Thursday, September 12, 2013

ಚಂದಮಾಮ.. ಮತ್ತೆ ಮತ್ತೆ... ನಕ್ಕ ಕಣೆ.. !

ನೀ..
ಕೊಟ್ಟು ಹೋದ 
ನನ್ನ 
ಒಂಟಿ ಮೌನ
ರಾತ್ರಿ
ಕತ್ತಲ ಆಗಸ ನೋಡುತ್ತಿತ್ತು...

ಚಂದದ 
ಚಂದಿರ ಅಂದದಿ ನಗುತ್ತಿದ್ದ... !

ಅಶ್ಚರ್ಯವಾಯಿತು... 

" ಇದು ಹೇಗೋ  ಮಾಮಾ.. .. 
ನೀನೊಬ್ಬನೆ
ಈ 
ಬೆಳಕಿಲ್ಲದ ಬೆಳದಿಂಗಳದಿ  ?.." 

ಚಂದಮಾಮ..
ನನ್ನ 
ನೋಡಿ 
ಮತ್ತೆ 
ಮತ್ತೆ ಸಿಹಿ ನಗು ನಕ್ಕ ಕಣೆ ... 

ಥೇಟ್..
ನಿನ್ನ ಹಾಗೆ... !

8 comments:

  1. ಹೆಣ್ಣಿನ ನಗುವಿಗೆ ಚಂದ್ರನ ಹಾಲ್ಬೆಳದಿಂಗಳ ಶೀತಲ ಕಿರಣಗಳ ಚೆಲ್ಲುವಂತಹ ಬೆಳಕು ರಸಿಕ ಮಹಾಶಯರಿಗೆ ಉಪಮೇಯ ಆ ಹಾ ಹಾ... ಚಂದದ ವರ್ಣನೆ.

    ReplyDelete
    Replies
    1. ಚೆನ್ನಬಸವರಾಜರೆ...
      ಅವಳು ಕೊಟ್ಟು ಹೋದ ಒಂಟಿ ಮೌನ ಆಗಸ ನೋಡುತ್ತಿತ್ತು...

      ಒಂಟಿ ಮೌನ
      ಅವಳು ಕೊಟ್ಟಿದ್ದಕ್ಕಾಗಿ ಮದುರ.. ಸುಮಧುರ ಅಲ್ಲವಾ?

      ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

      Delete
  2. ಹೌದಲ್ಲಾ ಕಾರ್ಗತ್ತಲ ಅಮಾವಾಸ್ಯೆಯ ಮನಸ್ಸುಗಳಿಗೂ ಬೆಳಕು ತುಂಬುವ ಸಾಂತ್ವನಶೀಲ ಒಲುಮೆ ಹೃದಯ ಅವರದು.

    ಚಂದ ಮಾಮ ಸ್ವಂತದ ಮೂಲದವನಲ್ಲ ಅವನಿಗೂ ಬೇಕು ಬೆಳಕ ಎರವಲು. ಅಂತೆಯೇ ಜೀವ ಗೆಳತಿಯ ಕಾಂತಿಯಿಂದಲೇ ದೇದೀಪ್ಯವು ನಮ್ಮ ಪ್ರಕಾಶ!

    ReplyDelete
    Replies
    1. ಬದರಿ ಭಾಯ್...

      ಎಷ್ಟು ಚಂದ ಶಬ್ಧಗಳ ಮಣಿ ಪೊಣಿಸಿಡುತ್ತೀರಿ ! ವಾಹ್ !

      ನಿಮ್ಮ ಕವನಗಳ ಅಭಿಮಾನಿ ನಾನು..

      ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

      Delete
  3. soooper prakashanna...... aashatge "chandra chakori" hange kanasta iddu....:)

    ReplyDelete
    Replies
    1. ಥ್ಯಾಂಕ್ಯೂ ಸಮನ್ವಯಾ....

      ಹೌದು ನಿನ್ನ ಆಶತ್ತಿಗೆ "ಚಂದ್ರ ಚಕೋರಿ.." ಹ್ಹಾ.. ಹ್ಹಾ.. !

      Delete
  4. ತಂಪಾಗುವ ಚಂದಿರ ಬೆಳದಿಂಗಳು ಚೆಲ್ಲುತ್ತಲೇ
    ಮೌನದ ತಿಳಿ ಮರೆಯಲ್ಲಿ ಚೆಲ್ಲುತ್ತಾನೆ
    ಚೆಲುವಿನ ಚಂದಿರನ ಸೊಬಗು ಕಾವ್ಯದಲ್ಲಿ
    ಮೌನದ ಮಾತುಗಳು ಚಿತ್ರದಲ್ಲಿ
    ಸೂಪರ್ ಸರ್ಜಿ

    ReplyDelete
  5. ಸಾಲುಗಳು ಸುಂದರ ಥೇಟ್ ರೂಪದರ್ಶಿಯ ನಗುವಂತೆ ... :)

    ReplyDelete