ನನ್ನ ...
ಪುಟ್ಟ ಹೃದಯ.....
ಬಯಸುತ್ತದೆ...ಹಂಬಲಿಸುತ್ತದೆ...
ಮೇರೆಯಿಲ್ಲದ ಬಾಂಧವ್ಯ...
ಬೇಲಿಯಿಲ್ಲದ ಬಂಧನ...
ವಾಂಛೆಯಿಲ್ಲದ.... ಆಸೆಗಾಗಿ.......
ಕಾದಿರುತ್ತದೆ...ಕಾತರಿಸುತ್ತದೆ....
ಪ್ರತಿ ಕ್ಷಣ.. ಕ್ಷಣವೂ...
ಹೊತ್ತು ಗೊತ್ತಿನ ಪರಿವಿಲ್ಲದೆ...
ಪ್ರೀತಿ ಪ್ರೇಮದ ಸೆಲೆಗಾಗಿ....
ಹೊತ್ತು ಗೊತ್ತಿನ ಪರಿವಿಲ್ಲದೆ...
ಪ್ರೀತಿ ಪ್ರೇಮದ ಸೆಲೆಗಾಗಿ....
ಗೆಳೆಯಾ.....
ನಿನ್ನ.....
ಸ್ವಚ್ಚ ಮನಸ್ಸಿನ..ಸ್ನೇಹಕ್ಕಾಗಿ.....
ವಾಹ್,,,,ಸಕತ್ ಆಗಿ ಇದೆ, ಪ್ರಕಾಶ್....ಲವ್ಲೀ,,,,,,:-)
ReplyDeleteಗುರು...
ReplyDeleteಬಂಧನವಿದ್ದರೂ..
ಬೇಲಿಯ ಹಂಗಿರಬಾರದು...
ಬದ್ಧತೆ ಇರುವ...
ಸ್ವಚ್ಛ ಹ್ರದಯದ...
ಸ್ನೇಹ...
ನಾನೂ... ನೀವೂ...
ಎಲ್ಲರೂ...
ಬಯಸುತ್ತಾರಲ್ಲವೇ...?
ವಂದನೆಗಳು...
ಚಿತ್ರದಲ್ಲಿರುವ ಭಾವನೆಗಳನ್ನ ಕವನದ ಮೂಲಕ ಚೆನ್ನಾಗಿ ಬಿಂಬಿಸಿದ್ದಿರಿ.
ReplyDeleteಒಂದು ಒಳ್ಳೆ ಸ್ಹೇಹ ಕಾವ್ಯ.
ರವಿ
ಪ್ರಕಾಶಣ್ಣ,
ReplyDeleteಫೋಟೋ ನೋಡಿ ಕವನ ಬರೆಯುತ್ತೀರೊ....
ಕವನ ಬರೆದು ಫೋಟೋ ಹಾಕುತ್ತೀರೊ....
ನಮಗಂತೂ ಎರಡು ಸೂಪರೊ.....
ರವಿಯವರೆ.....
ReplyDeleteಮೊನ್ನೆ ಶಿವು, ಮಲ್ಲಿಕಾರ್ಜುನ್ ಜೊತೆ ಮೈಸೂರಿಗೆ ಹೋದಾಗ ತೆಗೆದ ಫೋಟೊ ಅದು...
ಅದಕ್ಕೆ ಹಾಗೇ..
ನಾಲ್ಕು ಸಾಲು ಬರೆಯುವ ಮನಸ್ಸಾಯಿತು...
ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...
ಮಹೇಶ್....
ReplyDeleteನನಗೆ ಇಷ್ಟವಾದ ಫೋಟೊವನ್ನು ಮೊದಲು ಪೋಸ್ಟ್ ಮಾಡುತ್ತೇನೆ...
ಫೋಟೊ ನೋಡಿ
ನನಗೆ ಅನ್ನಿಸಿದ್ದನ್ನು ಬರೆಯುತ್ತೇನೆ...
ಛಾಯಾ ಚಿತ್ತಾರದಲ್ಲಿ ಒಂದು ಪೋಸ್ಟ್ ಹಾಕಲು ನನಗೆ ಅರ್ಧ ಗಂಟೆ ಸಾಕಾಗುತ್ತದೆ...
ಓದುಗರು ಇಷ್ಟಪಟ್ಟಿದ್ದು ತುಂಬಾ ಖುಷಿಯಾಗುತ್ತಿದೆ...
ಧನ್ಯವಾದಗಳು ಮಹೇಶ್...
ಸರ್,
ReplyDeleteಸ್ನೇಹಕ್ಕಾಗಿ ಒಳ್ಳೆಯ ಚಿತ್ರ ಮತ್ತು ಅದಕ್ಕೆ ತಕ್ಕಂತೆ ಕವನ...