Tuesday, June 17, 2014

ಬಾ... ನನ್ನ ಕತ್ತಲಲಿ... ಮೌನ.. ಮಿನುಗುವ ಹಾಗೆ...


ಬದುಕಬೇಕಿದೆ...
ಖಾಲಿ
ಖಾಲಿ ಆಸೆಗಳ ಹೊತ್ತು...

ಅಲ್ಲಲ್ಲಿ
ತಾರೆಗಳ ಬೆಳಕು..
ಕತ್ತಲಲ್ಲಿ
ನಿನ್ನ 
ನೆನಪುಗಳ ಭಾರ...

ಅಲ್ಲಿ
ಮೋಡಗಳಾಚೆ.
ಬಾನಿನಂಗಳ ದಾಟಿ...
ಹಾರಿ
ತೇಲಿ ಹೋಗುವ ಬಾರೆ..

ಬಾ
ನನ್ನೆದೆಯ
ಒಂಟೀ
ಭಾವಗಳ ಚುಂಬಿಸು... 

ಬಾ...
ಹುಡುಗಿ..
  ಬಾ... 

ನನ್ನ
ಕತ್ತಲಲಿ
ಮೌನ ಮಿನುಗುವ ಹಾಗೆ...




8 comments:

  1. "​​ನನ್ನ
    ಕತ್ತಲಲಿ
    ಮೌನ ಮಿನುಗುವ ಹಾಗೆ..."

    ಇಷ್ಟವಾದ ಸಾಲು ಹಾಗೂ ಶೀರ್ಷಿಕೆ

    ಬೆಳಕಿನ ಮಾತಿಗಿಂತ. ಕತ್ತಲೆಯ ಮೌನವೇ ಚಂದ . ಒಬ್ಬರ ಭಾವ ಇನ್ನೊಬ್ಬರಿಗೆ ಕಾಣದು.. ಆದರೆ ನಾವು ಇದ್ದೇವೆ ಎನ್ನುವ ಭಾವ ಕೊಡುವ ಧೈರ್ಯ ಮಾತ್ರ ಹಿರಿಯದು..

    ಮಧುರ ಮಧುರವಾಗಿ ಜಿನುಗುವ ಆ ಮೌನದ ಮಾತುಗಳು ಆಹಾ..

    ಪ್ರಕಾಶಣ್ಣ ಚಂದದ ಚಿತ್ರ.. ಆ ಚಿತ್ರದಲ್ಲಿನ ನಾಜೂಕತೆ, ನಾಚಿಕೆ, ಮಿನುಗುವ ಮಂದಹಾಸ.. ಇವಕ್ಕೆ ಕಿರೀಟ ತೊಡಿಸಿದ ಹಾಗೆ ಇರುವ ಅಕ್ಷರಗಳ ಅಕ್ಕರೆಯ ಸಾಲು..

    ಸೂಪರ್ ಸರ್ಜಿ.. ಸೂಪರ್

    ReplyDelete
  2. ಒಮ್ಮೆ ಕಥೆ ಬರೀತೀರಿ, ಇನ್ನೊಮ್ಮೆ ಕವಿತೆ ಬರೆಯುತ್ತೀರಿ, ಮುಂದೊಮ್ಮೆ ನೋಡಿದರೆ ಹೊಟ್ಟೆ ಹುಣ್ಣಾಗಿಸುವಂಥ ನಗೆಯುಕ್ಕಿಸುವ ಲಘು ಪ್ರಬಂಧ ಬರೆಯುತ್ತೀರಿ. ಏನೇ ಮಾಡಿದರೂ ಅದರಲ್ಲಿ ಪ್ರೀತಿ ತುಂಬಿರುತ್ತೀರಿ. ಅದು ಚಿತ್ತಾರವಾದರೂ ಅಷ್ಟೇ, ಅಕ್ಷರವಾದರೂ ಅಷ್ಟೇ. ಒಟ್ಟಿನಲ್ಲಿ ನಕ್ಷತ್ರದ ಮಿನುಗು ಮೆರುಗು ಅದರಲ್ಲಿ.
    ನೀವು ಕಟ್ಟುವ ಮನೆಗಳಲ್ಲಿ ಗೋಡೆಗಳು ಕಥೆ ಹೇಳುತ್ತವಂತೆ; ಅಲ್ಲಿ ಸುಳಿವ ಗಾಳಿ ಕವಿತೆ ಹಾಡುತ್ತದಂತೆ; ಬೆಳಕು ಆನಂದಮಯಿಯಂತೆ; ಒಟ್ಟಿನಲ್ಲಿ ಬದುಕು ನಿಮ್ಮಂತೆ ತೃಪ್ತಿಯಿಂದ ಸಂತೃಪ್ತಿ ಹಂಚುತ್ತವೆಯಂತೆ ಆ ಮನೆಗಳು...

    ReplyDelete
  3. very beautiful both photo and poem.

    ReplyDelete
  4. ಕತ್ತಲಲಿ ಮಿಂಚಿಸವ ಘನತೆ ಅವಳಿಗೆ ಮಾತ್ರ.
    ತುಂಬ ಖುಷಿಕೊಟ್ಟ ಕವನ.

    ಮೋಡಗಳಾಚೆ.
    ಬಾನಿನಂಗಳ ದಾಟಿ...
    ದೂರ ತೀರ ಯಾನಕ್ಕೆ ಕರೆಯುವ
    ನಲ್ಲ!


    ಬಾ
    ನನ್ನೆದೆಯ
    ಒಂಟೀ
    ಭಾವಗಳ ಚುಂಬಿಸು...

    ಅಸ್ತು ಎಂದರು ದೇವಾನುದೇವತೆಗಳು...

    ReplyDelete
  5. beauty in Red... :) and..
    beautiful lines by beautiful Heart...

    Totally " Beautiful He"Art"" ...

    ReplyDelete
  6. Beautiful Pallavi, Lovely Lines :)
    avaLe haage, avaLa kannugaLe haage, avala Nagu saha haageyE.....
    chittavellava maretu avaLa daasanaaguvahaage........

    ReplyDelete