Saturday, June 28, 2014

ನನ್ನೆದೆಯಲ್ಲಿ.. ನೀ... ಮೌನವಾಗುವ ಹೊತ್ತು...


ಪ್ರೀತಿ
ನನ್ನೆದೆಯಲ್ಲಿ..
ಮೌನವಾಗುವ ಹೊತ್ತು...


ಈಗ
ಇದೀಗ ಇಣುಕಿದೆ... !

ಏಕಾಂತ
ಬಿಸಿಯಾಗಿ 
ಉಸಿರಾಗುವ ಹೊತ್ತು...

ಅವಳ
ನೆನಪು 
ನನ್ನ ಕಣ್ಣಲ್ಲಿ.. 
ನಾಚಿ
ಮುಗುಳ್ನಗುವಾಗುವ ಹೊತ್ತು...

ನಿಂತು
ನೀ 
ಸ್ತಭ್ಧವಾಗಿಬಿಡು ..  ಓ  .. ಬದುಕೆ...



ರೂಪದರ್ಶಿ ::  .........ಆಶೀಷ್ ......... 

8 comments:

  1. ನಿಮ್ಮ 'ಛಾಯಾ ಚಿತ್ತಾರ' ಮತ್ತು 'ಅಕ್ಷರ ಚಿತ್ತಾರ' ಎರಡೂ ಮನದಲ್ಲುಳಿಯುವಂತಿವೆ ಪ್ರಕಾಶ್ ಜೀ...
    ಆಶಿಶ್ 'ದೊಡ್ಡವ'ನಾದ !

    ReplyDelete
    Replies
    1. ಪ್ರೀತಿಗೆ ಪ್ರೀತಿಯ ನಮನಗಳು...
      ಹೌದು....
      ಆಶೀಷ್ ಈಗ ಯುವಕ................

      Delete
  2. ಅಂತೂ ನಮ್ಮ ಪ್ರೀತಿಯ ಹುಡುಗ ಛಾಯಾ ಚಿತ್ತಾರದಲ್ಲಿ ಕಂಡ . ಒಳ್ಳೆಯ ಚಿತ್ರಕ್ಕೆ ಅಕ್ಷರಗಳ ಚಿತ್ತಾರ ಸುಂದರವಾಗಿ ಮೂಡಿಬಂದಿದೆ

    ReplyDelete
  3. ಮೊದಲ ಪ್ರಶಂಸೆ ಆಶೀಶ್ ಅವರಿಗೆ... ಚಲುವಾಂತ ಚನ್ನಿಗ...

    ಪ್ರೀತಿ ಯಾವಾಗಲೂ ಮನದ ಅಂತರಂಗದಲ್ಲಿ ದಿವ್ಯ ಮೌನಿಯೇ,
    ಥೇಟ್ ಪರಮಾತ್ಮನ ಹಾಗೆ ಒಲವೂ ಸಹ...

    ಬದುಕನೇ ಸ್ಥಬ್ಧವಾಗಿಸುವ ಆಲೋಚನೆ ಇದೆಯಲ್ಲ ಅದೂ ರೋಚಕವೇ...

    ReplyDelete
  4. ಸುಂರವಾದ ಸಾಲುಗಳು ಬರೆದಿದ್ದಿರಿ.
    ..
    ಹಾಡು ಸುಂದರವಾಗಿದೆ.
    ..
    ..
    http://spn3187.blogspot.in/

    ReplyDelete