Sunday, November 1, 2009

ಈ...ಗಲ್ಲ ಆಗಲ್ಲ...!




ಈ ಗಲ್ಲ ಈಗಲ್ಲ..

ಮುದ್ದಾಗಿದೆಯಲ್ಲ

ಆಗಲ್ಲ ಎನ್ನಲಾಗುತ್ತಿಲ್ಲವಲ್ಲ...

ನೆನಪಾಗುತ್ತಿದೆಯಲ್ಲ

ನನ್ನಾಕೆಯ...

ಆ ಗಲ್ಲ

...ಆಗಲ್ಲ


26 comments:

  1. ಆತ್ಮೀಯ

    ಗಲ್ಲ ಮುದ್ದಾಗಿದೆ. :)

    ReplyDelete
  2. ಲೋದ್ಯಾಶಿಯವರೆ...

    ಹಾಗಲ್ಲ...
    ಈಗಲ್ಲ ಆಗಲ್ಲ...
    ಹಚ್ಚಿ ಒರೆಗಲ್ಲ..
    ಮಗನ ಹಟ ಹೋಗಲ್ಲ..
    ಮಡದಿ ಹೇಳುತ್ತಾಳೆ "ಈಗಲ್ಲ"
    ಏನೋ ಹೇಳ ಬೇಕಿಂದಿದ್ದೆ ನೆನಪಾ"ಗಲ್ಲ"..

    Thank you...!

    ReplyDelete
  3. ಪ್ರಕಾಶಣ್ಣ,

    ಹೌದಲ್ಲ.....
    ಹೇಳಂಗಿಲ್ಲ...
    ಬಿಡಂಗಿಲ್ಲ...

    ReplyDelete
  4. ದಿನಕರ....

    ಇದು ಹಾಗಲ್ಲ....

    ಹೇಳಕ್ಕಾಗಲ್ಲ...
    ಬಿಡಕ್ಕಾಗಲ್ಲ...

    ಧನ್ಯವಾದಗಳು...

    ReplyDelete
  5. ಈಗೆಲ್ಲ ಆಗಲ್ಲ
    ಅಂತ ಹೇಳಲಾಗದಂತೆ
    ಮತ್ತೆ ಮತ್ತೆ ಗೆಲ್ಲುವ ಗಲ್ಲ....
    ನಾವೇನು ಮಹಾ...
    ಗಲ್ಲಗಳಿಗೆ ಸೋತು
    ಶರಣಾಗಿದ್ದನಂತೆ
    ದ್ವಾಪರದಲ್ಲೊಬ್ಬ ಗೊಲ್ಲ....!!

    ReplyDelete
  6. ಗಲ್ಲ
    ಬೆಲ್ಲದಷ್ಟೆ
    ಸವಿಯಾಗಿದೆಯಲ್ಲ....
    ಚೆಂದದ ಸಾಲುಗಳು ಪ್ರಕಾಶಣ್ಣ......

    ReplyDelete
  7. ಕಡೆಗೆ ಗಲ್ಲವನ್ನೂ ಬಿಡಲಿಲ್ವೆ ನೀವು!! ಶಬ್ದಗಳ ಜೊತೆಗೆ ನೀವಾಡುವ ಆಟ ಮನಮೋಹಕ!

    ReplyDelete
  8. ಪ್ರಕಾಶಣ್ಣ..
    ''ಗಲ್ಲ'' '' ಗಿಲ್ಲ' ಲು''
    ಮಲ್ಲ. ಜಗಮಲ್ಲ ರ ಸಾಲು ಸಾಲು...

    ಜುಗಲ್ ಬಂದಿ ತುಂಬಾ ಚೆನ್ನಾಗಿ ಸಾಗಿದೆ ಕಾಮೆಂಟ್ ಬಾಕ್ಸ್ ನಲ್ಲಿ.... ಹೀಗೆ ಮುಂದುವರಿಯಲಿ...

    ReplyDelete
  9. ದಿಲಿಪ್...

    ಆ ಗಲ್ಲ..
    ಬೇಕಾಗಲ್ಲ..
    ಈ ಗಲ್ಲ ಸಾಕಲ್ಲ...!

    ನಿಮ್ಮ ಪ್ರತಿಕ್ರಿಯೆ ಚೆನ್ನಾಗಿದೆಯಲ್ಲ... ಥ್ಯಾಂಕ್ಯೂ...!

    ReplyDelete
  10. ಮಹೇಶ್... (ಸವಿಗನಸು)
    ಆ... ಗಲ್ಲ..
    ಈ ... ಗಲ್ಲ ಮಧ್ಯೆ....
    ನಾ ಒದ್ದಾಡ ಬೇಕಿದೆಯಲ್ಲ...

    ಯಾಕೆ ಹೀಗೆಲ್ಲ...?

    ReplyDelete
  11. ಸುಮನಾ...

    ಅದು ಹಾಗಲ್ಲ...
    ಈ ಗಲ್ಲ ನಂಗೆ ಬೇಕಲ್ಲ...
    ಮಧ್ಯದದಲ್ಲಿ..
    ಆ ಗಲ್ಲ
    ಬಂದು..
    ಹೇಗೆಲ್ಲ ಆಗಿದೆಯಲ್ಲ...!

    ಥ್ಯಾಂಕ್ಯೂ...

    ReplyDelete
  12. ದಿನಕರ...

    ನಿಮಗಿನ್ನೂ ಮದುವೆಯಾಗಿಲ್ಲವಲ್ಲ...
    ಮತ್ತೇಕೆ ಈಗಲ್ಲ... ಆ ಗಲ್ಲ...?

    ಬಿಟ್ಟುಬಿಡಿ ಇದೆಲ್ಲ ನಮಗಲ್ಲ...!

    ಈಗಿನ ಹುಡುಗರು ನೀವೆಲ್ಲ...
    ಏನೂ ಹೇಳಕ್ಕಾಗಲ್ಲ...!!!!!

    ಥ್ಯಾಂಕ್ಯೂ...!

    ReplyDelete
  13. ಪ್ರಕಾಶ್, ಈ ಗಲ್ಲ ರಸಗುಲ್ಲ. ನಿಮ್ಮ ಎಲ್ಲಾ ಕವನಗಳು, ಹಾಗೂ ಫೋಟೋಗಳೂ ತುಂಬಾ ಉತ್ತಮವಾಗಿವೆ

    ReplyDelete
  14. ಪ್ರಕಾಶಣ್ಣ,
    ನನ್ನಿಂದ ತಪ್ಪಾಗಲ್ಲ,
    ಯಾಕಂದ್ರೆ, ನನ್ನ ಹೆಂಡತಿಗೆ ಈಗಲ್ಲ,
    ಮೂರು ವರ್ಷದಿಂದಲೂ ಮೋಸ ಮಾಡಕಾಗಲ್ಲ,
    ಆದರೂ,
    ಈ ಗಲ್ಲ ಆ ಗಲ್ಲ ನೋಡಿ ಸುಮ್ಮನಿರಕಾಗಲ್ಲ.....
    ಬಿಡಕ್ಕಾಗಲ್ಲ ......

    ReplyDelete
  15. ಗಲ್ಲ ಮುದ್ದಾಗಿದೆಯೆಲ್ಲ
    ಮುತ್ತು ಕದ್ದಾಗಿದೆಯೆಲ್ಲ
    ನಗುವಿನ ತುತ್ತು ನನ್ನದಾಯಿತಲ್ಲ
    ತುಂಬಾ ಚೆನ್ನಾಗಿದೆ 'ಗಲ್ಲ'

    ನಿಮ್ಮವ,
    ರಾಘು.

    ReplyDelete
  16. ಆಹಾಹಾ !
    ಗಲ್ಲದಷ್ಟೇ ಮುದ್ದಾದ ಕವನ !

    ReplyDelete
  17. ಮುದ್ದಾದ ಗಲ್ಲ ಯಾರಿಗೆ ಇಷ್ಟ ಆ’ಗಲ್ಲ’?
    :-)
    ಮಾಲತಿ ಎಸ್.

    ReplyDelete
  18. ದೀಪಸ್ಮಿತ..

    ದಿನಾ ಸಿಗುವ ಗಲ್ಲ..
    ಮಹತ್ವ ಗೊತ್ತಾಗಲ್ಲ...

    ಧನ್ಯವಾದಗಳು..

    ReplyDelete
  19. ದಿನಕರ...

    ಎಲ್ಲರ ಸಮಸ್ಯೆ ಇದಾಗಿದೆಯಲ್ಲ..
    ಮನೆಯಾಕೆಗಲ್ಲ
    ಗೊತ್ತಾದರೆ ಸಮಸ್ಯೆ ಆಗಲ್ಲ..?

    ಹ್ಹಾ...ಹ್ಹಾ...!

    ReplyDelete
  20. ರಘು...

    ನಿಮ್ಮಷ್ಟಕ್ಕೆ ನಕ್ಕರೆ ಆಗಲ್ಲ...
    ಸಂಗಡ ಜೊತೆಗಲ್ಲ...
    ಇದ್ದರೆ ಚೆನ್ನಾಗಿರುತ್ತದಲ್ಲ...!!

    ಧನ್ಯವಾದಗಳು...

    ReplyDelete
  21. ಚಿತ್ರಾ....

    ಹೀಗೆ ಹೇಳಿದರೆ ಸರಿಯಾಗಲ್ಲ..
    ನೀವು ನಕ್ಕಾಗಲ್ಲ..
    ಸೋಗಸಾಗಿರುತ್ತದಲ್ಲ...!

    ಧನ್ಯವಾದಗಳು..

    ReplyDelete
  22. ನೆನಪಿನ ಸಂಚಿಯಿಂದ...

    ಇಷ್ಟೆಲ್ಲ ಹೊಗಳಿದರೆ ಆಗಲ್ಲ...
    ಸೊಕ್ಕು ಬರಬಹುದು... ಗೊತ್ತಾಗಲ್ಲ...

    ಅಮೇಲೆ ಸುಲಬಹದಲ್ಲಿ ಬಗ್ಗಲ್ಲ..

    ಕಷ್ಟ ನನಗಲ್ಲ..?

    ಧನ್ಯವಾದಗಳು..

    ReplyDelete
  23. ಆಗಲ್ಲ.... ಈಗಲ್ಲ ....

    ಎಷ್ಟೊ೦ದು ಗಲ್ಲ..

    ಪರವಾಗಿಲ್ಲ...

    ಸೊಗಸಾಗಿದೆಯಲ್ಲ....

    ReplyDelete
  24. ಈ ಗಲ್ಲ ತರವಲ್ಲ,
    ಆ ಗಲ್ಲ ಮಧುವೆಲ್ಲ,
    ಹೊತ್ತಲ್ಲದ ಹೊತ್ತಲ್ಲಿ ಕೇಳಿದರೆ,
    ಸೊಗಸಿಲ್ಲ.ಸುಮ್ಮನಿರೋ ನೀ ನಲ್ಲ.........

    ಗುರು.

    ReplyDelete
  25. ಒಳ್ಳೇ ಕವಿತೆ
    ಜೋತೆ ಮುದ್ದಾದ ಪೋಟೋ

    ReplyDelete