Tuesday, March 26, 2013

ಭಾವಕೂ ನಿಲುಕದ .. ..ನಿತ್ಯ ಬದುಕಿನ .. ಬಣ್ಣದೋಕುಳಿ .. !


ಕಳೆ
ಕಳೆದ ಕಾಲ ಬಳಿದ .. 
ಕಪ್ಪು
ಬಿಳಿಗಳ ಜೊತೆ ...
ಮತ್ತೆ
ಮತ್ತೆ ಚಿಗುರಿಸುವೆಯಲ್ಲೆ 
ಅದೇ.. 
ಹುಚ್ಚು ಹಸಿರಿನ ಮೊಗ್ಗು..

ಎನ್ನ
ಮನದಂಗಳದಿ.. 
ಚುಕ್ಕಿ
ತಾರೆಗಳಾಡುವ ಪಿಸು ಮಾತು..
ಹಳತು 
ಹಳಸದೆ ಹಾಡುವೆಯಲ್ಲೆ..
ನವ
ನವಿರು 
ನೆನಪು ಕನಸುಗಳ ಗುಂಗಿನ ಗುನುಗು.... 

ನಲ್ಲೇ..
ಭಾವಕೂ..  ನಿಲುಕದ 
ನೀ.. 
ನಿತ್ಯ 
ಬದುಕಿನ 
ಬಣ್ಣ 
ಬಣ್ಣದ ರಂಗಿನೋಕುಳಿ.. ಕಣೆ ..!

18 comments:

  1. ಅದ್ಭುತ ಸಾಲುಗಳು.....ಮನದಾಳದ ಪ್ರೀತಿಯು ಭಾವನೆಗೂ ನಿಲುಕಲಾರದಷ್ಟು ಸೊಗಸಾದರೆ ಬದುಕು ಎಷ್ಟು ಸುಂದರ ಅಲ್ವಾ..
    ಎಂದಿಗೂ ಹೀಗೆಯೇ ಇರಲಿ ಬದುಕು ರಂಗಿನೋಕುಳಿಯಾಗಿ, ಬಣ್ಣ ಬಣ್ಣದ ಚಿತ್ತಾರವಾಗಿ, ಸಾರ್ಥಕವಾದ ದಾಂಪತ್ಯವಾಗಿರಲಿ

    ReplyDelete
    Replies
    1. ಭಾವಕೂ ನಿಲುಕದ ಪ್ರೀತಿಯ ಬಣ್ಣದೋಕುಳಿ..
      ಎಲ್ಲರ ಬಾಳಿನ ಹೋಳಿಯಾಗಲಿ...

      ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು.. ಪದ್ಮಾ ಪುಟ್ಟಕ್ಕ..

      Delete
  2. ಖುಷಿಯ ಸಾವಿರ ಬಣ್ಣ ನಗುತಿರಲಿ ಬದುಕಿನಲಿ...
    ಚಂದದ ಚಿತ್ರ ಮತ್ತು ಸಾಲುಗಳು...

    ReplyDelete
    Replies
    1. ಶ್ರೀವತ್ಸ..
      ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

      ಬಣ್ಣದ ಹಬ್ಬದ ಶುಭಾಶಯಗಳು...

      Delete
  3. ಎಂತ ಕಪ್ಪು ಬಿಳುಪಿನ ಗಳಿಗೆಯನ್ನೂ ವರ್ಣಮಯಗೊಳಿಸುವ ಶಕ್ತಿ ಇರುವ ಈ ದಂಪತಿಗಳಿಗೆ ಶರಣು.

    ReplyDelete
    Replies
    1. ಬದರಿ ಭಾಯ್...

      ಬದುಕೇ .. ಬಣ್ಣ
      ಭಾವಗಳ ..
      ರಂಗಿನಾಟದ..
      ಬಣ್ಣದೋಕುಳಿ... ಹೋಳಿ... !

      ಬಣ್ಣದ ಹಬ್ಬದ ಶುಭಾಶಯಗಳು..

      Delete
  4. ರವಿಯ ಕಿರಣದಲ್ಲಿ ಕಾಮನಬಿಲ್ಲು ಇರುವಂತೆ
    ಹರಿಯ ಚರಣದಲ್ಲಿ ಕ್ಷೀರಸಾಗರ ಇರುವಂತೆ
    ವರ್ಣಗಳು ತುಂಬಿದ ಲೋಕದಲ್ಲಿ
    ಮುಗುಳುನಗು ಎಂಬ ರಂಗು ಸದಾ ಮುಖದಲ್ಲಿ ತುಂಬಿರಲಿ!!!
    ಸುಂದರ ಚಿತ್ರ ಸುಂದರ ಪದಗಳು

    ReplyDelete
    Replies
    1. ಪ್ರೀತಿಯ ಶ್ರೀಕಾಂತು...

      ನಮ್ಮ ಹಬ್ಬಗಳು ಎಷ್ಟು ಚಂದ..
      ಎಷ್ಟು ಸೊಗಸು ಅಲ್ಲವಾ ?

      ಬಣ್ಣಕ್ಕೊಂದಷ್ಟು ಅರ್ಥ..
      ಬೆಳಕಿಗೊಂದಷ್ಟು ಅರ್ಥ...

      ಹಣ್ಣೆಲೆ ಉದುರಿ..
      ಹಸಿರೆಲೆ ಚಿಗುರುವ ಹಬ್ಬ..
      ನಿತ್ಯವೂ ಪ್ರೇಮ ಯುಗಾದಿ..!

      ಬಣ್ಣದ ಹಬ್ಬದ ಶುಭಾಶಯಗಳು !!

      Delete
  5. wah! lovely.. both photo and poem.

    ReplyDelete
    Replies
    1. ಶುಭಾ ಜೀ...

      ಕತ್ತಲಲೂ..
      ಕಪ್ಪು
      ಬಿಳುಪಲೂ..
      ಬಣ್ಣ..
      ಭಾವ ರಂಗಿನಾಟದ ಓಕುಳಿಯಾಗಲಿ..

      ಹೋಳಿ ಹಬ್ಬದ ಶುಭಾಶಯಗಳು..

      Delete
  6. ಚೆಂದದ ಭಾವ - ಬರಹ. ಎಂಥ ಸನ್ನಿವೇಶವನ್ನೂ ಪ್ರಕಾಶಣ್ಣ ನೀವು ಬಣ್ಣಮಯ ಮಾಡಿಬಿಡ್ತೀರ. ಬಣ್ಣ ನನ್ನ ಒಲವಿನ ಬಣ್ಣ ನನ್ನ ಬದುಕಿನ ಬಣ್ಣ.... nice.

    ReplyDelete
    Replies
    1. ವೀಣಾ ಜೀ..

      ಪ್ರೀತಿ
      ಮಿಡಿಯುವ
      ಭಾವದಲಿ ಕಣ್ಣೋಟದ ರಂಗಿನಾಟ...

      ನಿತ್ಯವೂ
      ಪ್ರೇಮ ಬಣ್ಣಗಳ
      ಹೋಳಿ ಹಬ್ಬದಾಟ...

      ಬಣ್ಣದ ಹಬ್ಬದ ಶುಭಾಶಯಗಳು...

      Delete
  7. ಕವನ ರಂಗು ರಂಗು
    ನಂಗೆ ಅದುವೆ ಗುಂಗು
    ಹೋಳಿ ಎಂದ ಮೇಲೆ ಬೇಕು
    'ಬಣ್ಣ'ವೆಂಬ ಭಾಂಗು...

    Shabaash Prakaash ji...
    Nimagoo nimma chitrakkoo...

    ReplyDelete
  8. ಕೊನೆಯ ಸಾಲುಗಳು ಅದ್ಭುತ !!!!! ಮನಸ್ಸಿನಾಳದ ಪ್ರೀತಿಯ ಹನಿಗಳು ಕವನದಲ್ಲಿ ಹೆಪ್ಪುಗಟ್ಟಿವೆ!!!

    ReplyDelete
  9. sooper prakashanna... attige looking cute.... and nice lines ....

    ReplyDelete
  10. ನಲ್ಲೇ..
    ಭಾವಕೂ.. ನಿಲುಕದ
    ನೀ..
    ನಿತ್ಯ
    ಬದುಕಿನ
    ಬಣ್ಣ
    ಬಣ್ಣದ ರಂಗಿನೋಕುಳಿ.. ಕಣೆ ..!

    chandada saalugalu.... :)

    Badukina tumbella olavu nalivina... bannadokuli endigoo tumbirali.... Prati dinavoo preeti bannagala holiyirali... nimma baala hunnimeyalli... prakashanna.. :)
    Happy Holi...

    ReplyDelete
  11. 2. ಈ ಬಣ್ಣಗಳ ವೈವಿದ್ಯತೆಯಂತೆ ನಿಮ್ಮ ದಾಂಪತ್ಯದಲ್ಲೂ ಪ್ರತಿ ಗಳಿಗೆ ಒಲುಮೆಯ ವೈವಿದ್ಯತೆ ಮನೆಮಾಡಲಿ. ಸರದಾರನಂತ ಸುಪುತ್ರನ ಜೊತೆಗೆ ನೀವು ಜಗತ್ತಿನ ಮೂಲೆ ಮೂಲೆಗಳನ್ನು ಸಂದರ್ಶಿಸಿ ನಮಗಾಗಿ ಚಂದಾದ ಛಾಯಾಚಿತ್ತಾರಗಳನ್ನ ಹೊತ್ತುತರವಂತಾಗಲೀ.

    ಹೋಳೀ ರೇ......

    ReplyDelete
  12. ಚಂದದ ಚಿತ್ರ
    ಸುಂದರ ಸಾಲುಗಳು
    ಹೋಳಿ ಹಬ್ಬದ ಶುಭಾಶಯಗಳು ಪ್ರಕಾಶಣ್ಣ....

    ReplyDelete