Thursday, August 6, 2015

ಅಲ್ಲಲ್ಲಿ ಪಿಸುಗುಡುತ್ತಿದೆ ಮತ್ತದೇ ... ನಿನ್ನ ನೆನಪು... !

ಖಾಲಿ
ಖಾಲೀ ಹೃದಯ ..  ಸುತ್ತಲೂ ಕತ್ತಲು 
ಅತ್ತ 
ದೂರ ಆಗಸದಿ
ಚುಕ್ಕಿ 
ತಾರೆಗಳ
ಮಿನು
ಮಿನುಗುವ ಮಿಣುಕು ನಗು...

ಅಲ್ಲಲ್ಲಿ
ಪಿಸುಗುಡುತ್ತಿದೆ  ಮತ್ತದೇ  ನಿನ್ನ  ನೆನಪು... !

ಒಂಟಿ
ಮನದ..
ಬಿಗಿದ ತುಟಿಯ ನಿಟ್ಟುಸಿರಲಿ..
ಬಿದಿಗೆ 
ಚಂದ್ರಮನ
ಬೆಳ್ಳಿ ಬೆಳದಿಂಗಳ ಬೆಳಗು....

ಅಲ್ಲಲ್ಲಿ
ಗುನು
ಗುನುಗುತ್ತಿದೆ  ಮತ್ತದೇ ನಿನ್ನ ನೆನಪು.... !





ರೂಪದರ್ಶಿ :: ದೀಪ್ತಿ ನಾಗೇಂದ್ರ 
(ಭರತ ನಾಟ್ಯ ಹಾಗೂ  ನಾಟಕ ರಂಗ ಪ್ರತಿಭೆ)