ಛಾಯಾ ಚಿತ್ತಾರಾ....
Thursday, September 15, 2011
ಗಾಢ ಮೌನದ ಪ್ರೇಮಕೆ.....
ಹೃದಯದ..
ಮಾತೆಲ್ಲ ಕಣ್ಣಲ್ಲಿ ತುಂಬಿ..
ನೀ..
ನೋಡುವ ನೋಟ..
ನನ್ನೆದೆಯಲ್ಲಿ ಬಿಟ್ಟಿರುವೆಯಲ್ಲ..
ಈ
ರಂಗು ರಂಗಿನ..
ಸಂಜೆಯಲಿ..
ತುಸು ತುಸು.. ನಷೆಯೇರುವ..
ನಿನ್ನಯ ಗುಂಗು..
ನಲ್ಲೆ...
ಸಾಕೆನಗೆ..
ಈ..
ತುಟಿಗೆ ಬಾರದ..
ನನ್ನ..
ಗಾಢ ಮೌನದ ಪ್ರೇಮಕೆ...
Friday, September 9, 2011
ಬದುಕಿದು.. ಕ್ಷಣ.. ಕ್ಷಣದ..ಬಣ್ಣಗಳು..!
ನೀನೆಂಬ..
ಅನಿವಾರ್ಯ ನನಗಿಲ್ಲದಿರುವಾಗ..
ಹಾರುವೆ..
ಹೀರುವೆ..
ಹೂ.. ಸುಮಗಳ
ಅಂದವ..
ಚಂದವ..
ಮಕರಂದವ..!
ಹೇಯ್..
ಬದುಕಿದು..
ಕ್ಷಣ..
ಕ್ಷಣದ..
ನನ್ನಿಷ್ಟದ ಬಣ್ಣಗಳು ಕಣೆ..!
Wednesday, September 7, 2011
ಕದಡಬೇಡ ... ಬಣ್ಣಗಳನು....
ಕಲ್ಪನೆಯ ...
ಕುಂಚದಲಿ..
ಬಿಡಿಸಿ..
ಬಚ್ಚಿಟ್ಟು ಕೊಂಡಿರುವೆ..
ನಾ..
ಒಳಗೊಳಗೇ..
ನನ್ನೊಳಗೆ..
ನಿನ್ನ..
ಚಂದದ ಚಿತ್ತಾರಗಳನು..
ನಲ್ಲೆ..
ಕದಡಬೇಡ ..
ನನ್ನ..
ಬಣ್ಣಗಳನು..
ನಿನ್ನ ನೆನಪಿನ ಪೂಜೆಯನು..
Monday, September 5, 2011
ನೀನೇ .. ನೀನೇ.... !!
ಕತ್ತಲು ..
ಕವಿಯುವ ..
ಆಸೆಗಳಿಗೂ..
ಬೆಳಕು ..
ಬೆಳಗುವ ..
ಭಾವಗಳಿಗೂ..
ನೀನೇ ..
ನೀನೇ ... ಕಾರಣ ಗೆಳೆಯಾ...!
Sunday, September 4, 2011
ಕತ್ತಲ ರಾತ್ರಿಯಲಿ.. ಕಟ್ಟಲಾಗದ ಕನಸುಗಳು..
ಕತ್ತಲ
ರಾತ್ರಿಯಲಿ..
ಕಟ್ಟಲಾಗದ ..
ಕನಸುಗಳು.. ನಿಟ್ಟುಸಿರು..
ಹೊಟ್ಟೆ
ತುಂಬಲಾರದು..
ನಲ್ಲೆ.....
ಹಾರಲೇ... ಬೇಕಲ್ಲೆ.....
ಹೊಸ..
ಆಸೆ..
ಬೆಸೆಯುವ..
ಸುಂದರ ಬೆಳಗಿನಲ್ಲೂ..
ಈ...
ಹಾಳು ಹಸಿವೆಯ ಹೊತ್ತು...!
Saturday, September 3, 2011
ಆಸೆ .. ಕಣ್ಣಿನ.. ನಶೆ.. !
ತಿಳಿ..
ನೀಲಿ
ಬಾನ
ಚಂದ್ರಮ..
ನಲಿ..
ಮಿನುಗುವ ತಾರೆಗಳು..!
ಅಲ್ಲೇಕೆ ..
ನೋಡಲಿ..?
ನಲ್ಲೆ..
ಆಸೆ ತುಂಬಿದ..
ಈ..
ಬೊಗಸೆ...
ಕಣ್ಣಲಿ..
ನಾ..
ಏರಿಸಿದಷ್ಟೂ..
ಇಳಿಯದ..
ನಿನ್ನ..
ಮೋಹಕ
ನಶೆ
ನನಗಿದೆಯಲ್ಲೇ....
Thursday, September 1, 2011
ನೆನಪುಗಳು.. ಹಸಿ.. ಹಸಿರಾಗಿ..
ಹನಿ
ಹನಿಯಾಗಿ..
ಜಲ
ಧಾರೆಯಾಗಿ..
ನೀ..
ಭೋರ್ಗರೆದು..
ಹರಿದು..
ಬರುವೆಯಲ್ಲ..
ನಲ್ಲಾ..
ನನ್ನೆಲ್ಲ..
ಇಲ್ಲಗಳ ನಡುವೆಯೂ..
ನೆನಪುಗಳೊಡನೆ..
ಹಸಿ ..
ಹಸಿರಾಗಿ...
Newer Posts
Older Posts
Home
Subscribe to:
Posts (Atom)