ಛಾಯಾ ಚಿತ್ತಾರಾ....
Tuesday, July 16, 2013
ಚಿಗುರೊಡೆವ.. ಮೊಗ್ಗಿನಲಿ ಅರಳುವ ಹೂವಾಗಿ ಬಾ...
ಒಳಗೊಳಗೇ..
ಅನಿಸುವ ಆಸೆಗಳಿಗೆ
ಹನಿ
ಹನಿ ನೀರುಣಿಸು ಬಾ...
ಚಿಗುರೊಡೆವ
ಹಸಿರು
ಮೊಗ್ಗಿನಲಿ
ಅರಳುವ ಹೂವಾಗಿ ಬಾ...
ಬಯಸುವ
ಬಯಕೆ
ಭಾವಗಳನು..
ನಿನ್ನ
ಕಣ್ಣಾಲಿಗಳಲಿ ಹೊತ್ತು ಬಾ...
ರೂಪದರ್ಶಿ :: ಸಮನ್ವಯಾ ಸುಧಿ....
Friday, July 12, 2013
ಕಂಗಳಲಿ ... ನೀ ನಾಚಿ ಹಾಡುವ ಹಾಡು.. !
ನಗು
ಕೆನ್ನೆ
ಕುಂಕುಮದ
ಹಣೆ..
ಈ
ಬೊಗಸೆ ಕಂಗಳಲಿ
ನೀ
ನಾಚಿ
ಹಾಡುವ ಹಾಡು..
ಬಿಟ್ಟೂ
ಬಿಡದೆ ಆವರಿಸುವ..
ನಿನ್ನ
ಪ್ರೇಮ
ಪರಿಧಿ
ಭಾವದೊಳಗೆ
ನನ್ನ
ನಾ ಹುಡುಕುತ..
ಇಲ್ಲೇ..
ಇರುವೆ ಕಣೆ ಎಲ್ಲೂ ಹೋಗದೆ...
ತುಂಬು
ಪ್ರೀತಿ
ನೆನಪು
ಕ್ಷಣಗಳ ಹೊತ್ತು...
Wednesday, July 3, 2013
ಭಾವಗಳು .... ಮೌನದಲಿ ಮೂಕವಾಗಿಬಿಡುತ್ತವೆ..
ಬಚ್ಚಿಟ್ಟ
ಬೆಚ್ಚನೆಯ ನೆನಪುಗಳು..
ಸದ್ದಿಲ್ಲದೆ
ಮೊಗ್ಗರಳಿ ಹೂವಾಗುತ್ತದೆ..
ನನ್ನ
ಒಂಟಿ..
ಏಕಾಂತದಲಿ
ಭಾವಗಳು
ಭಾರವಾಗಿ...
ಮೌನದಲಿ
ಮೂಕವಾಗಿಬಿಡುತ್ತವೆ..
ಹುಡುಗಿ...
ನಿನ್ನೆಲ್ಲ ..
ಕಣ್ಣಾಲಿಗಳ ಮಾತುಗಳೇ... ಹೀಗೆ..
Newer Posts
Older Posts
Home
Subscribe to:
Posts (Atom)