Saturday, June 28, 2014

ನನ್ನೆದೆಯಲ್ಲಿ.. ನೀ... ಮೌನವಾಗುವ ಹೊತ್ತು...


ಪ್ರೀತಿ
ನನ್ನೆದೆಯಲ್ಲಿ..
ಮೌನವಾಗುವ ಹೊತ್ತು...


ಈಗ
ಇದೀಗ ಇಣುಕಿದೆ... !

ಏಕಾಂತ
ಬಿಸಿಯಾಗಿ 
ಉಸಿರಾಗುವ ಹೊತ್ತು...

ಅವಳ
ನೆನಪು 
ನನ್ನ ಕಣ್ಣಲ್ಲಿ.. 
ನಾಚಿ
ಮುಗುಳ್ನಗುವಾಗುವ ಹೊತ್ತು...

ನಿಂತು
ನೀ 
ಸ್ತಭ್ಧವಾಗಿಬಿಡು ..  ಓ  .. ಬದುಕೆ...



ರೂಪದರ್ಶಿ ::  .........ಆಶೀಷ್ ......... 

Tuesday, June 17, 2014

ಬಾ... ನನ್ನ ಕತ್ತಲಲಿ... ಮೌನ.. ಮಿನುಗುವ ಹಾಗೆ...


ಬದುಕಬೇಕಿದೆ...
ಖಾಲಿ
ಖಾಲಿ ಆಸೆಗಳ ಹೊತ್ತು...

ಅಲ್ಲಲ್ಲಿ
ತಾರೆಗಳ ಬೆಳಕು..
ಕತ್ತಲಲ್ಲಿ
ನಿನ್ನ 
ನೆನಪುಗಳ ಭಾರ...

ಅಲ್ಲಿ
ಮೋಡಗಳಾಚೆ.
ಬಾನಿನಂಗಳ ದಾಟಿ...
ಹಾರಿ
ತೇಲಿ ಹೋಗುವ ಬಾರೆ..

ಬಾ
ನನ್ನೆದೆಯ
ಒಂಟೀ
ಭಾವಗಳ ಚುಂಬಿಸು... 

ಬಾ...
ಹುಡುಗಿ..
  ಬಾ... 

ನನ್ನ
ಕತ್ತಲಲಿ
ಮೌನ ಮಿನುಗುವ ಹಾಗೆ...