Monday, August 16, 2010

ಮೆಲ್ಲುಸುರಿನ..ಮೌನದಲಿ..ಗುಲಾಬಿ..
ಮೊಗದ..
ಸೊಬಗು..
ಬೊಗಸೆಯಲಿ..
ಸವಿದು..


ಈ..
ಮತ್ತೇರಿಸುವ....
ಮೌನದ..
ಮೆಲ್ಲುಸುರಿನಲಿ...

ಮೆಲ್ಲಗೆ..
ಮಾತು..
ಮುತ್ತಾಗಬೇಕಿತ್ತು...

ನಲ್ಲೆ..
ಮುಚ್ಚಿದ..
ನಿನ್ನ..
ಆ..
ಕಣ್ಣು
ರೆಪ್ಪೆಗಳೊಡನೆ....!

31 comments:

 1. ಸೂಪರ್ ಆಗಿದೆ ಪ್ರಕಾಶ್, ಈಗ ಕೆಲವೇ ನಿಮಿಷಗಳ ಕೆಳಗೆ ಛಾಯಾ ಚಿತ್ತಾರಕ್ಕೆ ಭೇಟಿ ಕೊಟ್ಟಿದ್ದೆ, ಯಾವುದೂ ಹೊಸ ಕವನ ಇಲ್ವಲ್ಲಾ ಅನ್ನೋ ಹೊತ್ತಿಗೆ ರೆಡೀನಾ.. :)

  ReplyDelete
 2. ಗುರುಪ್ರಸಾದ್...

  ನಿನ್ನ..
  ಮುಚ್ಚಿದ
  ಕಣ್ಣು..
  ನನ್ನ..
  ನೋಡುವಾಗ..
  ನೀರವ..
  ಈ..
  ಮೌನ..
  ಮೆಲ್ಲಗೆ..
  ಮಧುರ..
  ಸಂಗೀತವಾಯಿತಲ್ಲೇ..
  ಹುಡುಗಿ..
  ಪ್ರೇಮ....
  ಕಲರವದಲಿ......

  ಧನ್ಯವಾದಗಳು ಗುರು...

  ReplyDelete
 3. ಸುಂದರ ಚಿತ್ರ.. ಅತೀ ಸುಂದರ ಕವನ.. ಬೊಂಬಾಟ್ ಆಗಿದೆ ಪ್ರಕಾಶಣ್ಣ..

  ಯಾರಿಂದ ಖಡ ತಂದೆ
  ಗೆಳತಿ.. ಮತ್ತೇರಿಸುವ
  ನಿನ್ನ ಗಲ್ಲದ ಗುಲಾಬಿ ರಂಗು..?
  ಯಾರಿಗೂ ಗೊತ್ತಾಗದಂತೆ
  ಗುಟ್ಟಿನಲಿ ಮುತ್ತಿಡುವೆ
  ಹೇಳಿಕೊಡು ಈ ಲಾಬಿ ನಂಗೂ..!!

  ReplyDelete
 4. ಪ್ರಕಾಶ...ಯಾಕೋ ನನಗೆ ಡೌಟಾಗ್ತಾಯಿದೆ....ಹಹಹ.....

  ReplyDelete
 5. ಹೇಳಲಾಗುವುದಿಲ್ಲ ......
  ಕೇಳಲೂ ಆಗದಲ್ಲ........
  ಗೆಳತೀ ನಿನ್ನನ್ನು ಗೆಳತನಕ್ಕೆ......
  ಕರೆದಿದ್ದೇ ಇದಕ್ಕೆ .....
  ಇಲ್ಲವಾದರೆ .........
  ಬರಿದೇ ನೀನ್ಯಾತಕ್ಕೆ...?
  ಅದೇನು ಸೊಬಗು ......
  ಅದೆಂಥ ಸೊಗಸು ............
  ಆ ನೋಟ ..........
  ಮೈ ಮಾಟ...........................
  ಅಡಿಕೊಳ್ಳಲಿ ಯಾರೂ ..................
  ಬೇಕಾದ ಹಾಗೆ ........
  ಆದರೆ ನೀನೊಮ್ಮೆ ...........
  ಸೆರಗು ಮುಚ್ಚಿ ಕಚ್ಚಲು ಬಿಡು......
  ಹವಳದ ತುಟಿಯ ............
  ಅದು ಸಾಕು ಕೊಡುವುದು .......
  ಜಗವನೇ ಗೆದ್ದಷ್ಟು .........
  ಖುಷಿಯ !

  ನಿಮ್ಮೆಲ್ಲರೊಂದಿಗೆ ನಾನೂ ಸೇರಿಕೊಂಡೆ, ರಸಿಕತೆಗೆ ರಂಗು ಬಳಿದೆ, ಚೆನ್ನಾಗಿದೆ, ಧನ್ಯವಾದಗಳು

  ReplyDelete
 6. prakaash nimma kavite chennaagide. haage nimma lahari nirantaravaagi hariyuttirali.

  ReplyDelete
 7. ದಿಲೀಪ್..

  ನನ್ನ ಸಾಲುಗಳಿಗಿಂತ.. ನಿಮ್ಮ ಚುಟುಕು ಬೊಂಬಾಟ್ ಆಗಿದೆ..

  ಬಿಸಿ.
  ಮೆಲ್ಲುಸಿರು.
  ನಿನ್ನ..
  ಈ..
  ಮುಚ್ಚಿದ
  ಕಣ್ಣಿನ..
  ಮತ್ತಲಿ..
  ಮೆತ್ತಗೆ..
  ತೇಲುತಿರುವೆ..
  ಹುಡುಗಿ..
  ಇಳಿಯಲಾರದ
  ನಶೆಯಲಿ.....

  ಥ್ಯಾಂಕ್ ಯೂ.. ದಿಲೀಪ್..

  ReplyDelete
 8. ಜಲನಯನ
  ಆಜಾದು.. ಮೊದಲು ನಿನ್ನ ಡೌಟಿಗೆ ಇಲಾಜು ಮಾಡಿಸಿಕೊ ಹ್ಹಾ..ಹ್ಹಾ..!


  ಮೌನದ
  ಮೆಲ್ಲುಸುರಿನ
  ಬಿಸಿಯಲಿ..
  ಮೆತ್ತಗೆ..
  ಮುಚ್ಚಿದ..
  ಕಣ್ಣುಗಳು..
  ಅಹಾ..!
  ನುಡಿಸಲೆ..
  ಹುಡುಗಿ....
  ಮಧುರ..
  ಸಂಗೀತದ..
  ಸರಿಗಮ..
  ಈ....
  ನಿನ್ನ....
  ಮೃದು..
  ಅಧರದಲಿ..!

  ಧನ್ಯವಾದಗಳು.. ಆಜಾದು..

  ReplyDelete
 9. ಪ್ರಕಾಶಣ್ಣ..
  ಎಂದಿನಂತೆ ಚಿತ್ರ, ಕವನ ಎರಡೋ ಸೂಪರ್..
  ನಿಮ್ಮ ಪ್ರತಿ ಸಾಲು 'ಕವನ'....
  ಪ್ರತಿ ಚಿತ್ರ 'ಚಿತ್ತಾರ'....

  ReplyDelete
 10. ತಾರೀಫ್ ಉಸ್ ಖುದಾ ಕಿ, ಜಿಸ್ನೆ ಜಂಹಾ ಬನಾಯಾ..
  ಫೂಲ್ ಸಾ ಬನಾಯಾ ತುಜ್ಹಕೋ,
  ಕಾಂಟಾ ಮುಜ್ಹೆ ಬನಾಯಾ....!!

  ReplyDelete
 11. ಸೊಗಸಾದ ಸಾಲುಗಳು...

  ReplyDelete
 12. ಗುಲಾಬಿ ಮೊಗದೊಡನೆ ಮತ್ತೇರಿಸುವ ಮೌನವು ಕಣ್ಣ ರೆಪ್ಪೆಯೊಳಗೆ ಮುತ್ತಿನಂತ ಮಾತಾಗುವ ಪರಿ ಚೆನ್ನಾಗಿದೆ...

  ReplyDelete
 13. ಮನಸು...
  ಪ್ರತಿಕ್ರಿಯೆಗೆ ಧನ್ಯವಾದಗಳು..

  ಮುಚ್ಚಿದ
  ಕಣ್ಣ
  ರೆಪ್ಪೆಯೊಳಗಿನ..
  ಭಾವಾಂತರಂಗವ..
  ಬಿಡಿಸಿ
  ಹೇಳಲಾರೆಯ..
  ಹುಡುಗಿ..
  ನೀ..
  ಮೌನ
  ಮಾತುಗಳಲಿ..
  ಈ..
  ನಿನ್ನ
  ಅಧರದಲಿ...!

  Thank you..

  ReplyDelete
 14. ಸೂಪರ್ರಾಗಿದ್ದು ಪ್ರಕಾಶಣ್ಣ..

  ReplyDelete
 15. ಸಿಂಪ್ಲಿ ಸೂಪರ್......

  Guru,...

  ReplyDelete
 16. ಪ್ರಿಯ.. ವಿ.ಆರ್.ಭಟ್ ಜೀ..

  ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ..
  ನಿಮಗೆ ಬರೆಯಲು ಸ್ಪೂರ್ತಿ ಸಿಕ್ಕಿದ್ದಕ್ಕೆ ಖುಶಿಯಾಯಿತು...


  ಮತ್ತೇರಿಸುವ..
  ಮೆಲ್ಲುಸುರಿನ
  ಬಿಸಿ..
  ಕಣ್ಣು..
  ಮುಚ್ಚಿದ್ದರೂ..
  ಕೆನ್ನೆಯಯ
  ಮೇಲೆಕೆ...
  ನಲ್ಲೇ..
  ಮೂಡಿತು..
  ಗುಲಾಬಿ ರಂಗು ?

  ReplyDelete
 17. Prakash sir, chithra- kavana chennagide.

  ReplyDelete
 18. ಗುಲಾಬಿಯಂತಹ ಚೆಲುವು ಅದನ್ನ ಕೈಯ ಬೊಗಸೆಯಲ್ಲಿ ಹಿಡಿದು ಆ ಚಂದವನ್ನ ಸವಿದು ಆ ಮತ್ತೇರಿಸುವ ಮತ್ತಿನಲ್ಲಿ, ಮೌನದ ಮೆಲ್ಲುಸಿರಿನಲಿ, ಅವನ / ಅವಳ ಮಾತು ಮುತ್ತಾಗಬೇಕಿತ್ತು ನಲ್ಲೆ ಮುಚ್ಚಿದ ನಿನ್ನ ಆ ಕಣ್ಣು ರೆಪ್ಪೆಗಳೊಂದಿಗೆ........... ಕವನ ಭಾವನಾತ್ಮಕವಾಗಿದೆ

  ReplyDelete
 19. ಸರ್ವಜ್ಞನ ಮಾತಿನಲ್ಲಿಯಾದರೆ
  "ಚಿತ್ರವನು ನವಿಲಿನೊಳು |ವಿಚಿತ್ರವನು ಗಗನದೊಳು
  ಚಿತ್ರ ವಿಚಿತ್ರವನು ಪುಷ್ಪದೊಳು ತಾ |
  ಚಿತ್ರಿಸಿದವರಾರು ||ಸರ್ವಜ್ಞ ||"
  ನವಿಲಿನಲ್ಲಿ ಸುಂದರವಾದ ಕಲಾತ್ಮಕತೆಯನ್ನು,ಪುಷ್ಪದಲ್ಲಿ ವಿಚಿತ್ರವಾದ ಬಣ್ಣಗಳನ್ನು ಹಾಗೂ ಗಗನದಲ್ಲಿ ತುಂಬಾ ವಿಸ್ಮಯಕಾರಕ ದೃಶ್ಯವನ್ನು ಯಾರು ತುಂಬಿದರು?
  "ನಮನ"

  ReplyDelete
 20. wow, sooper maama.
  "ಮೆಲ್ಲಗೆ ಮಾತು ಮುತ್ತಾಗಬೇಕಿತ್ತು...
  ನಲ್ಲೆ ಮುಚ್ಚಿದ ನಿನ್ನ ಆ ಕಣ್ಣು
  ರೆಪ್ಪೆಗಳೊಡನೆ....!" excellent line :-)

  ReplyDelete
 21. ಪ್ರಿಯ ಬಾಲು ಜೀ..

  ಪ್ರತಿಕ್ರಿಯೆಗೆ ಧನ್ಯವಾದಗಳು..

  ನಾಚಿ.
  ರಂಗಾದ..
  ಗುಲಾಬಿ
  ಕೆನ್ನೆಯ..
  ರಂಗು..
  ನನಗೂ ..
  ಸವರುವೆಯೇನೆ...
  ಮಧುರ..
  ಸವಿ..
  ಅಧರದಿಂದದಲಿ...? !

  ReplyDelete
 22. ದಿನಕರ...

  ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..

  ಈ..
  ಮೆಲ್ಲುಸುರಿನ
  ಬಿಸಿಯಲಿ..
  ಹಸಿ..
  ಹಸಿ..
  ಅಧರಗಳು..
  ನಶೆಯೇರಿಸಿವೆ ...

  ಹುಡುಗಿ...

  ನಿನ್ನ..
  ಮುಚ್ಚಿದ ಕಣ್ಣುಗಳ..
  ಗುಲಾಬಿಕೆನ್ನೆಯ..
  ರಂಗು....
  ಅದರ
  ಗುಂಗು...

  ReplyDelete
 23. ಸೂಪರ್ ಪ್ರಕಾಶಣ್ಣ.. and ದಿಲೀಪ್ ಅವರ ಕವನ ಕೂಡ ಸೂಪರ್..:)

  ReplyDelete
 24. Sir...

  sundara chitrakke poorakavaagi sogsaada kavana..Very nice sir.......

  ReplyDelete
 25. ಶೀರ್ಷಿಕೆಯೇ ಬಲು ಮುದ್ದಾಗಿದೆ..

  ReplyDelete
 26. ಹೂ ಅಂದ..
  ನೀ ಚಂದ..
  ನಮ್ಮ ಸಂಬಂಧ ..
  ಮಧುರ ಅನುಬಂಧ...
  ನಿಮ್ಮವ,
  ರಾಘು.

  ReplyDelete