Saturday, October 10, 2009

ಮರೆಯದೇ... ಮರೆಯಾದವರು...


ನೆನಪಾಗುತ್ತಾರೆ...

ನನ್ನಲ್ಲಿ....

ನಗುವಾಗಿ ಬರುತ್ತಾರೆ...

ಹಿತವಾಗಿ....

ಮಧುರವಾಗಿ ..ಕಾಡುತ್ತಾರೆ...

ಕಣ್ಣಲ್ಲಿ..ಕನಸಾಗಿ...

ಮನದಲ್ಲಿ ಭ್ರಮೆಯಾಗಿ..

ಮತ್ತೆ ಮತ್ತೆ..

ಮರೆಯದೆ....

ಮರೆಯಾಗುತ್ತಾರೆ...

ದೂರ ಗಗನದ ತಾರೆಯಾಗುತ್ತಾರೆ.....15 comments:

 1. ಪ್ರಕಾಶಣ್ಣ,
  ಮನಸೆಳೆದವರು.....
  ಮನಸಿನಿಂದ ಮರೆಯಾಗದಿರುವವರು...
  ಚೆನ್ನಾಗಿದೆ ಕವನ....

  ReplyDelete
 2. ಮಹೇಶ್...

  ಕೆಲವರ ನೆನಪೇ ಹಾಗೆ...
  ಮರೆಯದೇ
  ಹೃದಯದಲ್ಲಿ ಉಳಿದುಬಿಡುತ್ತಾರೆ...
  ನೋವು ಕೊಡದೆ..
  ಹಿತವಾದ ನೆನಪಾಗಿ...

  ದಿವ್ಯಾರವರ ಲೇಖನ ಓದಿ
  ಅವರ ಬ್ಲಾಗಿನಲ್ಲಿ ಹಾಕಿದ
  ಪ್ರತಿಕ್ರಿಯೆ ಇದು...

  ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

  ReplyDelete
 3. ನೆನಪು......
  ಕಾಡುತ್ತಾರೆ.....
  ಮ್ರದುವಾಗಿ.. .
  ಕರಗಿಸುತ್ತಾರೆ..
  ಕನಸಾಗಿ....

  Really nice one..... nice photo also...

  ReplyDelete
 4. ಪ್ರಕಾಶ್,,
  ತುಂಬ ಚೆನ್ನಾಗಿ ಇದೆ ಕವನ,, ಚಿಕ್ಕದಾದರೂ,, ಎಷ್ಟು ಅರ್ಥಗರ್ಬಿಥ ವಾಗಿ ಇದೆ.. "ನೆನಪಾಗ್ತಾರೆ, ಕಡ್ತಾರೆ,, ಮರೆಯದೆ ಮರೆಯಗ್ತಾರೆ....ವಾಹ್....ಸೂಪರ್ "
  ಫೋಟೋ ನು ಚೆನ್ನಾಗಿ ಇದೆ

  ReplyDelete
 5. ದಿನಕರ...

  ಕೆಲವರ ನೆನಪೇ ಹಾಗೆ...
  ಮರೆಯಾಗದೆ..
  ಮಧುರವಾಗಿ..
  ಮನದಲ್ಲಿಳಿದು..
  ಸುಂದರ ಹಾಡಾಗಿ...
  ನಮ್ಮ....

  ಧ್ವನಿಯಲ್ಲಿರುತ್ತಾರೆ...

  ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

  ReplyDelete
 6. ಬರೆಯುತ್ತಾರೆ,
  ಪ್ರಕಾಶಣ್ಣ
  ಕವಿತೆಗಳನ್ನು ...
  ಹೃದಯದೊಳಗಿನ ಭಾವ
  ಮೀಟುವಂತೆ..
  ಯಾವುದೋ ನೆನಪುಗಳು
  ಕಾಡುವಂತೆ ,
  ತುಟಿಯಂಚಿನಲಿ
  ಮಿಂಚು ಮೂಡುವಂತೆ ...

  ReplyDelete
 7. ಕವಿತೆ ಚೆನ್ನಾಗಿದೆ ಆ photo ದಂತೆ.
  photo ಮನಸೆಳೆಯುತ್ತೆ ಆ ಕವನದಂತೆ.

  ReplyDelete
 8. ಗುರು...
  ಧನ್ಯವಾದಗಳು...

  ಸೀತಾರಾಮ್ ಸರ್...
  ವಂದನೆಗಳು...

  ಚಿತ್ರಾ..
  ನಿಮ್ಮ ಪ್ರತಿಕ್ರಿಯೆ ಒಂದು ಪುಟ್ಟ ಹನಿಕವನ...
  ಧನ್ಯವಾದಗಳು...

  ವಿಜಯಕಮಂತ...
  ನಮಸ್ತೆ...

  ಕ್ಷಣ ಚಿಂತನೆ (ಚಂದ್ರು)...
  ಧನ್ಯವಾದಗಳು...

  ವಿನಾಯಕ ಹೆಬ್ಬಾರ....
  ತುಂಬಾ ಖುಷಿಯಾಯಿತು..
  ಬರುತ್ತಾ ಇರಿ...

  ReplyDelete
 9. ಹ್ವಾಯ್ ಪ್ರಕಾಶಣ್ಣ ! ಕವಿತೆ ಸೂಪರ್! ಫೋಟೋ ಅದಕ್ಕಿಂತ ಸೂಪರ್ ! ಇಟ್ಟಿಗೆ ಸಿಮೆಂಟಿನ ಮಧ್ಯೆ ಈ ಬ್ಲಾಗು ನೋಡಲ್ಲೇ ಮರ್ತೋಗ್ತು ಮಾರಾಯಾ...

  ReplyDelete
 10. ಮಧುರವಾಗಿ ..ಕಾಡುತ್ತಾರೆ...

  ಕಣ್ಣಲ್ಲಿ..ಕನಸಾಗಿ...

  ಮನದಲ್ಲಿ ಭ್ರಮೆಯಾಗಿ..


  thumbaa chennagide!!

  ReplyDelete
 11. nimma kavitegalu kaaduttave prakash ji.

  ReplyDelete
 12. ಅದ್ಭುತವಾದ ಸಹಜ ಬೆಳಕಿನಲ್ಲಿ ಚಿತ್ರ ಭಾವನಾತ್ಮಕವಾಗಿ ಚೆನ್ನಾಗಿ ಮೂಡಿಬಂದಿದೆ.

  ReplyDelete