Sunday, April 28, 2013

ನವಿರು ಭಾವಗಳ ಆಸೆ .. ಈ ... ಕಂಗಳಲಿ ಮಾತಾಗುತ್ತವೆ...

ನವಿರು
ಭಾವಗಳ ಆಸೆ..
ಕಂಪನ
ಈ 
ಕಂಗಳಲಿ ಮಾತಾಗುತ್ತವೆ...

ಒಂಟಿ
ಹೃದಯದ
ಕತ್ತಲ 
ಮೌನಗಳು ಹಾಡಾಗುತ್ತವೆ...

ನಲ್ಲೆ.. 

ಒಳಗೊಳಗೇ..
ಉಳಿದು
ಉಲಿಯುವ
ನನ್ನೆದೆಯ ಢವ.. ಢವಗಳ 
ಮೂಕ 
ಬಡಿತಗಳಿಗೆ ಭಾಷೆಯಿಲ್ಲ ಕಣೆ.. 

12 comments:

  1. ಮೌನ ಹಾಡಿತು
    ಮನದ ಭಾವಗೀತೆ
    ಚಿತ್ತಾರ ಮೀಟಿತು
    ವೀಣೆಯ ಹೀಗೇ
    ಹುಟ್ಟಿತಲ್ಲಾ
    ಒಂದು ತಪಿತ
    ಭಾವ, ಮೀರಿ
    ಎಲ್ಲಾ ನೋವ.

    ReplyDelete
    Replies
    1. ಆಜಾದೂ...
      ಸೂಪರ್...

      ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಜೈ ಹೋ !

      Delete
  2. Aha! Super photo! lovely lines... Prakashannana kalege Attigeya spoorti.. super jodi nimdu! :)

    ReplyDelete
  3. ಕಂಗಳಲ್ಲಿ ಹೇಳಿದ ಮಾತು ಹೃದಯಕ್ಕೆ ಅರಿವಾಯಿತು
    ಹೃದಯದಲ್ಲಿ ಹೇಳಿದ ಮಾತು ಕೀಲಿ ಮಣೆಗೆ ಅರಿವಾಯಿತು
    ಸುಂದರ ಚಿತ್ರ ಸುಂದರ ಪದ ಒಟ್ಟಾರೆ ಸೂಪರ್ ಗೀತ ಚಿತ್ರ

    ReplyDelete
  4. ಆ ಮಾತಾಡೋ ಕಂಗಳು ಹೇಳೋ ನೂರು ಭಾವಗಳೇ ನಿಮ್ಮ ಬದುಕಿನ ಬಣ್ಣವಲ್ಲವಾ ಪ್ರಕಾಶಣ್ಣ...:)
    ಇಷ್ಟವಾಯಿತು ಚಿತ್ರ ಬರಹ...

    ReplyDelete
  5. ಮನಸ್ಸಿನ ಖಾಲೀತಾಣ ತುಂಬ ಬಲ್ಲ
    ಏಕೈಕ ಮಾರ್ಗ ಆಕೆ

    ನವಿರಾದ ನಿರೂಪಣೆಯ ಮೂಲಕ
    ನಮ್ಮೊಳಗಿನ ಒಲುಮೆಯನ್ನು
    ಮತ್ತಷ್ಟು ಪ್ರಕಾಶಮಾನವಾಗಿ ಮಾಡಿದ
    ನಿಮ್ಮ ಈ ಕವನಕ್ಕೆ ಶರಣು.

    ReplyDelete
  6. ಅತ್ತಿಗೆಯ ಸೌಂದರ್ಯಕ್ಕೆ.. ಅಣ್ಣನ ಸಾಲುಗಳಿಗೆ ಸರಿಸಾಟಿಯಾರು...?
    ವಾವ್ಹ್ ಎಂಬ ಉದ್ಗಾರವಷ್ಟೇ ನನ್ನಲ್ಲಿ...

    ReplyDelete
  7. ಕಣ್ಣಲ್ಲೇ ನೂರು ರಾಗ
    ಮೈಮರೆತ ಪ್ರಕಾಶಣ್ಣನ ಮನದಲ್ಲಿ
    ಉಳಿದಿಲ್ಲ ಅವಳು ತುಂಬದ ಜಾಗ
    ಅಂದವ ಸೆರೆಹಿಡಿದಿಟ್ಟು ಕೊಳ್ಳಲು
    ನಿಮ್ಮ ಕ್ಯಾಮರಾವೂ
    ಮಾಡಿದೆ ಯೊಗ...

    ಎಂದಿನಂತೆ ಸೂಪರ್ ...

    ReplyDelete