Saturday, March 9, 2013

ಹೊಸಿಲ .. ರಂಗೋಲಿ ಅಳಿಸಬೇಡ ...


ಹೊಸಿಲ
ಹೊರಗಿನಂಗಳದ..
ರಂಗೋಲಿ ಅಳಿಸಬೇಡ ... 

ನೀನೇ ..
ಅರಳಿಸಿದ..
ಬಣ್ಣ .. 
ಬಣ್ಣದ ರಂಗಿನ .. ಗುಂಗುಗಳ 
ಹೊಸಕಿ... 
 ತುಳಿದು ಕದಡ ಬೇಡ...

ಎಲ್ಲ... 
ಇಲ್ಲಗಳ ಮರೆತು..
ಭಾವ 
ನೋವಿನ ಅಳುವಿನಲಿ..
ಭಾರ 
ಹೆಜ್ಜೆಗಳ ತಾಳದಲಿ..
ನಾ 
ಕುಣಿಯಬೇಕಿದೆ..
ನಿನ್ನ 
ಗೆಜ್ಜೆ ನೆನಪುಗಳ ಸವಿ ಸದ್ದಿನಲಿ...

ಬಾಳ ಬದುಕಿನ 
ರಂಗದಲಿ 
ಇನ್ನೂ...
ಪದರಗಳ ಪರದೆಯಿದೆ... 
ನಿನ್ನೇ..
 ಕಳೆದ   ನಾಳೆಗಳಿವೆ... 

ಹೊಸಿಲ
ಹೊರಗಿನಂಗಳದ..
ರಂಗೋಲಿ   ಅಳಿಸಬೇಡ ... 




(ರೂಪದರ್ಶಿ :: ನಿರುಪಮಾ ರಾಜೇಂದ್ರ 
ಖ್ಯಾತ ಅಂತರರಾಷ್ಟ್ರೀಯ ನೃತ್ಯ ಪಟು)





16 comments:

  1. ನಿಮ್ಮ ಪದಗಳಲ್ಲಿ 'ಗೆಜ್ಜೆಯ ಉಲಿ'ಯಿದೆ...

    ReplyDelete
    Replies
    1. ಅಣ್ಣಾ...
      ಪ್ರೋತ್ಸಾಹ ಹೀಗೆಯೇ ಇರಲಿ... ಧನ್ಯವಾದಗಳು...

      Delete
  2. ಛಾಯಾ ಚಿತ್ರ ಬಹಳ ಸುಂದರ ಚಿತ್ರಣ...ನಿನ್ನದೇ ಬಣ್ನ ಬಳಿದ ಚಿತ್ರವ ಅಳಿಸಬೇಡ...ಸುಂದರ ಪದಾವಳಿ ಚಿತ್ರಕ್ಕೆ ಚೌಕಟ್ಟು.

    ReplyDelete
  3. ಧನ್ಯವಾದಗಳು ಆಜಾದೂ....


    ಕದಡಿ ಹೋದರೂ...
    ಅಳಿಸಲಾಗದ
    ಬಣ್ಣ...
    ನೆನಪುಗಳ ರಂಗುಗಳ ಜೊತೆಯಲ್ಲಿ...

    ReplyDelete
  4. ಸೂಕ್ಷ್ಮ ಕುಸುರಿಯ ಕವಿಯ ಭಾವನಾತ್ಮಕ ರಚನೆ ಇದು.

    " ಎಲ್ಲ...
    ಇಲ್ಲಗಳ ಮರೆತು.." ಬದುಕಿ ಬಿಡುವ ಕವಿಯ ಲೌಕಿಕ ಬುದ್ಧಿವಂತಿಕೆ ಮತ್ತು

    "ಇನ್ನೂ...
    ಪದರಗಳ ಪರದೆಯಿದೆ... " ಎನ್ನುವ ಆತನ ಅಲೌಕಿಕ ಕಲ್ಪನೆಯೂ ಇಲ್ಲಿ ಸಾಕಾರವಾಗಿದೆ.

    ಇನ್ನೂ ಪ್ರಸ್ತುತ ಪಡೆಸಿರುವ ಛಾಯಾ ಕಿತ್ರದ ಬಗೆಗೆ ಬರೆಯುವುದಾದರೆ, ಛಾಯಾಗ್ರಾಹಕ ಪ್ರಕಾಶ್ ಹೆಗಡೆಯವರ ಪಳಗಿದ ಕಲೆಯ ಅನಾವರಣಕೂ ಸಾಕ್ಷಿಯಾಗುತ್ತದೆ. ಚೌಕಟ್ಟಿನ ಸಂಯೋಜನೆ, ಎವೆ, ವೇಗ ಮತ್ತು ಬೆಳಕಿನ ನಿಯಂತ್ರಣವು ಹೊಸಬರಿಗೆ ಪಾಠವಾಗುತ್ತದೆ.

    ಮೂರ್ತ ಗಳಿಗೆಯನ್ನು ಅಮೂರ್ತವಾಗಿಸುವ ಕವಿ - ಛಾಯಾಗ್ರಾಹಕನ ಮೋಡಿ ಮುಂದುವರೆಯುತ್ತಲೇ ಇರಲಿ.

    ಒಟ್ಟಾರೆ ಚಿತ್ರಕ್ಕೆ 50/50, ಕವಿತೆಗೆ 50/50.

    ReplyDelete
    Replies
    1. ಬದರಿ

      ಫೋಟೊ ಇಷ್ಟವಾಗಿದ್ದರೆ ಅದರ ಶ್ರೇಯಸ್ಸು ಖ್ಯಾತ ನೃತ್ಯ ಪಟು ಅನುಪಮಾ ರಾಜೇಂದ್ರ ಅವರಿಗೆ ಸಲ್ಲಬೇಕು.
      ಅವರ ನೃತ್ಯ ಮೋಡಿ ಅಂಥಾದ್ದು !

      ದೂರ ಹೋಗಬೇಕು ಅಂತಿದ್ದಾಗ..
      ಬಾಂಧವ್ಯಗಳನ್ನು ಕದಡಿ ..
      ಕಹಿಯಾಗಿ ಯಾಕೆ ಹೋಗಬೇಕು... ?

      ಅರಳಿಸಿದ ಬಣ್ಣ
      ರಂಗುಗಳ ರಂಗೋಲಿಯನ್ನು ಹಾಗೆ ಬಿಟ್ಟು ಹೋಗುವದು ಒಳಿತು ಅಲ್ಲವಾ ?

      ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು..

      Delete
  5. ಓಹೊಹೋ!!!! ಸೂಪರ್!!!!ಚಿತ್ರಕ್ಕೆ ಸವಾಲೊಡ್ಡುವ ಕವಿತೆ!!!!!

    ReplyDelete
    Replies
    1. ಡಾಕ್ಟ್ರೆ..

      ಪ್ರೀತಿಯ ಪ್ರೋತ್ಸಾಕ್ಕಾಗಿ ಪ್ರೀತಿಯ ಜೈ ಹೋ !!

      Delete
  6. very very beautiful photo and poem

    ReplyDelete
  7. ಪದಗಳು ಸೃಷ್ಟಿಸಿದ ನೆರಳು ಬೆಳಕಿನ ರಂಗವಲ್ಲಿ... ನೆರಳು ಬೆಳಕು ಮೂಡಿಸಿದ ರಂಗದ ಮೇಲಿನ ವಲ್ಲಿಯ ನರ್ತನದ ಚಿತ್ರ ಎರಡು ಸೂಪರ್

    ReplyDelete
  8. ಪ್ರಕಾಶಣ್ಣ, ಅಧ್ಭುತ ಚಿತ್ರ, ಎಂದಿನಂತೆ ಚಂದದ ಒಪ್ಪುವ ಸಾಲುಗಳು...like it....

    ReplyDelete
  9. ಈ ಸಾಲುಗಳು ಇಷ್ಟವಾಯ್ತು ಎಂದು ಹೇಳ ಹೊರಟರೆ ಇಡೀ ಕವನವನ್ನೇ ಮತ್ತೆ copy ಮಾಡಬೇಕು. ಪ್ರತಿ ಸಾಲುಗಳು ಇಷ್ಟವಾಯ್ತು ಪ್ರಕಾಶಣ್ಣ. ಫೋಟೊ ಬಗೆಗೆ ನಾನು ಮಾತಾಡೊಹಾಗೆ ಇಲ್ಲ. ಅಷ್ಟು ಚೆನ್ನಾಗಿದೆ

    ReplyDelete
  10. wwwwwwwwwwwwwwwwaaaaaaaaaaaaaaaaahhhhhhhhhhhhhhhhhhhhhhhhhhhhh

    ReplyDelete