Saturday, October 6, 2012

ನೀರೆ.. ನಿನ್ಯಾರೆ..? ..

ಒಳಗೆ..
ಕತ್ತಲೆ ..
ಚಂದ್ರಮನಿಲ್ಲದ ..
ತಾರೆಗಳ  ಮಿಣುಕು..
ನಿನ್ನ
ನೆನಪುಗಳ ಗಾಢ ಮೌನ.. ..

ಇಳಿದು..
ಎಳೆಯುವ.. 
ನೋವು ಎದೆಯಲಿ..
ಬಾರದ
ಹನಿ  ಹನಿಗಳ  ಭಾವ.....

ನಿಜ ಹೇಳೆ ..
ನೀರೆ..
ನಿನ್ಯಾರೆ..?
ನೀ..
ಬರಿ .. ನೀರೇ..... ?