Thursday, March 31, 2011

ಸವೆದಷ್ಟೂ... ಸವಿ ... ಸವಿಯಾಗುವದು ... !


ಹೊಸ.. 
ಹೊಸದು...
ಹಳಸುತ್ತ...
ಹಳತಾಗದು.. ...


ಚಿಗುರು..
ಚಿಗುರೊಡೆಯುತ್ತ...
ಎಂದಿಗೂ...
ಸದಾ..
ಹಸಿ...
ಹಸಿರಾಗಿರುವದು..


ಗೆಳೆಯಾ...


ಸವೆದಷ್ಟೂ...
ಸವಿ ...
ಸವಿಯಾಗುವದು.. 
ನೀ..
ಕೊಟ್ಟ... 
ಚಂದದ ಕನಸುಗಳು...




ಗೆಳೆಯರೇ..
ಈ ಫೋಟೋ ನೋಡಿ  ಸುಗುಣಾ ಅವರಿಗೂ ಸ್ಪೂರ್ತಿ  ಬಂದು   ಈ ಕವನ ಬರೆದಿದ್ದಾರೆ ನೋಡಿ...

ಹೊಸತನದ ಹಸಿರು ಚಿಗುರಿ
ನಿನ್ನಾಸರೆಯ ಉಸಿರಾಗುವಾಸೆ
ನಲ್ಲೆ ..

ಬರುವೆಯ ಹಸಿರಿಗೆ ಹೂವಾಗಿ....

ಹೊನ್ನಿನ ಬೆಳಕು ಅರಿವಿಲ್ಲದೆ
ನನ್ನ ತಾಕಲು ಪ್ರತಿ ಎಲೆಯ ಮೊಗ್ಗು
ನನ್ನವಳಂತೆ ಹೂವಾಗಿಸುವೆಯಾ ನಲ್ಲೆ...

ಬಾಡುವ ಮೊದಲು ಪುಷ್ಪವಾಗಿ
ನಗುವ ಎಲೆಗೆ ನಲ್ಲೆಯಾಗಿ
ಬೆಳ್ಮುಗಿಲಿಗೆ ಹೂಬಾಣವಾಗುವೆಯಾ...





ಬ್ಲಾಗ್ ಲೋಕದ ಆಶು ಕವಿ "ಪರಾಂಜಪೆಯವರಿಗೆ " ಈ  ಫೋಟೋ ಸ್ಫೂರ್ತಿ ಕೊಟ್ಟಿದೆ  ನೋಡಿ...


ಹಸಿರ ಸಿರಿಯಲಿ ಇಹುದು ಜೀವಜಾಲದ ಉಸಿರು
ಮನಭಾವ ಬೆಸೆಯುವುದು ವಿಕಸಿಸುವ ತಳಿರು
ನವಿರು ಭಾವನೆ ತು೦ಬಿ ಪಲ್ಲವಿಸಿ ಚಿಗುರು
ಉಲ್ಲಾಸವೀಯುವುದು ಒಳಗೂ ಹೊರಗೂ


ಮನದ ನ೦ದನವನದಿ ನೆನಪೊ೦ದೆ ಹಸಿರು
ಕೊರಡು ಕೊನರುವ ಕ್ಷಣಕೆ ಆಸೆಗಳ  ಬಸಿರು
ಏನೆ೦ದು ಬಣ್ಣಿಸಲಿ ಹಸಿರ ಸೊಬಗಿನ ಬೆಡಗು
ಹಸಿರು ಮಾಗುವ ಮುನ್ನ ತೋರು ನಿನ್ನಯ ಬೆರಗು



ಯುವ ಕವಿ  "ಮಹಾಬಲಗಿರಿಯವರಿಗೂ"  ಸ್ಪೂರ್ತಿ ಕೊಟ್ಟಿದೆ ಈ ಫೋಟೋ...
              ವಾಹ್............!!



ಅರಳಿಬಿಡು ನನಗಾಗಿ ನಾಳೆ ಬೆಳಕ ಹರಿಯೆ

ಹಸಿರು ಎಲೆಗಳ ಮಧ್ಯೆ ನಾಚುತ್ತ ಬಳಕುತ್ತ
ಅರಳಲೋ ಬೇಡವೆಂದನುಮಾನ ತಾಳುತ್ತ
ನಾಳೆಗಳ ನೆನೆಯುತ್ತ ಹೂವಾಗೊ ಕನಸಿಂದ  
ತೋರುತಿರುವದು ಮೊಗ್ಗು ಚಂದದಿಂದ 

ನಾಳೆಗಳು ನಿನಗಿಹುದು ಚಂದದ ದಿನವಿಹುದು 
ಅರಳಿ ಕಂಪನು ಚೆಲ್ಲಿ ಸಂಭ್ರಮಿಪ ಮನವಿಹುದು
ಹಸಿರ ಉಸಿರಿನ ಮಧ್ಯೆ ಪ್ರೀತಿಹಂಚುತಲಿರುವೆ  
ಅರಳಿಬಿಡು ನನಗಾಗಿ ನಾಳೆ ಬೆಳಕ ಹರಿಯೆ 


ಮತ್ತೊಬ್ಬ ಗೆಳೆಯ "ಗಿರೀಶ್ .ಎಸ್."  ಅವರಿಗೆ ಸ್ಪೂರ್ತಿ ಕೊಟ್ಟಿದ್ದು ಹೀಗೆ....

ನವಿರು ನವಿರಾದ ಹಸಿರು ಎಲೆಗಳು,
ಸೂರ್ಯ ಕಿರಣಕ್ಕೆ ನಾಚುತ್ತ ಕಂಗೊಳಿಸುತ್ತಿವೆ
ಅಲ್ಲೊಂದು ಇಲ್ಲೊಂದು ಚಿಗುರು ಮೊಗ್ಗುಗಳು
ಹೂವಾಗಿ ಹೊರಬರಲು ಕಾಯುತ್ತಿವೆ ಹೊಡೆ
ಮಕರಂದ ಹೀರಲು ದುಂಬಿಗಳು ಎಲ್ಲೋ ಈ ಚಿಗುರು
ಹೊಡೆಯಲೆಂದು ಕಾಯುತ್ತಿವೆ



ಮತ್ತೊಬ್ಬ ಉತ್ಸಾಹಿ ಗೆಳೆಯ ಕವಿ  "ವಸಂತ"  ಅವರಿಗೆ  ಸ್ಪೂರ್ತಿ ಕೊಟ್ಟಿದ್ದು ಹೀಗೆ...


ಕತ್ತಲಾದರೂ ಸರಿ
ನಾ ಕಾಯುತ್ತೇನೆ
ನಾಳೆ ಮೂಡಲಿರುವ ಬೆಳಕಿಗಾಗಿ..
ಕತ್ತಲಲಿ ನಾ ಮೊಗ್ಗಾದರೂ
ಉದಯ ರವಿ ಕಾಂತಿಗೆ ಸೋತು
ಹೂವಾಗಿ ಹರಳುತ್ತೇನೆ..

ನನ್ನ ಬದುಕು ಶಾಶ್ವತವಲ್ಲ
ಅದಕ್ಕಾಗಿ ನಾ ಚಿಂತಿಸಬೇಕಿಲ್ಲ

ನಾ ಹೂ ಅಲ್ಲವೆ
ಗರತಿಯ ಮುಡಿಯೋ
ದೇವರ ಗುಡಿಯೋ
ಚಟ್ಟದ ಅಡಿಯೋ
ನಾ ಸೇರಬಹುದೇನೊ ಅಲ್ಲವೆ ?...




14 comments:

  1. ಅಣ್ಣಾ ನೀ
    ತೆಗೆಯುವ ಪೋಟೊ

    ಮತ್ತೆ ಅದಕ್ಕೆ ಬರೆಯುವ

    ಅಂದದ ಸಾಲುಗಳು
    ಅದು ಅದ್ಭುತ .

    ReplyDelete
  2. ತುಂಬಾ ಚೆನ್ನಾಗಿದೆ.. ಸುಗುಣ ಅವರ ಕವನ ತುಂಬ ಹಿಡಿಸಿತು

    ReplyDelete
  3. ಹಸಿರಿನ ಟೊಪ್ಪಿಗೆ ಹೊನ್ನಿನ ಉಡುಗೆ
    ಚಲಿಸದ ಸ್ಥಿರ ಸಿರಿ ನಾನು ಮರ
    ಸ್ವಾರ್ಥ ಸ್ವಭಾವದ ಮನುಜನೆ ಕೇಳು
    ಹೇಳುವೆ ನನ್ನಯ ಉಪಕಾರ .......

    ReplyDelete
  4. ನವಿರು ನವಿರಾದ ಹಸಿರು ಎಲೆಗಳು,
    ಸೂರ್ಯ ಕಿರಣಕ್ಕೆ ನಾಚುತ್ತ ಕಂಗೊಳಿಸುತ್ತಿವೆ
    ಅಲ್ಲೊಂದು ಇಲ್ಲೊಂದು ಚಿಗುರು ಮೊಗ್ಗುಗಳು
    ಹೂವಾಗಿ ಹೊರಬರಲು ಕಾಯುತ್ತಿವೆ ಹೊಡೆ
    ಮಕರಂದ ಹೀರಲು ದುಂಬಿಗಳು ಎಲ್ಲೋ ಈ ಚಿಗುರು
    ಹೊಡೆಯಲೆಂದು ಕಾಯುತ್ತಿವೆ

    ReplyDelete
  5. ದಿನನಿತಯ ನೋಡುವ ಅದೇ ದಾಸವಾಳದ ಎಲೆಗಳು
    ನಿನ್ನ ಕ್ಯಾಮರಾದ ಕಣ್ಣಿಗೇ ಅಷ್ಟು fresh ಆಗಿ ಕಾಣುತ್ತವೋ ಏನೋ....
    ಅದೆಷ್ಟು fresh fresh ಅಂದರೆ ನೋಡಿದೊಮ್ಮೆಗೆ ಕವನಗಳೇ
    ಉದಿಸುವ ಹಾಗೆ....

    ಸುಗುಣಾ ಅವರು ನಮ್ ಭಟ್ರು... ಪರಾಂಜಪೆಯವರು ಗಿರೀಶ್ ಅವ್ರೆಲ್ಲಾ ಎಷ್ಟು ಚನ್ನಾಗಿ ಸಾಲುಗಳಲ್ಲಿ ಹಿಡಿದುಬಿಟ್ರು ನೋಡಿ.....

    ಖುಷಿಯಾಯಿತು....

    ReplyDelete
  6. ee hasiru siriyali..manasu mareyali....
    beautiful..

    ReplyDelete
  7. ಚಿಗುರು ಚಿಗುರೆಲೆಯೂ
    ಚಿಗುರಿಸಿದೆಷ್ಟು ಸ್ಪೂರ್ತಿ ಸೆಲೆಯೂ..

    ಛಾಯಾ ಚಿತ್ತಾರದಲಿ
    ಮೂಡಿದೆ ಹಸಿರೆಲೆಯ ತಳಿರು..

    ಎಲ್ಲರೂ ಕೂಡ ಚಂದವಾಗಿ ಬರೆದಿದ್ದಾರೆ.. ಮಹಬಲಗಿರಿಯವರ ಮತ್ತು ಪರಾಂಜಪೆಯವರ ಸಾಲುಗಳು ಬಹಳವಾಗಿ ಹಿಡಿಸಿದವು...
    ಗಿರೀಶ್ Good start!!

    ReplyDelete
  8. Nota badalisidare drushyave badalaguvudu,
    hageye avaravarige kandante varnisiddare..
    Sundaravagide.

    ReplyDelete
  9. ಎಲ್ಲವೂ ಸೊಗಸಾಗಿದೆ.....
    ತುಂಬಾ ಇಷ್ಟವಾಯಿತು....

    ReplyDelete
  10. ಸದಾ ಹಸಿ ಹಸಿರಾಗಿರುವ
    ಹಸಿರಿನೆಡೆಯಲ್ಲೇ ಮೂಡಿದೆ
    ಕನಸಿನ ಮೊಗ್ಗು ..
    ಅರಳುವ ಹೂವು ,
    ಕೆಂಪೋ , ಬಿಳಿಯೋ ,
    ಹಳದಿಯೋ ,
    ಯಾವುದಾದರೇನಂತೆ
    ಕನಸಿನ ರಂಗು ,
    ತರುವುದು ಅದು
    ಪ್ರೀತಿಯ ಗುಂಗು

    ReplyDelete
  11. Sundara, sundara, sundara...illi ellavu sundara......Jai ho..........

    ReplyDelete