Monday, February 22, 2010

ಬಂದು ಬಿಡ... ಬೇಕಿತ್ತು...!


ಬದುಕ...

ಬೇಕಿತ್ತು...

ಇನ್ನಷ್ಟು..

ಚಂದದ..

"ಬದುಕು"  

 ಬೇಕಿತ್ತು..

ಎನ್ನುವಾಗಲೇ....

ಬೇಡದ..

ಬಾರದ...

ಬಯಸದ...

ಸಾವು...

ಬಂದು..

"ಬಂಧು..ಬಂಧ" ... 

ಬಿಡಬೇಕಿತ್ತು...!

30 comments:

 1. ಯೋಚನೆಗಳ ಕಂದಕದಂಚಿಗೆ ತಂದು ಬಿಡುವ ಪ್ರಯತ್ನವೇ ಪ್ರಕಾಶ್....ಚೆನ್ನಾಗಿವೆ ಬಲು short n sweet...ಸಾಲುಗಳು.

  ReplyDelete
 2. ಪಾವಾನಾ...

  ಇದು.. ನಂದಿ ಬೆಟ್ಟಕ್ಕೆ ಹೋದಾಗ ತೆಗೆದದ್ದು...

  ಸಾವಿನ ಬಗೆಗೆ ಫೋಟೊ ಹುಡುಕುತ್ತಿದ್ದೆ...

  ಸಾವು ಅನ್ನೋದು..
  ಆರಂಭಾನೋ..
  ಕೊನೆಯೋ...

  ಗೊತ್ತಾಗಲ್ಲಿಲ್ಲ...

  ಹಾಗಾಗಿ ಈ ಫೋಟೊ ಸಿಲೆಕ್ಟ್ ಮಾಡಿದೆ...

  ಥ್ಯಾಂಕ್ಸ್.....!!!

  ReplyDelete
 3. ಆಝಾದ್...

  ಬದುಕು..
  ಬದುಕಿನ..
  ಬಗೆಗೆ..
  ಆಸಕ್ತಿ ಇರುವಾಗಲೇ ಹೋಗಿ ಬಿಟ್ಟರೆ ಒಳ್ಳೆಯದಲ್ಲವಾ..?

  ವಿರಕ್ತಿ ಬರುವ ಮೊದಲು
  ಬಂಧು..
  ಬಂಧ..
  ಬಿಡ ಬೇಕು... ಅಲ್ಲವಾ...?

  ಧನ್ಯವಾದಗಳು..

  ReplyDelete
 4. ಪ್ರಕಾಶಣ್ಣ ಮಸ್ತ್ ಇದ್ದು ..
  ಇದೇನಿದು ನನ್ನ ಗಾಳಿ ಬೀಸಿಗಿದು :( ಸಾವಿನ ..ನೋವಿನ ಕವಿತೆ ..
  ಮತ್ತಿನ ಕವಿತೆಗಳೇ ನಿಮಗೆ ಒಪ್ಪೋದು

  ReplyDelete
 5. tumbaa sundara photo ashte gambheera kavana..... maatu maatigoo nagisuva prakaashanna saavina bagge BHANDHA kaLeyuva bagge baredare manassige kirikiri......
  aadaroo chandada photo joto andada kavana....

  ReplyDelete
 6. ರಂಜಿತಾ...

  ಬೇಕೆಂದರೆ
  ಬಾರದ...
  ಬೇಡವೆಂದರೆ
  ಬಿಡದ..
  ಸಾವು..
  ನಮ್ಮಿಷ್ಟವಲ್ಲ...
  ಆದರೂ..

  ನಮ್ಮವರು
  ನಮ್ಮಿಷ್ಟ ಪಡುವಾಗ..
  ನಮ್ಮಾಸೆ..
  ನೂರಿರುವಾಗ..
  ವಿರಕ್ತಿಯಿಲ್ಲದೇ..
  ವಿದಾಯ ಹೇಳುವ ಸಾವು ಬೇಕು ಅಲ್ಲವಾ...?

  ಧನ್ಯವಾದಗಳು..

  ReplyDelete
 7. ಕವನವೇನೋ ಚೆನ್ನಾಗಿದೆ ಪ್ರಕಾಶಣ್ಣ . ಆದರೆ ಇನ್ನೂ ಬದುಕಬೇಕಿತ್ತು ಅನ್ನಬಹುದಾದ ವಯಸ್ಸಿನಲ್ಲಿ ಸಾವನ್ನು ಬಯಸುವುದು ಎಷ್ಟು ಸರಿ? ಹಾಗೆ ಬಯಸುವವರ ದೃಷ್ಠಿಯಲ್ಲಿ ಸರಿಯೆನಿಸಿದರೂ ಅವರನ್ನೇ ನಂಬಿದವರ ಗತಿಯೇನು?

  ReplyDelete
 8. ವಿಧಿನಿಯಾಮಕದ೦ತೇ ಸಾವೂ ಬ೦ದೆರಗಿದಾಗ, ಬದುಕಬೇಕೆ೦ದು ನೀರೀಕ್ಷಿಸಿಟ್ಟ, ಬದುಕನ್ನು ಕಟ್ಟಿಟ್ಟು-ಬ೦ಧುಗಳ ಬ೦ಧ ಬಿಚ್ಚಿಟ್ಟು, ಹೊರಡಬೇಕಾದ ಅನಿವಾರ್ಯತೆ- ಎಲ್ಲರ ಹುಟ್ಟಿನೊ೦ದಿಗೆ ಅ೦ಟಿಕೊ೦ಡಿದೆ. ಹಾ!! ಆದರೇ ಈ ಅನಿವಾರ್ಯತೆಯ ಅರಿವಿದ್ದೂ, ಬದುಕನ್ನು ಹೀಗೆ-ಹಾಗೆ ಬದುಕಬೇಕು ಎ೦ಬ ಕನಸಿನೊಡನೆ ಮತ್ತು ಆ ಕನಸನ್ನು ನನಸಾಗಿಸುವ ಹೋರಾಟದ ಬದುಕನ್ನು ಮನುಷ್ಯ -ತನಗೆ ಅ೦ತ್ಯವಿಲ್ಲವೇನೋ, ಎ೦ಬ ಪರಿಯಲ್ಲಿ ನಡೆಸುವದು ಸೋಜಿಗವೇ! ಅಲ್ಲವೇ!
  ಹಾ ಸಾವು ಒ೦ದರ ಅ೦ತ್ಯ ಮತ್ತೊ೦ದರ ಪ್ರಾರ೦ಭವೂ ಇರಬಹುದು -ಗೀತೆಯಲ್ಲಿ ಕೃಷ್ಣ ಹೇಳಿದ ಹಾಗೆ ಅಥವಾ ನಮ್ಮ ಕಿರುಪರದೆಯ ಜನ್ಮಾ೦ತರಿ ನಿರೂಪಕರ ಪ್ರಕಾರ.
  ಒಟ್ಟಿನಲ್ಲಿ ಸಣ್ಣ ಶಬ್ದಗಳ ಸಣ್ಣ ಚುಟುಕಿನಲ್ಲಿ ಮಹತ್ತರ ಯೋಚನೆಗಳ ಚಿ೦ತನೆ ಹರಡುವದರಲ್ಲಿ ತಾವೂ ನಿಸ್ಸೀಮರು. ಜೊತೆಗೆ ತಮ್ಮ ಲೇಖನದ ಪ್ರತಿಕ್ರಿಯೆಗಳಲ್ಲಿ ಮರು ಪ್ರತಿಕ್ರಿಯೆ ಮಾಡುತ್ತಾ, ತಮ್ಮ ಲೇಖನದ ಹರಹುಗಳನ್ನು ವಿಸ್ತಾರವಾಗಿಸುವ ಪರಿ, ಬ್ಲೊಗ್-ಓದುಗರನ್ನು ಪದೇ ಪದೇ ತಮ್ಮ ವಿಳಾಸಕ್ಕೆ ತಿರುಗಿಸುವ೦ತೆ ಮಾಡುತ್ತದೆ. ಧನ್ಯವಾದಗಳು.

  ReplyDelete
 9. ಪ್ರಕಾಶಣ್ಣ,
  ಮುತ್ತು ಮತ್ತು ಇಲ್ಲದೆ ಬದುಕು ಸಾವು ಬಗೆ ಬರೆದಿದ್ದೀರ.....
  ಇದು ಸಹ ಸೂಪರ್ ಸಾಲುಗಳು....

  ReplyDelete
 10. hay ajjayya... photo rashi chanda iddu... aadre ninge ee savu novu ella sari battille... ninge enidru.. bari comedy matra....

  ReplyDelete
 11. ಪ್ರಕಾಶಣ್ಣ ,
  ಚಂದದ ಸಾಲಿಗೆ ಸೆಲ್ಯೂಟ್ .
  ಬಂಧು -ಬಂಧ -ಅನುಬಂಧ ಬಿಡುವುದು ಅಷ್ಟು ಸುಲಭವಲ್ಲ ಆಲ್ವಾ?

  ReplyDelete
 12. ಪ್ರಕಾಶಣ್ಣ ಈ ಕವನ ಚನ್ನಾಗಿದೆ ಹುಟ್ಟು ನಮಗೆ ಗೊತ್ತಾಗುತ್ತೆ ಆದ್ರೆ ಸಾವು ಹೇಳದೆ ಬಾರೋ ಅತಿಥಿ ಅಲ್ವ. ನಾವು ಬೇಕೆಂದಾಗ ಕರೆದರೂ ಬರೋಲ್ಲ, ಮತ್ತೆ ನಮ್ಮಿಷ್ಟದಂತೆ ಸಾಯಲು ಆಗೋಲ್ಲ. ನಮ್ಮ ಆತ್ಮೀಯರು ಮತ್ತು ನಮ್ಮ ಆಸೆಗಳು ಇನ್ನು ಇರುವಾಗಲೇ ಆ ಸಾವು ಬಂದ್ರೆ ಎಷ್ಟು ಚನ್ನ. ಅದು ಜೀವನದ ಮೇಲಿನ ವ್ಯಾಮೋಹ ಕಳೆದ ನಂತರ ಬಂದರೆ ಅದ್ರಲ್ಲಿ ಏನು ವಿಶೇಷತೆ ಇರೋಲ್ಲ. ಹುಟ್ಟು ನಿಶ್ಚಿತ ಸಾವು ಖಚಿತ.

  ReplyDelete
 13. tumba chennagide photo, jotege saalugaLu chennagive.

  ReplyDelete
 14. Prakshanna,, thumba chennagide..!!! bahala arthapoornavada salugalu!!...

  ReplyDelete
 15. ದಿನಕರ..

  ಬೇಡದ
  ಬಿಡದ..
  ಕರೆಯ
  ಎಂದೂ ಬೇಕಾದರೂ
  ಬರಬಹುದು..

  ಅಲ್ಲವಾ...?

  ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

  ReplyDelete
 16. ಸುಮಾ...

  ಯಾರಿಗೂ..
  ಇಲ್ಲಿ
  ಯಾರೂ..
  ಅನಿವಾರ್ಯವಲ್ಲ...

  ಇದ್ದಾಗ..
  ಪ್ರೀತಿ..ಪ್ರೇಮ..

  ಇಲ್ಲದುದಗಳ
  ನಡುವಿನ
  ಬದುಕೂ..ಇಲ್ಲಿದೆ..
  ಬದುಕಬೇಕಾಗುತ್ತದೆ...

  ಬೇಡವೆಂದರೂ..
  ಬಿಡದ...
  ಬಾ..
  ಎಂದರೆ..
  ಬಾರದ...
  ಸಾವು..
  ನಮ್ಮ ಎಣಿಕೆಯಲ್ಲಿಲ್ಲ...

  ನಮ್ಮಿಷ್ಟದ..
  ಬದುಕು.. ನಮಗಿರುವಾಗ..
  ನಮ್ಮಿಷ್ಟದವರು..
  ನಮ್ಮನ್ನು ಇಷ್ಟಪಡುವಾಗ...

  ಬದುಕಿನಲ್ಲಿ..
  ಆಸಕ್ತಿ ಇರುವಾಗಲೇ...

  ಹೊರಟು ಹೋಗುವದು ಒಳ್ಳೆಯದಲ್ಲವೆ..?

  thanksu.....

  ReplyDelete
 17. ಕವಿತೆ ತುಂಬಾ ಚೆಂದವಿದೆ ಪ್ರಕಾಶ್. ಇನ್ನೊಂದಷ್ಟು ದಿನ ಬದುಕಬೇಕು ಅನ್ನೋವಾಗಲೇ ಎಲ್ಲ ತೊರೆದು ಹೋಗಿಬಿಡುವ ಪ್ರಕ್ರಿಯೆ ಚೆನ್ನಾಗಿದೆ. ಕರೆದರೂ ಬಾರದ ಸಾವು, ಇನ್ನೊಂದಷ್ಟು ದಿನ ಬದುಕಲೇ ಬೇಕು ಅನ್ನುವಾಗ ಸಾವು ಧುತ್ತೆಂದು ಕರೆದೊಯ್ದುಬಿಡಬೇಕು...! ಆದರೂ ಸಾವು, ಬದುಕಿನ ಹಂಬಲಕ್ಕೆ ಸ್ವಲ್ಪ ವಿನಾಯಿತಿ ತೋರಬೇಕಿತ್ತು ಎಂಬ ಭಾವ ಮೂಡಿದ್ದು ಸುಳ್ಳಲ್ಲ.

  -ವಿನಯ್.

  ReplyDelete
 18. ಪ್ರಕಾಶಣ್ಣ,
  ಚಿತ್ರ & ಕವನ ಸೂಪರ್ :)
  ಹುಟ್ಟಿನ ರೀತೀಲೇ ಸಾವು ಕೂಡ ಚೆಂದವಾಗಿರುತ್ತೆ ಅಂತ ನನ್ನ ಅನಿಸಿಕೆ :)
  -ಸವಿತ

  ReplyDelete
 19. "ನಮ್ಮಿಷ್ಟದ..
  ಬದುಕು.. ನಮಗಿರುವಾಗ..
  ನಮ್ಮಿಷ್ಟದವರು..
  ನಮ್ಮನ್ನು ಇಷ್ಟಪಡುವಾಗ...
  ಬದುಕಿನಲ್ಲಿ..
  ಆಸಕ್ತಿ ಇರುವಾಗಲೇ..."

  ನಾಳಿನ ಸಾವು ಬೆನ್ನ ಹಿಂದೆ ಹೊಂಚಿ ಕುಳಿತಿದೆ
  ಎನ್ನುವ ನೆನಪಿನೊಡನೆ..
  ಬದುಕಿನ ಭಾವರಸ ಹೀರಿ ಬಿಡು,
  ಸಿಕ್ಕಿದ ಒಂದೇ ಒಂದು ಬದುಕಿಗೊಂದು
  ನ್ಯಾಯ ಒದಗಿಸು...

  ಚಿಕ್ಕ ಚೊಕ್ಕ,ಸುಂದರ ಸಾಲುಗಳ
  ಕವನ ಮುದ್ದಾಗಿದೆ.
  ಇಷ್ಟವಾಯಿತು.

  ReplyDelete
 20. prakashanna,
  photo super mattu kavnada saalugaloo saha.
  ee photo ondu vidhadalli 'tarnedo' taraha kaanuttide.

  thanks

  ReplyDelete
 21. 'ಸಿಮೆಂಟು ಮರಳಿನ ಮಧ್ಯೆ' ಅವ್ರೆ..,

  ನೆರೆಯವರು ಹೇಳಿದಂತೆ ಫೋಟೋ ಸೂಪರ್..
  ಬರಹವೂ ಮಸ್ತ್..!
  ಅದೇಕೆ ಸಾವು ಬರಬೇಕಿತ್ತು..!

  Blog is Updated: http://manasinamane.blogspot.com

  ReplyDelete
 22. ಚುಕ್ಕಿ ಚಿತ್ತಾರ...

  ಹುಟ್ಟು ಒಂದೇ ರೀತಿ...
  ತಾಯಿ ಗರ್ಭದಿಂದ...

  ಒಂದೇ ಕಾರಣ...

  ಆದರೆ ಸಾವು....

  ಹಲವು ರೀತಿ..
  ಹಲವು ಬಗೆ..
  ಹಲವು ಕಾರಣ...
  ಹಲವು ವಿನಾಕಾರಣ...

  ಹುಟ್ಟು ..
  ಹೇಗೆ..
  ಏನು...ಯಾಕೆ... ಎಲ್ಲ ಗೊತ್ತು...

  ಸಾವು...

  ಒಂದು ರಹಸ್ಯ...
  ಅದೇ ಅದರ ಸ್ವಾರಸ್ಯ...
  ಬದುಕಿನ ಕೊನೆಗೊಂದು ಅರ್ಥ ಕೊಡುವದು...
  ಅರ್ಥವಾಗದಿದ್ದರೂ...

  ಧನ್ಯವಾದಗಳು...

  ReplyDelete
 23. ಪ್ರಕಾಶಣ್ನ...
  ಚಿತ್ರ ಇಷ್ಟವಾಯ್ತು.

  ReplyDelete
 24. ಈ ಆಕಸ್ಮಿಕ , ಅನಿರೀಕ್ಷಿತ ಸಾವನ್ನು ಬಯಸೋದು ಬೇಡ ಪ್ರಕಾಶಣ್ಣ .
  ನಿರೀಕ್ಷಿತ ಸಾವು ದು:ಖದ ಜೊತೆಗೆ ಸ್ವಲ್ಪ ಸಮಾಧಾನವನ್ನೂ ತರುತ್ತದೆ ..!! ಎಲ್ಲರೂ ಮನ:ಪೂರ್ತಿ ಬೀಳ್ಕೊಡುತ್ತಾರೆ ಅಲ್ಲ್ವಾ ?

  ReplyDelete
 25. ಮೊನ್ನೆ ಊರಿಗೆ ಹೋದಾಗ ಒಂದು ಸಾವನ್ನು ಹತ್ತಿರದಿಂದ ನೋಡಿ ಬಂದ ನನಗೆ ನಿಮ್ಮ ಈ ಕವಿತೆ ಓದಿದಾಗ ಏನು ಹೇಳಬೇಕೂಂತಾಣೆ ತೋಚುತ್ತಿಲ್ಲ... ಜೀವನದ ಎಲ್ಲ ಹಂತಗಳನ್ನು ದಾಟಿದ ವೃದ್ಧೆಗೂ ಇನ್ನೂ ಬದುಕಬೇಕೆಂಬ ಆಸೆ ಇರುವುದು ನಾನು ನೋಡಿದ ಸತ್ಯ!..
  ಗಂಭೀರದ ವಿಷಯವನ್ನು ಸರಳವಾಗಿ ಹೇಳಿದ್ದೀರಾ ಪ್ರಕಾಶ್!

  ReplyDelete