿ ತಾರೆಗಳು...

ಇಂದಿಗೂ
ನಗು 
ನಗುತ್ತಾನೆ ... 
ಗುನುಗುತ್ತಾನೆ.. 
ನನ್ನಾಗಸದ... 
ಪ್ರೇಮ 
ಬಿದಿಗೆ ಚಂದ್ರಮ...

ಹೇಯ್

ಏನೆಲ್ಲ ಇತ್ತೆ...
ಹುಡುಗಿ
ನಿನ್ನ
ಅಂದಿನ  ಆ  ನೋಟದಲ್ಲಿ... !


(ರೂಪದರ್ಶಿ  :: ಕುಮಾರಿ ಅರ್ಪಿತಾ ಕೂರ್ಸೆ)

Thursday, June 6, 2013

ನೀ.. ನನ್ನ ಮೌನಗಳ ಜೊತೆ.. ಮಾತಾಗು...

ನೀ..
ನನ್ನೆದೆಯ
ಢವ..
ಢವಗಳ ಭಾವಗಳಿಗೆ ತುಟಿಯಾಗು...

ನಿನ್ನ
ನೆನಪುಗಳಲಿ.. 
ಹತ್ತಾರು ಹುಚ್ಚಾಸೆಗಳ
ಕೆದಕುವ
ನನ್ನೊಳಗೊಂದು 
ಒಂಟಿ 
ಏಕಾಂತದ ಮುಸ್ಸಂಜೆಯಾಗು...

ಬಾರೋ . .. 
ಗೆಳೆಯಾ.. ಬಾ... 
ಈ 
ನನ್ನ
ಮೌನಗಳ ಜೊತೆ ಮಾತಾಗು...




Wednesday, May 15, 2013

ಸುಂದರ ಹೂವುಗಳೂ .. ನಗುತ್ತವೆ ನನ್ನೊಡನೆ... !

ಗೊತ್ತೇ..
ಇರಲಿಲ್ಲ ಕಣೆ ಹುಡುಗಿ... !

ನನ್ನೆದೆಯ
ಢವ 
ಢವದಲ್ಲಿ
ಏನೆಲ್ಲ ಮಾತಾಡುತ್ತವೆ...
ಈ 
ಕಣ್ಣುಗಳು... !

ಒಳಗೊಳಗೇ..
ಗುನುಗುತ್ತವೆ.. ಹಾಡುಗಳು... !

ಸುಂದರ
ಹೂವುಗಳೂ ..
ನಗುತ್ತವೆ...  ನನ್ನೊಡನೆ  ! ! 

ಗೊತ್ತೇ..
ಇರಲಿಲ್ಲ  ಕಣೆ  ಹುಡುಗಿ...
ನಾ... 
ನಿನ್ನ ನೋಡುವ  ಮೊದಲು !


( ರೂಪದರ್ಶಿ ::  ಅರ್ಪಿತಾ ಕೂರ್ಸೆ.. )

Sunday, April 28, 2013

ನವಿರು ಭಾವಗಳ ಆಸೆ .. ಈ ... ಕಂಗಳಲಿ ಮಾತಾಗುತ್ತವೆ...

ನವಿರು
ಭಾವಗಳ ಆಸೆ..
ಕಂಪನ
ಈ 
ಕಂಗಳಲಿ ಮಾತಾಗುತ್ತವೆ...

ಒಂಟಿ
ಹೃದಯದ
ಕತ್ತಲ 
ಮೌನಗಳು ಹಾಡಾಗುತ್ತವೆ...

ನಲ್ಲೆ.. 

ಒಳಗೊಳಗೇ..
ಉಳಿದು
ಉಲಿಯುವ
ನನ್ನೆದೆಯ ಢವ.. ಢವಗಳ 
ಮೂಕ 
ಬಡಿತಗಳಿಗೆ ಭಾಷೆಯಿಲ್ಲ ಕಣೆ.. 

Monday, April 15, 2013

ಪಿಸುಗುಟ್ಟಿದ.. ಹಸಿ ತುಟಿಗಳ ಕಚಗುಳಿ ..

ಖಾಲಿ 
ಖಾಲಿ  ಏಕಾಂತ.....
ನನ್ನ... 
ಮೌನಗಳು 
ಮಾತನಾಡುವ ನಿರೀಕ್ಷೆಗಳು...

ಅಂದು
ನಸುನಕ್ಕು
ಪಿಸುಗುಟ್ಟಿದ.. 
ಹಸಿ 
ತುಟಿಗಳ 
ಕಚಗುಳಿ ಇನ್ನೂ.. ನನ್ನೆದೆಯಲ್ಲಿದೆ ....

ಹೇಯ್..
ಹುಡುಗಾ.... 
ನಾ 
ಒಂಟಿ 
ಒಬ್ಬಂಟಿಯಲ್ಲ  ಕಣೊ... ..


ನೀ
ಬಿಟ್ಟು ಹೋದ
ನಿನ್ನ ..
ಬೇಡಗಳು 
ಜೊತೆಯಲ್ಲೇ ....
ಇವೆ
ಜೊತೆಯಾಗಿವೆ...


(ರೂಪದರ್ಶಿ : ಭಾರತಿ ಶಂಕರ್ 
ಗೋವಾ.. )

Tuesday, March 26, 2013

ಭಾವಕೂ ನಿಲುಕದ .. ..ನಿತ್ಯ ಬದುಕಿನ .. ಬಣ್ಣದೋಕುಳಿ .. !


ಕಳೆ
ಕಳೆದ ಕಾಲ ಬಳಿದ .. 
ಕಪ್ಪು
ಬಿಳಿಗಳ ಜೊತೆ ...
ಮತ್ತೆ
ಮತ್ತೆ ಚಿಗುರಿಸುವೆಯಲ್ಲೆ 
ಅದೇ.. 
ಹುಚ್ಚು ಹಸಿರಿನ ಮೊಗ್ಗು..

ಎನ್ನ
ಮನದಂಗಳದಿ.. 
ಚುಕ್ಕಿ
ತಾರೆಗಳಾಡುವ ಪಿಸು ಮಾತು..
ಹಳತು 
ಹಳಸದೆ ಹಾಡುವೆಯಲ್ಲೆ..
ನವ
ನವಿರು 
ನೆನಪು ಕನಸುಗಳ ಗುಂಗಿನ ಗುನುಗು.... 

ನಲ್ಲೇ..
ಭಾವಕೂ..  ನಿಲುಕದ 
ನೀ.. 
ನಿತ್ಯ 
ಬದುಕಿನ 
ಬಣ್ಣ 
ಬಣ್ಣದ ರಂಗಿನೋಕುಳಿ.. ಕಣೆ ..!

Thursday, March 14, 2013

ನಾಚಿಕೆ ನವೀರಾಗಿ... ನಾಚಿ ನೀರಾಗಿ...



ನಾಚಿಕೆ
ನವೀರಾಗಿ...
ನಾಚಿ

ಪ್ರೇಮದ ..
ಬಣ್ಣ 
ಕೆನ್ನೆಯಲಿ ರಂಗಾಗಿ...
ಮಧುರ
ಭಾವಗಳು.. ಕಣ್ಮುಚ್ಚಿ..

ಅಧರದಲಿ 
ಕಂಪಿಸುವ..
ಸಾವಿರ ಮಾತುಗಳ ಸಿಹಿ...
ಮುತ್ತು
ನಾನಾಗಲೇನೆ   ಹುಡುಗಿ.. ?...









Saturday, March 9, 2013

ಹೊಸಿಲ .. ರಂಗೋಲಿ ಅಳಿಸಬೇಡ ...


ಹೊಸಿಲ
ಹೊರಗಿನಂಗಳದ..
ರಂಗೋಲಿ ಅಳಿಸಬೇಡ ... 

ನೀನೇ ..
ಅರಳಿಸಿದ..
ಬಣ್ಣ .. 
ಬಣ್ಣದ ರಂಗಿನ .. ಗುಂಗುಗಳ 
ಹೊಸಕಿ... 
 ತುಳಿದು ಕದಡ ಬೇಡ...

ಎಲ್ಲ... 
ಇಲ್ಲಗಳ ಮರೆತು..
ಭಾವ 
ನೋವಿನ ಅಳುವಿನಲಿ..
ಭಾರ 
ಹೆಜ್ಜೆಗಳ ತಾಳದಲಿ..
ನಾ 
ಕುಣಿಯಬೇಕಿದೆ..
ನಿನ್ನ 
ಗೆಜ್ಜೆ ನೆನಪುಗಳ ಸವಿ ಸದ್ದಿನಲಿ...

ಬಾಳ ಬದುಕಿನ 
ರಂಗದಲಿ 
ಇನ್ನೂ...
ಪದರಗಳ ಪರದೆಯಿದೆ... 
ನಿನ್ನೇ..
 ಕಳೆದ   ನಾಳೆಗಳಿವೆ... 

ಹೊಸಿಲ
ಹೊರಗಿನಂಗಳದ..
ರಂಗೋಲಿ   ಅಳಿಸಬೇಡ ... 




(ರೂಪದರ್ಶಿ :: ನಿರುಪಮಾ ರಾಜೇಂದ್ರ 
ಖ್ಯಾತ ಅಂತರರಾಷ್ಟ್ರೀಯ ನೃತ್ಯ ಪಟು)





Friday, January 4, 2013

ಮಿಡಿಯಲಿ ಮುಗುಳು ನಗುವಿನ ಸಂಗೀತ ... !

ನೂರು
ರಾಗಗಳ ನೋಟ..
ಮಿಡಿಯಲಿ
ಮುಗುಳು ನಗುವಿನ ಸಂಗೀತ ...

ಬಾ..
ಬಾರೇ .. ಹುಡುಗಿ..
ನನ್ನ 
ಬಾಹುಗಳೊಳಗೆ...

ಸಾವಿರ ..
ನವಿರು  ಭಾವಗಳ 
ಸವಿ ..
ಮೌನ 
 ಹಾಡಾಗಲಿ ..  ನನ್ನೆದೆಯಲಿ..!


(PHOTO & Edited by - Ashish)