Friday, June 3, 2011

ಮರೆಯದ.. ಮರೆಯಾಗದ ..ನೆನಪುಗಳು..


ಅಂದು..
ನೀ..
ನಾಚಿ.. 
ನೀರಾಗಿ..
ಮುಚ್ಚಿದ..
ಕಣ್ಣಾಲಿಗಳು..
ಕಾಡುತ್ತವೆ ಹುಡುಗಿ..


ಇಂದೂ..
ದಿಟ್ಟಿಸಿ ನೋಡುತ್ತವೆ ..
ಭಾವಾಂತರಂಗದಲ್ಲಿ..
ನೋವಾಗಿ..
ಎಂದಿಗೂ..
ಹೃದಯ ಹಿಂಡುವ ...
ಮರೆಯದ.. 
ಮರೆಯಾಗದ ನೆನಪುಗಳಾಗಿ...






(ಗೆಳೆಯರೇ.. 

ಅಜ್ಞಾತ ಬ್ಲಾಗ್ ಓದುಗರೊಬ್ಬರು  ಬಿಡಿಸಿದ ಚಿತ್ರ ಇದು..

ಅವರು ಆಗಾಗ  ಇಂಥಹ ಪೆನ್ಸಿಲ್ ಸ್ಕೆಚ್ ಚಿತ್ರಗಳನ್ನು ಕಳುಹಿಸುತ್ತಿರುತ್ತಾರೆ..


ಕಣ್ಣು ಮುಚ್ಚಿದ್ದರೂ ಹೇಳುವ ಭಾವಗಳು ನೂರಾರು...


ಇಂಥದೊಂದು  ಫೋಟೋ ತೆಗೆಯಬೇಕೆಂಬುದು ನನ್ನ ಕನಸು...
ಇರಲಿ..


ಅಜ್ಞಾತ ಮಿತ್ರರಿಗೆ..
ಅವರ ಸ್ನೇಹಕ್ಕೆ..

ಪ್ರೀತಿಗೆ..
ಅವರ ಕೈಗಳಿಗೆ..
ಅವರ ಮನಸ್ಸು...
ಕಲೆಗಳಿಗೆ ನನ್ನ ನಮನಗಳು..)




22 comments:

  1. Deine Sprache ist mir fremd, nicht aber Deine Bilder.
    ich sehe hier auf Deinem Blog sehr gut Bilder.
    liebe Grüsse Hanspi

    ReplyDelete
  2. ಮೊದಲ ಪ್ರತಿಕ್ರಿಯೆಯ ಅರ್ಥ ಹೀಗಿದೆ..

    Your language is foreign to me, not your pictures.
    I see here on your blog very good pictures.
    greetings Hanspi

    ಕಲೆಗೆ ಭಾಷೆಯ
    ಗೋಡೆ..
    ಗೊಡವೆಯೇಕೆ... ಅಲ್ಲವೆ?

    ReplyDelete
  3. ಚಂದ ಚಂದ ಸಂಗಾತಿ ನೋಟವೆ ಚಂದ
    ಅಂದ ಅಂದ ಗುಲಾಗಿ ತೋಟವೆ ಅಂದ.

    ಅಂದು ಎಂದು ಎಂದೆಂದೂ ಪ್ರಕಾಶಣ್ಣನ ಬ್ಲಾಗ್ ಚಂದ ಚಂದ...

    ReplyDelete
  4. Dear Hanspi Schär..
    Thank you very much... !!
    lots of love....

    ReplyDelete
  5. ವಿಶ್ನು ಪ್ರಿಯರೆ...

    ಚಿತ್ರ ಮತ್ತು ಸಾಲುಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

    ಹೇಗೆ ಮರೆಯಲಿ
    ಹುಡುಗಿ...
    ಮುಚ್ಚಿದ ಕಣ್ಣಾಲಿಗಳ ನೋಟ..
    ದೂರು..
    ದೂರುತ್ತ.
    ದೂರವಾದರೂ..
    ನಲ್ಲೆ..
    ನನ್ನಂತರಂಗದಲ್ಲಿ..
    ನೀ..
    ಇನ್ನೂ
    ಇರುವೆ..
    ಹಳೆಯ
    ನೆನಪುಗಳ ಕಟುಕುತ್ತ..
    ನನ್ನೊಂದಿಗೆ..
    ಇಂದಿಗೂ..
    ನನ್ನ ನೆನಪುಗಳ ಸುತ್ತ..

    ReplyDelete
  6. ನೀಲ ಲೋಚನೆ ಬಾಲೆ ಗಾಢ ಯೋಚನೆ ಯಾಕೆ ?

    ReplyDelete
  7. ಇಂದೂ..
    ದಿಟ್ಟಿಸಿ ನೋಡುತ್ತವೆ ..
    ಭಾವಾಂತರಂಗದಲ್ಲಿ..
    ನೋವಾಗಿ..
    ಎಂಥ ಚಂದದ ಸಾಲುಗಳು ಪ್ರಕಾಶಣ್ಣಾ......

    photo ಅಂತೂ excelent..... ಯಾರು ಬಿಡಿಸಿದ್ದು ನಿಂಗೂ ಗೊತ್ತಿಲ್ಯಾ?

    ReplyDelete
  8. tumba sundar saalugalu balu ishtavaayitu

    ReplyDelete
  9. ಅಜ್ಞಾತ ಕಲಾವಿದರ ಅದ್ಭುತ ಚಿತ್ರಕ್ಕೆ ತಕ್ಕನಾದ ಭಾವುಕ ಸಾಲುಗಳು ಜೈ ಹೋ ಪ್ರಕಾಶಣ್ಣ

    ReplyDelete
  10. hegadeji this is my first impression no words ar enough to descrbe the feelings of the picture..its simply superb

    ReplyDelete
  11. Chitra tumba sundaravagide...
    Chitrakke kottiruva bhava innu vishishtavaagide.. Kannu muchiruva chitrakke neevu kottiruva saalugalu adbhuta ...
    tumba ishtavaayitu..

    ReplyDelete
  12. ವಾವ್.. ಒಳ್ಳೇ ಸಾಲುಗಳು ಚಿತ್ರದ ಹಾಗೆಯೇ..

    ReplyDelete
  13. sundara chitrakke oLLeya kavana prakashaNNa..

    ReplyDelete
  14. ಉತ್ತಮ ಕವನ
    ಅವ್ಯಕ್ತ ಭಾವನೆಗಳು
    ಇಲ್ಲಿ ತಾಕೀ ತಾಕಿದಂತಿವೆ ಸರ್!
    ಸೂಪರ್...

    (ತಗೊಳ್ಳಿ ಈ counter)
    ಎಲ್ಲೋ ಮೀಟಿದಂತಾಗಿ
    ಏನೋ ತಾಗಿದಂತಾಗಿ
    ಯಾಕೋ ಕಾಡತಾಳ
    ಹುಡುಗಿ!
    ಅವಳ ಕಣ್ಣೋಟವೋ
    ಅಚ್ಚೊತ್ತಿದೆ ಎದೆಯೊಳಗೆ.

    ReplyDelete
  15. ಚಿತ್ರ ಮೆಚ್ಚಿದ ಎಲ್ಲರಿಗೂ..
    ಅಜ್ಞಾತ ಕಲಾವಿದರು ಕೃತಜ್ಞತೆಗಳನ್ನು ತಿಳಿಸಿದ್ದಾರೆ...

    ReplyDelete