Friday, July 12, 2013

ಕಂಗಳಲಿ ... ನೀ ನಾಚಿ ಹಾಡುವ ಹಾಡು.. !

ನಗು ಕೆನ್ನೆ 
ಕುಂಕುಮದ ಹಣೆ..  
ಈ 
ಬೊಗಸೆ ಕಂಗಳಲಿ
ನೀ
ನಾಚಿ ಹಾಡುವ  ಹಾಡು..

ಬಿಟ್ಟೂ
ಬಿಡದೆ ಆವರಿಸುವ.. 
ನಿನ್ನ 
ಪ್ರೇಮ ಪರಿಧಿ ಭಾವದೊಳಗೆ   

ನನ್ನ 
ನಾ ಹುಡುಕುತ.. 
ಇಲ್ಲೇ.. 
ಇರುವೆ ಕಣೆ  ಎಲ್ಲೂ ಹೋಗದೆ... 
ತುಂಬು 
ಪ್ರೀತಿ 
ನೆನಪು  ಕ್ಷಣಗಳ  ಹೊತ್ತು... 

9 comments:

  1. ಪ್ರಕಾಶ ಹೆಗಡೆ ಎಂದರೆ 'ಪ್ರೇಮಪದ'ಗಳ ಜೇನುಗೂಡು...

    ReplyDelete
    Replies
    1. ವಾಜಪೇಯಿ ಸರ್...
      ತುಂಬಾ ತುಂಬಾ ಧನ್ಯವಾದಗಳು..

      Delete
  2. ನೋಡಿದ್ದನ್ನ ಸರಿಯಾಗಿ ಹೇಳುವ ಕಲೆಯಿರಲು
    ಕಣ್ಣಲ್ಲಿ ಕಂಡದ್ದನ್ನು ಸೆರೆಹಿಡಿವ ಕ್ಯಾಮೆರ ಇರಲು
    ಭಾವ ತುಂಬಿದ ಅಕ್ಷರಗಳ ಬರೆಯಲು ಕೀಲಿ-ಮಣೆಯಿರಲು
    ಸ್ವರ್ಗವೇ ವರ್ಗವಾಗಿದೆ ಅಂದನಾ ಪ್ರಕಾಶಣ್ಣ!

    Super!

    ReplyDelete
    Replies
    1. ಪ್ರೀತಿಯ ಶ್ರೀಕಾಂತು..

      ನಾನು ಬರೆದ ಸಾಲುಗಳಿಗಿಂತ ನೀವು ಪ್ರತಿಕ್ರಿಯೆ ಬರೆದವುಗಳೇ ಸೊಗಸಾಗಿದೆ...

      ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಜೈ ಹೋ ....

      Delete
  3. Replies
    1. ಪ್ರೀತಿಯ ದಿನ್ನೂ...

      Thank you very much.......

      Delete
  4. ಪ್ರೀತಿ ಚಿತ್ತಾರಾವಿಲ್ಲಿ
    ಹಣೆಯ ಕುಂಕುಮವಾಗಿರಲು ...
    ಕಣ್ಣಂಚಲ್ಲಿ ಒಲವ ಪ್ರಣತಿಯದು
    ಮಿನುಗುತಿರಲು..
    ತುಟಿಯಂಚಿನ ನಗುವದು
    ಭಾವಗಳ ಶರಧಿಯಾಗಿರಲು ...
    ಅಕ್ಷರಗಳೇ ಸೋತು ಶರಣಾಗಿವೆಯಿಲ್ಲಿ
    ಮಿಡಿದ ಮೌನ ಭಾವಗಳಲ್ಲಿ..

    ReplyDelete
  5. beautiful photo it strikes the eye,..beautiful poem it moves to heart.. here i find best utilisation of multyple talent..

    ReplyDelete
  6. ಕಟ್ಟಿ ಹಾಕುವ ಗುಣ ಅವರಿಗೆ ದೈವ ಕೃಪೆಯಾಗಿ ಬಂದಿದೆ.
    ಸುಮ್ಮನೆ ಬಂದಿಲ್ಲ ಅವರೂ ಮನೆ ಮನದೊಳಗೆ
    ಆವರಿಸಿಕೊಳ್ಳಲು ತಿದ್ದಿ ತೀಡಲು ನಿಮ್ಮ...

    ನೀವು ಸಂಭ್ರಮಿಸುತ್ತಲೇ ಇರಿ ಆ ಪ್ರೇಮ ಪರಿಧಿ
    ಎಲ್ಲೂ ಹೋಗದೆ ಇದ್ದು ಬಿಡಿ ಆ ಬೆಚ್ಚನೆಯ ಗೂಡಲಿ...

    ನೂರು ಕಾಲ ಖುಷಿಯಾಗಿರಿ.

    ಛಾಯಾಚಿತ್ರ ಮತ್ತು ರೂಪದರ್ಶಿಯಾವರಿಗೆ ಸಮ ಅಂಕಗಳು.

    ReplyDelete