Thursday, November 19, 2009

ಮತ್ತೂ.. ಮತ್ತು......!!


ಮತ್ತು... ಮತ್ತು...

ಈ ಮುತ್ತು..

ಮತ್ತೂ.. ಮತ್ತೂ ...
ಮತ್ತು...!

ನೀ...

ಕೊಡುವ ಮೊದಲೂ...

ಇತ್ತು..

ಕೊಟ್ಟ ಮೇಲೂ...ಮತ್ತು....

ನನಗಂತೂ....

ನಿನ್ನ ಮುತ್ತು..

ಮತ್ತೂ.. ಮತ್ತೂ... ಗಮ್ಮತ್ತು... !







16 comments:

  1. ನೀ
    ಮತ್ತು ಮತ್ತೂ
    ಹೊತ್ತು ತಂದೆ
    ಹೊತ್ತು ಹೊತ್ತಿಗೆ ಹತ್ತು
    ಇಪ್ಪತ್ತು ಮುತ್ತು...
    ಮೈಯೆಲ್ಲ ಮುತ್ತು
    ಮೈಯೆಲ್ಲ ಮತ್ತು...
    ಬಿಟ್ಟೆ ನಾ...
    ಗಡ೦ಗಿನಲಿ ಕುಳಿತು
    ಕುಡಿಯೋದ...
    ಶರಬತ್ತು...!!


    Woow... ಚಿತ್ರ ಮತ್ತು ಸಾಲುಗಳು ಸುಂದರವಾಗಿವೆ....

    ReplyDelete
  2. ಪ್ರಕಾಶಣ್ಣ....
    ಅನನುಭವಿಯಾದರೂ ನಿಮ್ಮ "ಮುತ್ತು" ಮತ್ತು "ಮತ್ತು"
    ಎರಡೂ ಬಹಳ ಇಷ್ಟವಾಯಿತು.

    ReplyDelete
  3. ಪ್ರಕಾಶಣ್ಣ ಸೂಪರ್ ಹ್ಹಿ ಹ್ಹಿ .... !!!!

    ReplyDelete
  4. ದಿಲಿಪ್...

    ಮತ್ತು ಮತ್ತು
    ಬೇಕಿತ್ತು...
    ನಿನ್ನ
    ಮುತ್ತು ಮತ್ತು
    ಮತ್ತು...

    ನಿಮ್ಮ ಕವಿತೆ ಸೂಪರ್...!

    ReplyDelete
  5. ಗುರು (ಮೂಕ ರೋಧನೆ)

    ಮತ್ತು
    ಮತ್ತಿನ ಅನುಭವಕ್ಕೆ...
    ಮುತ್ತು ಬೇಕಿಲ್ಲ...
    ಮುತ್ತಿನ ರುಚಿಯವರಿಗೆಲ್ಲ..
    ಮತ್ತಿನ..
    ಮುತ್ತು ಸಿಕ್ಕಿರಿವದಿಲ್ಲ...

    ಮತ್ತು..
    ಮುತ್ತಿನ ಭಾವದಲ್ಲಿದೆ..
    ಅನುಭಾವದಲ್ಲಿದೆ..

    ಅನುಭವಿಸುವ ಮನದಲ್ಲಿದೆ...

    ಏನಂತೀರಾ...?

    ಧನ್ಯವಾದಗಳು...

    ReplyDelete
  6. ಪ್ರಕಾಶಣ್ಣ...
    ನಿಮ್ಮ ಶಬ್ದದ ಜೊತೆ ಆಟ ಮುತ್ತಿನ ಮತ್ತಿನೊಂದಿಗೆ ಮುಂದುವರೆದಿದೆ....
    ಮುತ್ತಿನ ಮತ್ತು......
    ಬೇಕಿಲ್ಲ ಗತ್ತು....
    ಗೈರತ್ತು.....
    ಸಿಕ್ಕರೆ, 'ಇನ್ನೂ ಬೇಕಿತ್ತು',
    ಸಕತ್ತು....
    ಮತ್ತೆ ಮತ್ತೆ ಕೇಳಿತ್ತು....

    ReplyDelete
  7. ಚಳಿಗಾಲ ಹತ್ತಿರ ಬ೦ದ೦ತೆ ನಮ್ಮ ಬ್ಲೊಗಿಗರೆಲ್ಲಾ ಮುತ್ತು ಅನ್ನುತ್ತಾ ಅದರ ಬೆಚ್ಚನೆಯಾ ಕಾವಿನಲ್ಲಿ ಸುತ್ತುತ್ತಾ ಇದ್ದಾರೆ.
    ಹೀಗೆ ಮುತ್ತಿನಾ ಮಳೆ ಸುರಿಯುತ್ತಿರಲಿ ಚಳಿಗಾಲದ ತ೦ಡಿಯನ್ನು ಓಡಿಸಲು, ಮತ್ತು ಹಿಡಿಸಲು, ಕೆನ್ನೆ ಕೆ೦ಪಾಗಿಸಲು ಹಾಗೂ ಮುತ್ತಿಗಾಗಿ ನಲ್ಲ-ಇಲ್ಲದೆ ವಿರಹದ ಬೇಗೆ ಹೇಳಿಕೊಳ್ಳುವದು. ಭಾರೀ ಸರಕುಗಳು ವೈವಿಧ್ಯತೆಯಲ್ಲಿ ಬರುತ್ತಾ ಇವೆ.

    ReplyDelete
  8. ಮತ್ತಿನಲ್ಲಿ ಮುತ್ತಿನ ಮಳೆ ಸೊಗಸಾಗಿದೆ...
    ಸೂಪರ್ ಪ್ರಕಾಶಣ್ಣ...

    ReplyDelete
  9. nice, u could capture very minute details also

    ReplyDelete
  10. ಪ್ರಕಾಶಣ್ಣ, ಫೋಟೋ ಸೂಪರ್‌, ಚುಟುಕವೂ ಸೂಪರ್‌.

    ReplyDelete
  11. ಮುತ್ತಿನಾ ಮತ್ತಿನಲಿ
    ತಿಳಿಯಲಿಲ್ಲವೆ ಹೊತ್ತು ..
    ಕಳೆದು ಹೋಯಿತೇ ಹಗಲು
    ಇಳಿಸಂಜೆಯಾಗಿತ್ತು
    ಬುವಿಯ ಕೆನ್ನೆಯ ಮೇಲೆ
    ದಿನದ ಕೊನೆಯಾ ಮುತ್ತು
    ಕೊಟ್ಟು ಆ ನೇಸರನು
    ಮನೆಗೆ ಜಾರಿದ ಹೊತ್ತು
    ಮುತ್ತು ... ಮತ್ತೆಂದು
    ಕವನವಿದು ಮೂಡಿತ್ತು ....

    ಪ್ರಕಾಶಣ್ಣ ,
    ರೊಮ್ಯಾಂಟಿಕ್ ಕವನ !!

    ReplyDelete
  12. ಮಾತು ಮುತ್ತಿನ ಗಮ್ಮತ್ತು,,, ತುಂಬ ಚೆನ್ನಾಗಿ ಇದೆ

    ReplyDelete
  13. ಪ್ರಕಾಶಣ್ಣ.... ತುಂಬಾ ಚೆನ್ನಾಗಿದೆ ಸರ್..
    ಮುತ್ತು... ಮುತ್ತು...
    ಒಂದೊಂದು ಮುತ್ತು.... 'ನೀ' ನೀಡುತಲಿದ್ದರೆ...
    ನಿದ್ದೆಯೂ ಕೂಡ ಹತ್ತಿರ ಬರಲಾರೆ ಎನ್ನುವುದು...
    ನಿಮ್ಮವ,
    ರಾಘು.

    ReplyDelete
  14. ನಿಮ್ಮ ಈ ಬ್ಲಾಗಿಗೆ ನಾನು ಬ೦ದೇ ಇರಲಿಲ್ಲ, ಮೊದಲ ಬಾರಿ ಭೇಟಿ ಕೊಡುತ್ತಿದ್ದೇನೆ. ನಿಮ್ಮ ಮುತ್ತು-ಮತ್ತು-ಗಮ್ಮತ್ತು
    ಗಳ ಹಕೀಕತ್ತು ನೋಡಿದೆ, ಓದಿದೆ, ಚಿತ್ರ-ಕವನ ಎರಡೂ ಚೆನ್ನಾಗಿವೆ.

    ReplyDelete
  15. Excellent ! Just increase the fill in light a bit..and focus on butterfly's head.

    ReplyDelete
  16. ಮುತ್ತಿನ ಆ ಮತ್ತು ತುಂಬಾ ಚೆನ್ನಾಗಿದೆ, ಅದು ಪಡೆಯುವ ಮೊದಲೇ ಅದರ ಹೆಸರಿನಲ್ಲೇ ಒಂದು ರೀತಿ ರೋಮಾಂಚನ ಇನ್ನು ಅದು ದೊರೆತರೆ ಇನ್ನು ಕೇಳಬೇಕೆ ಮತ್ತು ಬಂದಹಾಗೆ ಚೆನ್ನಾಗಿದೆ ಮುತ್ತಿನ ಗಮ್ಮತ್ತು.

    ReplyDelete