Monday, April 15, 2013

ಪಿಸುಗುಟ್ಟಿದ.. ಹಸಿ ತುಟಿಗಳ ಕಚಗುಳಿ ..

ಖಾಲಿ 
ಖಾಲಿ  ಏಕಾಂತ.....
ನನ್ನ... 
ಮೌನಗಳು 
ಮಾತನಾಡುವ ನಿರೀಕ್ಷೆಗಳು...

ಅಂದು
ನಸುನಕ್ಕು
ಪಿಸುಗುಟ್ಟಿದ.. 
ಹಸಿ 
ತುಟಿಗಳ 
ಕಚಗುಳಿ ಇನ್ನೂ.. ನನ್ನೆದೆಯಲ್ಲಿದೆ ....

ಹೇಯ್..
ಹುಡುಗಾ.... 
ನಾ 
ಒಂಟಿ 
ಒಬ್ಬಂಟಿಯಲ್ಲ  ಕಣೊ... ..


ನೀ
ಬಿಟ್ಟು ಹೋದ
ನಿನ್ನ ..
ಬೇಡಗಳು 
ಜೊತೆಯಲ್ಲೇ ....
ಇವೆ
ಜೊತೆಯಾಗಿವೆ...


(ರೂಪದರ್ಶಿ : ಭಾರತಿ ಶಂಕರ್ 
ಗೋವಾ.. )

18 comments:

  1. ನೀ
    ಬಿಟ್ಟು ಹೋದ..
    ನಿನ್ನ
    ಬೇಡಗಳು ಜೊತೆಯಲ್ಲೇ ....
    ಇವೆ...
    ಜೊತೆಯಾಗಿವೆ...

    sooper.... lines....

    ಅವನ ಬೇಕುಗಳಲ್ಲಿ ಇವಳಿಲ್ಲದ್ದದ್ದಿರರೂ ..
    ಅವನ ಬೇಡಗಳ ಜೊತೆಯಲ್ಲಿ ಇವಳು ಒಂಟಿಯಲ್ಲ ... !!!!

    ReplyDelete
    Replies
    1. ಸಂಧ್ಯಾ ಪುಟ್ಟಕ್ಕ....

      ಪ್ರೀತಿಯವರು
      ಬಿಟ್ಟು ಹೋದಾಗ..
      ಬೇಡಗಳು
      ಇಷ್ಟಗಳಾಗುವದು ಬಲು ಸುಂದರ..

      ಬೇಡವೆಂದರೂ
      ಬೇಡಗಳು
      ಒಂಟಿ
      ಏಕಾಂತದ ಜೊತೆಯಾಗಿಬಿಡುತ್ತವೆ..

      ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಜೈ ಹೋ !

      Delete
  2. ಕಚಗುಳಿ ಇನ್ನೂ ನನ್ನೆದೆಯಲ್ಲಿದೆ .... ಎನ್ನುತ್ತಾಳೆ ಆಕೆ.
    ಜೊತೆಗೆ ನಿನ್ನ ಬೇಡಗಳು ಜೊತೆಯಲ್ಲೇ .... ಎಂದೂ ಕ್ಷಮಿಸುತ್ತಾಳೆ.

    ಮಾರಾಯ್ರೇ, ಅದು ಹ್ಯಾಗೆ ನಿಮ್ಮ ಲೇಖನಿಯಲ್ಲಿ ಇಷ್ಟು
    ಮಧುರ ಭಾವನೆಗಳು ಉದ್ಭವಿಸುತ್ತವೆ?

    ಒಳ್ಳೆಯ ಚಿತ್ರಕ್ಕೆ ಅತಿ ಮಧುರ ಗೀತೆ...

    ReplyDelete
    Replies
    1. ಬದರಿ ಭಾಯ್...

      ನಾನು ನಿಮ್ಮ ಕವನಗಳು ದೊಡ್ಡ ಅಭಿಮಾನಿ...
      ನಮ್ಮಂಥಹ ಅನೇಕರಿಗೆ ನೀವು ಸ್ಪೂರ್ತಿ...

      ಅಂದು
      ನಸುನಕ್ಕು..
      ಪಿಸುಗುಟ್ಟಿದ
      ಹಸಿ
      ತುಟಿಗಳು ಇಂದು ಕಚಗುಳಿ ಎನಿಸಿದಾಗ....

      ಕ್ಷಮಿಸುವದು ಸುಲಭ.... ಅಲ್ವಾ?

      ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಜೈ ಹೋ !

      Delete
    2. ಪ್ರಕಾಶಣ್ಣ ನಿಮ್ಮ ಪ್ರೋತ್ಸಾಹದಿಂದಲೇ ನಾನು ಬರೆಯುತ್ತಿರುವುದು. ನಿಮಗೆ ನನ್ನ ಆನಂತ ನಮನಗಳು ಈ ಮೂಲಕ ಇದೆ.

      Delete
  3. ವಾವ್, ಎಷ್ಟು ಚಂದದ ಸಾಲುಗಳು....

    ReplyDelete
    Replies
    1. ಧನ್ಯವಾದಗಳು ಸುಮತಿ ಪುಟ್ಟಮ್ಮ..... :)

      Delete
  4. ಆಹಾ !!! ಒಳ್ಳೆಯ ಸಾಮ್ಯತೆ ಆದರೆ ಅಸಾಮಾನ್ಯ ಹೋಲಿಕೆ ಒಂಟಿ-ಒಬ್ಬಂಟಿಯ ಭಾವಗಳಲ್ಲಿ. ಚೆನ್ನಾಗಿದೆ ಚಿತ್ರ.

    ReplyDelete
    Replies
    1. ವೀಣಾ ಜಿ..

      ಮೌನಗಳು
      ಮಾತನಾಡುವ ನಿರೀಕ್ಷೆಗಳಿದ್ದಾಗ..
      ಅವನು
      ಬಿಟ್ಟು ಹೋದ ಬೇಡಗಳು ಜೊತೆಯಲ್ಲಿದ್ದಾಗ
      ಹೇಗೆ
      ಒಂಟಿ.. ಒಬ್ಬಂಟಿಯಾಗಲು ಸಾಧ್ಯ ?

      ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಜೈ ಹೋ !!

      Delete
  5. Replies
    1. Thank u " ಮನಸು " ...

      ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಜೈ ಹೋ !!

      Delete
  6. ನೀ
    ಬಿಟ್ಟು ಹೋದ..
    ನಿನ್ನ
    ಬೇಡಗಳು ಜೊತೆಯಲ್ಲೇ ....
    ಇವೆ...
    ಜೊತೆಯಾಗಿವೆ...

    Super Prakashanna... :)

    ReplyDelete
  7. ಪ್ರಕಾಶಣ್ಣ;,'ನೀ ಬಿಟ್ಟು ಹೋದ ಬೇಡಗಳು ಜೊತೆಯಾಗಿವೆ ಕಣೋ'
    ಎನ್ನುವ ಕಡೆ "ನೀ ಕೊಟ್ಟು ಹೋದ ಕೊಡುಗೆಗಳು ಜೊತೆಯಾಗಿವೆ ಕಣೋ!!"
    ಎಂದರೆ ಹೇಗಿರುತ್ತೆ?-ನಿಮ್ಮ ಹನಿಗವನನಗಳ ಕಟ್ಟಾ ಅಭಿಮಾನಿ .

    ReplyDelete
  8. ಚಿತ್ರ ಚೆನ್ನಾಗಿದೆ.

    ReplyDelete
  9. ಹೇಯ್..
    ಹುಡುಗಾ....
    ನಾ
    ಒಂಟಿ
    ಒಬ್ಬಂಟಿಯಲ್ಲ ಕಣೊ... ..


    ನೀ
    ಬಿಟ್ಟು ಹೋದ
    ನಿನ್ನ ..
    ಬೇಡಗಳು
    ಜೊತೆಯಲ್ಲೇ ....
    ಇವೆ
    ಜೊತೆಯಾಗಿವೆ...

    meaning ful lines annaiah...

    ReplyDelete
  10. ಸುಂದರ ಸಾಲುಗಳು.....

    ReplyDelete
  11. ಮೌನದಿಂದಲಿ ಹೇಳೋ
    ಮಾತುಗಳೇ ಪುಳಕ ,

    ಖಾಲಿ
    ಖಾಲಿ ಏಕಾಂತ

    ನನ್ನ
    ಮೌನಗಳು ,
    ಈ ಸಾಲಂತೂ ಸೂಪರ್ ಸರ್

    ReplyDelete