ಛಾಯಾ ಚಿತ್ತಾರಾ....
Saturday, August 9, 2014
ನಿನ್ನ .. ನೆನಪುಗಳ ಮಿನುಗು ಚಂದ... !!!
ಬಡಿದು
ಬಡ
ಬಡಿಸುವ
ಢವ
ಢವಗಳಿಗಿಂತ...
ಕದ್ದೂ
ಕದ್ದು
ಇಣುಕಿ ..
ಕೆಣಕುವ
ನಿನ್ನ
ನೆನಪುಗಳ ಮಿನುಗು ಇನ್ನೂ ಚಂದ... !!!
Friday, August 1, 2014
ನಾ ನಿದ್ದೆ.. ನೀ... ಸಿಹಿ ಕನಸು... !
ನಾ
ನಿದ್ದೆ..
ನೀ
ಸವಿ ಕನಸು...
ನವಿರು
ಭಾವಗಳ ಮನಸು...
ಬಾ
ಹುಡುಗಾ
ನಗುವರಳಿಸು
ಹೂ
ಕೆನ್ನೆಗಳ ಮೇಲೆ
ಸಿಹಿ
ಮುದ್ದು
ಮುತ್ತಿನ
ಮಾತುಗಳು ಬಲು ಸೊಗಸು... !
ರೂಪದರ್ಶಿ
:::::
" ಅರ್ಪಿತಾ ಖೂರ್ಸೆ "
Friday, July 25, 2014
ಸದ್ದಿಲ್ಲದೆ ಪಿಸುಗುಡುತ್ತಿದೆ.. ನನ್ನೆದೆಯ ಮೌನ....
ಸುಮ್ಮನೆ ಗುನುಗುತ್ತಿದೆ...
ಸರಿಗಮ
ಸಂಗೀತ..
ನನ್ನೆದೆಯ ಏಕಾಂತದಲಿ...
ನೀ
ನಿರದ
ನೀರವದಲಿ
ನಿನ್ನ
ನೆನಪಿನ ಕಲರವ...
ಸದ್ದಿಲ್ಲದೆ
ಪಿಸುಗುಡುವ
ನನ್ನ
ಮೌನದಲಿ
ಹಾಡಾಗು ಬಾ ನೀ ಹುಡುಗಿ...
Saturday, June 28, 2014
ನನ್ನೆದೆಯಲ್ಲಿ.. ನೀ... ಮೌನವಾಗುವ ಹೊತ್ತು...
ಪ್ರೀತಿ
ನನ್ನೆದೆಯಲ್ಲಿ..
ಮೌನವಾಗುವ ಹೊತ್ತು...
ಈಗ
ಇದೀಗ
ಇಣುಕಿದೆ... !
ಈ
ಏಕಾಂತ
ಬಿಸಿಯಾಗಿ
ಉಸಿರಾಗುವ ಹೊತ್ತು...
ಅವಳ
ನೆನಪು
ನನ್ನ ಕಣ್ಣಲ್ಲಿ..
ನಾಚಿ
ಮುಗುಳ್ನಗುವಾಗುವ ಹೊತ್ತು...
ನಿಂತು
ನೀ
ಸ್ತಭ್ಧವಾಗಿಬಿಡು ..
ಓ .. ಬದುಕೆ...
ರೂಪದರ್ಶಿ
::
.........ಆಶೀಷ್ .........
Tuesday, June 17, 2014
ಬಾ... ನನ್ನ ಕತ್ತಲಲಿ... ಮೌನ.. ಮಿನುಗುವ ಹಾಗೆ...
ಬದುಕಬೇಕಿದೆ...
ಖಾಲಿ
ಖಾಲಿ ಆಸೆಗಳ ಹೊತ್ತು...
ಅಲ್ಲಲ್ಲಿ
ತಾರೆಗಳ ಬೆಳಕು..
ಕತ್ತಲಲ್ಲಿ
ನಿನ್ನ
ನೆನಪುಗಳ ಭಾರ...
ಅಲ್ಲಿ
ಮೋಡಗಳಾಚೆ.
ಬಾನಿನಂಗಳ ದಾಟಿ...
ಹಾರಿ
ತೇಲಿ ಹೋಗುವ ಬಾರೆ..
ಬಾ
ನನ್ನೆದೆಯ
ಒಂಟೀ
ಭಾವಗಳ ಚುಂಬಿಸು...
ಬಾ...
ಹುಡುಗಿ..
ಬಾ...
ನನ್ನ
ಕತ್ತಲಲಿ
ಮೌನ ಮಿನುಗುವ ಹಾಗೆ...
Friday, January 31, 2014
ನನ್ನ ತುಟಿಯಂಚಿನ.. ಮೌನಗಳ.. ನಗು ..!
ನನ್ನ ..
ತುಟಿಯಂಚಿನ..
ಮೌನಗಳ..
ನಗು ..
ಈ..
ಕಣ್ಣೊಳಗಿನ ಭಾಷೆ...
ನಾ..
ಹೇಳಲಾಗದ..
ನನ್ನೊಳಗಿನ..
ನಿಶ್ಯಬ್ಧ..
ಭಾವಗಳ ಮಾತುಗಳೇ.. ನೀನು..!
(ರೂಪದರ್ಶಿ :: ಕುಮಾರಿ ಅರ್ಪಿತಾ
ಯಕ್ಷಗಾನ ಪ್ರತಿಭೆ )
Tuesday, November 19, 2013
ನಿನ್ನ ಕಂಗಳಲಿ...ನನ್ನ ಕನಸು ಹಾಡಿದ ಹಾಡು...!
ಕತ್ತಲಲಿ
ಬೆಳ್ಳಿ
ಚಂದ್ರಮ ...
ಚುಕ್ಕಿ
ತಾರೆಗಳಿಗಾಗಿ..
ಬೆಳದಿಂಗಳಾಗಿ ಹಾಡಿದ ಹಾಡು..
ಮೊಗ್ಗರಳಿ
ಪುಳಕಿತ
ಹೂ..
ದುಂಬಿಗೆ
ಪರಿಮಳವಾಗಿ ..
ಪಿಸುಗುಟ್ಟಿ
ಹಾಡಿದ ಹಾಡು..
ನಿನ್ನ
ನಗುವ ಕಂಗಳಲಿ
ನನ್ನ
ಕನಸು ಹಾಡಿದ ಹಾಡು..
ಈ
ಬೆಡಗು
ಬಿನ್ನಾಣ..
ಸಂಭ್ರಮ
ಸೊಬಗು..
ಹಾಡಾಗಿ
ಹಾಡು..
ಹಾಡು
ಬಾ ನೀ ಹುಡುಗಿ..!
Newer Posts
Older Posts
Home
Subscribe to:
Posts (Atom)