Saturday, September 12, 2009

ಹುಚ್ಚು.. ಹರೆಯ.. ಪ್ರೇಮಿಸಿ ಬಿಟ್ಟಿತ್ತು...!


ನನ್ನ...

ಹುಚ್ಚು
ಹರೆಯ...ಪ್ರೇಮಿಸಿಬಿಟ್ಟಿತ್ತು..

ಹಿಂದುಮುಂದು ನೋಡದೆ.....

ನಿನ್ನನ್ನು ನಂಬಿ..

ಹೃದಯವನ್ನು ಅರ್ಪಿಸಿ ಬಿಟ್ಟಿತ್ತು...

ಗೆಳೆಯಾ...

ನನ್ನ ಮುಗ್ಧ ಪ್ರೇಮಕ್ಕೆನು ಗೊತ್ತಿತ್ತು...

ನಿನ್ನ ಕುತಂತ್ರದ ಕರಾಮತ್ತು...?

ಹಗಲು ಹೊತ್ತಿನಲ್ಲಿ..

ನನ್ನ ಬೆಳ್ಳನೆಯ ಬಣ್ಣದ...

ಬೆಡಗಿನ ತಿಟ್ಟು....

ಬೇಕಿತ್ತು.. ನಿನಗೆ...

ಕತ್ತಲೆಯಾಗುತ್ತಲೇ...

ಕರಿ ಕಾಗೆಯ.
..

ಕಾಕಸ್ವರದ ಹುಚ್ಚು....!




12 comments:

  1. ಪ್ರೇಮ ಮುಗ್ಧವಾದರೆ ಕುತಂತ್ರಗಳು ತಿಳಿಯದು...
    ಚೆನ್ನಾಗಿದೆ ಕವನ...

    ReplyDelete
  2. ಮಹೇಶ್...

    ಹರೆಯದ ವಯಸ್ಸು...
    ಜಾರುವದು ಹೆಚ್ಚು...
    ವಿವೇಕವಿಲ್ಲದೆ..
    ಪರಿತಪಿಸುವದು...

    ಧನ್ಯವಾದಗಳು...

    ReplyDelete
  3. ಪ್ರಕಾಶಣ್ಣ,
    ಏನಿದು ? ಇತ್ತೀಚೆ ಪ್ರೇಮ ಕವಿಯಾಗಿ ಬಿಟ್ಟಿದ್ದೀರಿ !! ನವ್ಯ ಕಾವ್ಯದ ಕೆ ಎಸ್ ನ ಆಗುತ್ತಿದ್ದೀರಿ ! ಹೀಗೇ ಮುಂದುವರೆಸಿರಿ !
    ಪುಟ್ಟ ಸಾಲಿನ ಚಂದ ಚಂದ ಕವಿತೆಗಳು ! ಅದಕ್ಕೊಪ್ಪುವ ಫೋಟೋಗಳು !!!!

    ReplyDelete
  4. ಬಹಳ ಚೆನ್ನಾಗಿ ಉಪಮೆ ಇದೆ!! ಸ್ವಲ್ಪ ನಿರಾಶೆ ಇಣುಕುತ್ತಾ ಇದೆಯಲ್ಲಾ ಏನು ಕಾರಣ????

    ReplyDelete
  5. Prakashanna, chitrakke oppuvantaha kavan. ondakondu miLitavaagide.
    chandru

    ReplyDelete
  6. ಚಿತ್ರಾ..

    ಕೆ.ಎಸ್. ನ. ಬಹುದೊಡ್ಡ ಹೆಸರು..
    ಇದು ಸುಮ್ಮನೆ ಗೀಚಿದ್ದು..
    ಮೆಚ್ಚಿದ್ದಕ್ಕೆ ಧನ್ಯವಾದಗಳು..

    ReplyDelete
  7. ಸುಮನಾ...
    ನನ್ನ ಬ್ಲಾಗನ್ನು ನಿತ್ಯ ಓದಿ
    ಪ್ರೋತ್ಸಾಹಿಸುವ ದೂರದೇಶದಲ್ಲಿರುವರೊಬ್ಬರ
    ಅನುಭವ ಇದು..

    ನನಗೂ ಬೇಸರವಾಗಿದೆ...
    ಹೀಗಾಗಬಾರದಿತ್ತು ಎಂದು..

    ಧನ್ಯವಾದಗಳು..

    ReplyDelete
  8. ಕ್ಷಣ ಚಿಂತನೆ...

    ಇಷ್ಟವಾಗಿದ್ದಕ್ಕೆ ವಂದನೆಗಳು..

    ReplyDelete
  9. ಪ್ರೀತಿ-ಪ್ರಾರ೦ಭದಲ್ಲಿ ನಾಕ
    ದಿನ ಕಳೆದ೦ತೆ ಭುವಿ
    ವರುಷ ಕಳೆದ೦ತೆ ನರಕ.
    ಎನ್ನುವಿರಾ?
    ಬದುಕಿನಲ್ಲಿ ತು೦ಬಬೇಕು ಪ್ರೇಮ ನಿರ೦ತರ.
    ಆಗ ಬದುಕೆಲ್ಲ ನಿರ೦ತರ ಸ್ವರ್ಗ
    ಒಪ್ಪ ಚಿತ್ರದೊ೦ದಿಗೆ ಮಿತ್ರರೊಬ್ಬರ ವೈಯುಕ್ತಿಕ ಅಭಿಪ್ರಾಯಕ್ಕೆ ತು೦ಬಾ ಚೆನ್ನಾಗಿ ಭಾಷೆ ಕೊಟ್ಟಿದ್ದೀರಾ. ಅದರೆ ಅವರಿಗೆ ಬದುಕಲ್ಲಿ ಅಶೆಹುಟ್ಟಿಸುವ ಅಶಾವಾದದ ಇನ್ನೆರಡು ಸಾಲುಗಳು ನಿಮ್ಮಿ೦ದ ಸೇರಬೇಕೆನಿಸಿತು?

    ReplyDelete
  10. ಕವನ ಇಷ್ಟ ಆಯಿತು ಆದರೆ ಒಂಥರಾ ಬೇಸರವಾಯಿತು..

    ReplyDelete