Sunday, September 4, 2011

ಕತ್ತಲ ರಾತ್ರಿಯಲಿ.. ಕಟ್ಟಲಾಗದ ಕನಸುಗಳು..





ಕತ್ತಲ
ರಾತ್ರಿಯಲಿ..
ಕಟ್ಟಲಾಗದ ..
ಕನಸುಗಳು.. ನಿಟ್ಟುಸಿರು..
ಹೊಟ್ಟೆ 
ತುಂಬಲಾರದು..

ನಲ್ಲೆ.....
ಹಾರಲೇ... ಬೇಕಲ್ಲೆ.....

ಹೊಸ..
ಆಸೆ.. 
ಬೆಸೆಯುವ..
ಸುಂದರ ಬೆಳಗಿನಲ್ಲೂ..
ಈ...
ಹಾಳು ಹಸಿವೆಯ ಹೊತ್ತು...!



5 comments:

  1. ಕೆಲ ಹಸಿವುಗಳೇ ಹಾಗೆ ಬ್ರದರ್! ಭಲೇ ಸತಾಯಿಸುತ್ತವೆ. ಇಂಥ ವಿರಹದಲ್ಲೇ ವ್ಯಾಮೋಹ ದುಪ್ಪಟ್ಟಾಗುತ್ತದೆ.
    ಅಂದ ಹಾಗೆ ನೀವು ಕರೆ ಮಾಡಿದ ಗ್ರಾಹಕರು ಹೊರ ವಲಯ ಅಥವಾ ಸ್ವಾಚ್ಚ್ ಆಫ್ ಆಗಿಲ್ಲದಿರಲಿ! ವ್ಯಾಮೋಹ ದುಪ್ಪಟ್ಟಾಗುತ್ತದೆ.
    ಅಂದ ಹಾಗೆ ನೀವು ಕರೆ ಮಾಡಿದ ಗ್ರಾಹಕರು ಹೊರ ವಲಯ ಅಥವಾ ಸ್ವಾಚ್ಚ್ ಆಫ್ ಆಗಿಲ್ಲದಿರಲಿ!

    ReplyDelete
  2. ವಾವ್ ..ಪದಪುಂಜಗಳು ಅದ್ಭುತ ...ಎಂತಹ ಭಾವಾಭಿವ್ಯಕ್ತಿ.!

    ReplyDelete
  3. ಬದರಿ ಸರ್....

    ನಿಮ್ಮ ಕಲ್ಪನೆ ಇಷ್ಟವಾಯಿತು..

    ಮಸ್ತ್ !! ಮುಂದೆ ಒಮ್ಮೆ ನಿಮ್ಮ ಈ ಕಲ್ಪನೆಯಲ್ಲೂ ಬರೆಯುವ ಪ್ರಯತ್ನ ಮಾಡುವೆ..
    ಆದರೆ ನಾನು ಬರೆದದ್ದು "ಪ್ರೀತಿ, ಪ್ರೇಮ ಅಂತ ಕುಳಿತುಕೊಂಡರೆ ಹೊಟ್ಟೆ ತುಂಬುವದಿಲ್ಲ" ಎನ್ನುವ ಅರ್ಥದಲ್ಲಿ ಬರೆದೆ..

    ಕತ್ತಲ
    ರಾತ್ರಿಯಲಿ
    ಕಟ್ಟಲಾಗದ ಕನಸುಗಳು..
    ನಿರಾಸೆಯ ನಿಟ್ಟುಸಿರು..
    ಮತ್ತೆ
    ಬೆಳಗು..ಬೆಳಕಿನಲಿ..
    ಹೊಸ
    ಆಸೆ ಮಧುರ ಭಾವಗಳ
    ಬದಿಗಿಟ್ಟು
    ನಲ್ಲೆ..
    ಹಾರಬೇಕಲ್ಲೆ
    ಈ..
    ಹೊಟ್ಟೆ ಹಸಿವಿನ ವಾಸ್ತವತೆಯ ಹೊತ್ತು..

    ReplyDelete
  4. ಅದ್ಭುತವಾದ ಕಲ್ಪನೆ......ಅದಂತೂ ನಿಜ ಮನುಷ್ಯನಿಗೆ ಮೊದಲು ಬೇಕಾಗಿದ್ದು ಹೊಟ್ಟೆಗೆ, ಬಟ್ಟೆಗೆ. ಒಮ್ಮೆ ಇವುಗಳ ಪೂರೈಕೆಯಾದ ಮೇಲೆ ಅವಶ್ಯವಾಗಿ ಬೇಕಾಗುವುದು ಪ್ರೀತಿ.......:)

    ReplyDelete