Tuesday, March 22, 2011

ಪ್ರೇಮ... ಸುಮ ಪಕಳೆಗಳ... ಪುಳಕಿಸುವೆಯಲ್ಲ......!

ಇಳೆಗಿಳಿವ.. ..
ಬೆಳಗಿನ..
ಎಳೆ
ಬಿಸಿಲಿನಂದದಿ..


ಅರಳದ..


ಪ್ರೇಮ
ಸುಮ... 
ಪಕಳೆಗಳ...
ಪುಳಕಿಸಿ...


ಗೆಳೆಯಾ..


ನನಸಾಗದ...
ಸಾವಿರ
ಸವಿ
ಕನಸುಗಳ....


ನೀ..
ಬರೀದೆ.. 
ಚಿಗುರಿಸುವೆಯಲ್ಲ..!

ಈ ಫೋಟೋ ನೋಡಿ ಸುಗುಣಾ ಮಹೇಶರವರಿಗೂ ಕವನ ಬರೆಯುವ ಮನಸ್ಸಾಯಿತಂತೆ..
ಇದೋ ಅವರು ಬರೆದ ಕವನ...


ನೇಸರನ ಕಿರಣ ರಾಶಿಯ ಸ್ಪರ್ಶಕೆ
ಮುಗುಳ್ನಗೆಯ ಚೆಲ್ಲಿ ನಿಂತ ರೂಪಸಿ

ಕೆಂದುಟಿಯ ನಗೆಯಲಿ ಭಾಸ್ಕರನ
ಮುತ್ತಿಡಲು ಬಾಯ್ತೆರದು ಕುಳಿತಾ ರೂಪಸಿ

ಎಳೆಸಾದ ಮೊಗ್ಗು ಜಗ್ಗು ಹೊಡೆದು
ಯಾರಿಗೋ ಕಾದಂತಿಹುದು ನೋಡೆ ರೂಪಸಿ..

ಪ್ರೇಮಿಗಳ ಉತ್ತೇಜಿಸುವ ಕೆಂಪು ಕಂಗಳ ಕಣ್ಮಣಿ
ಕೋಮಲ ಹೃದಯಕೆ ತಂಪೆರಗುವವಳು ಇವಳೇ ಪ್ರೇಯಸಿ

ನಿಂತಲ್ಲೇ ಸೆಳೆವ ಪ್ರತಿರೂಪ
ಯಾರ ಕಣ್ಣಿಗೂ ಕಾಣದ ಅಪರೂಪ
ಪ್ರಕಾಶಣ್ಣನ ಕ್ಯಾಮರ ಕಣ್ಣಿಗೆ ಸಿಕ್ಕಳು
ನೋಡಿ ಈ ಕೆಂಪು ಕಂಗಳ ಬೆಡಗಿ....

(ಕವಯಿತ್ರಿ : ಶ್ರೀಮತಿ. ಸುಗುಣಾ ಮಹೇಶ)


ಈ ಫೋಟೋ ನೋಡಿ.. ಗೆಳೆಯ ಆಜಾದನಿಗೆ  ಸ್ಫೂರ್ತಿ ಬಂದು  ಕವನ ಬರೆದಿದ್ದಾನೆ... ನೋಡಿ...

ಬಾ ಹೂಬನಕೆ ಇನಿಯಾ
ಮುಳ್ಳು ಹರಿತೆಲೆಯ ತಲೆ
ಚುಚ್ಚುವುದು ಬಂದರೆ
ಅನುಮತಿಯಿಲ್ಲದಲೇ
ನಾಜೂಕು ಕಾಂಡ
ಮುಳ್ಳಿದ್ದರೂ ಭ್ರಮರ ಭಂಡ
ನುಸುಳುವುದು ಮಕರಂದಕಾಗಿ
ಹೆದರಿದ ಪತಂಗ ನೋಡುತಿರೆ ಮಂಕಾಗಿ
ಭರ ಭ್ರಮರದ ಸಂಭ್ರಮ,
ನಾಚಿದ ಕೆಂದುಟಿ ತೆರೆದ ಸುಮ
ಇನ್ನೂ ಮುಚ್ಚಿದ ಗರಿ ಬಿಚ್ಚದ ಮೊಗ್ಗು
ನೋಡುತಿದೆ ಅಳೆದಳೆದು
ಕಳೆದುಕೊಂಡರೂ ಗಳಿಸಿದ ತನ್ನಕ್ಕನ
ಗಳಿಸಿದರೂ ಕಳಕೊಂಡ ಭ್ರಮರನ
ನುಸುನಕ್ಕು ಅರಿತಂತೆ ಓಲಾಡಿಸಿ ತಲೆ
ಕಾಯುತಿದೆ ಮತ್ತೆ ಬರುವ ರವಿಗಾಗಿ
ರವಿತರುವ ಪುಳಕ ಸುಳಿವ ಋತುಗಾಗಿ
ಆ ಕಿರಣದಾಗಮನ ಭೃಂಗಸಂಗಕಾಗಿ.

18 comments:

 1. ಎಳೆ ಬಿಸಿಲಿನಂತೆ
  ಬೆಚ್ಚಗಿನ
  ಹೂವಿನ ಪಕಳೆಯಂತೆ
  ಮೃದು ಭಾವಗಳ
  ಕನಸುಗಳ ತುಂಬಿ ತರುವುದೇ
  ಪ್ರೇಮ !!

  ಪ್ರಕಾಶಣ್ಣ ನ ಇನ್ನೊಂದು ಸುಂದರ ಕವಿತೆ !!

  ReplyDelete
 2. ಗುರು ಸರ್..

  ಚಿತ್ರ ಮತ್ತು ಸಾಲುಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

  ಎಳೆ
  ಪಕಳೆಗಳ
  ಪುಳಕಿಸಿ..
  ಒಳಗೊಳಗೇ..
  ಪ್ರೇಮ
  ಸುಮಗಳ
  ಅರಳಿಸುವೆಯಲ್ಲ
  ಗೆಳೆಯಾ...
  ಈ..
  ಹೊಸ
  ಚಿಗುರುಗಳ..
  ಕನಸುಗಳನು..
  ನೀ.. ಬಾರದ ದಾರಿಯಲಿ...

  ReplyDelete
 3. ಸುಂದರ ಚಿತ್ರಕ್ಕೆ ತಕ್ಕ ಸಾಲುಗಳು.ನಿಮ್ಮಲ್ಲಿರುವ ಚಿರ ನೂತನ ಪ್ರೇಮ ಕವಿಗೆ ನಮನ.ಪ್ರೇಮ ಕವಿತೆಯ ಪುಸ್ತಕ ಹೊರ ತನ್ನಿ.

  ReplyDelete
 4. sundara saalugaLige ide photo suktavO, allaa ee sundara photo ge chandada saalugaLu suktavO tiLiyalilla...

  suppar prakaashaNNa...

  ReplyDelete
 5. ಅಗ್ನಿ ಹೋತ್ರಿಯವರೆ..
  ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

  ಬರಿದಾದ
  ಮನದಲ್ಲಿ..
  ಬರಿ
  ನೆನಪುಗಳ
  ಕನಸುಗಳ
  ಚಿಗುರಿಸಿ
  ನೀ..
  ತಿರುಗಿ
  ಬಾರದೆ
  ಹೋಗಿಬಿಡುವೆಯಲ್ಲ
  ಗೆಳೆಯಾ..

  ReplyDelete
 6. Wow.. very nice shot prakashanna.. kavithe kooda aste muddagide :)

  ReplyDelete
 7. ಅದ್ಭುತವಾದ ಛಾಯಚಿತ್ರ, ಅದಕ್ಕೆ ಅದ್ಭುತವಾದ ಕಲ್ಪನೆಗಳೊಂದಿಗೆ ಹೆಣೆದ ಸುಂದರ ಕವನಗಳು.. ಎರಡೂ ಕವನಗಳು ಮಧುರ ಭಾವನೆಗಳಿಂದ ತುಂಬಿ ಕೊಂಡಿದೆ.. ತುಂಬಾ ಚೆನ್ನಾಗಿದೆ!

  ReplyDelete
 8. ಪ್ರಕಾಶ ನಿನ್ನ ಚಿತ್ರಕ್ಕೆ ನನ್ನ ಕವನ ಸಹಾ ರೆಡಿ...
  ಬಾ ಹೂಬನಕೆ ಇನಿಯಾ
  ಮುಳ್ಳು ಹರಿತೆಲೆಯ ತಲೆ
  ಚುಚ್ಚುವುದು ಬಂದರೆ
  ಅನುಮತಿಯಿಲ್ಲದಲೇ
  ನಾಜೂಕು ಕಾಂಡ
  ಮುಳ್ಳಿದ್ದರೂ ಭ್ರಮರ ಭಂಡ
  ನುಸುಳುವುದು ಮಕರಂದಕಾಗಿ
  ಹೆದರಿದ ಪತಂಗ ನೋಡುತಿರೆ ಮಂಕಾಗಿ
  ಭರ ಭ್ರಮರದ ಸಂಭ್ರಮ,
  ನಾಚಿದ ಕೆಂದುಟಿ ತೆರೆದ ಸುಮ
  ಇನ್ನೂ ಮುಚ್ಚಿದ ಗರಿ ಬಿಚ್ಚದ ಮೊಗ್ಗು
  ನೋಡುತಿದೆ ಅಳೆದಳೆದು
  ಕಳೆದುಕೊಂಡರೂ ಗಳಿಸಿದ ತನ್ನಕ್ಕನ
  ಗಳಿಸಿದರೂ ಕಳಕೊಂಡ ಭ್ರಮರನ
  ನುಸುನಕ್ಕು ಅರಿತಂತೆ ಓಲಾಡಿಸಿ ತಲೆ
  ಕಾಯುತಿದೆ ಮತ್ತೆ ಬರುವ ರವಿಗಾಗಿ
  ರವಿತರುವ ಪುಳಕ ಸುಳಿವ ಋತುಗಾಗಿ
  ಆ ಕಿರಣದಾಗಮನ ಭೃಂಗಸಂಗಕಾಗಿ.

  ReplyDelete
 9. ಪ್ರಕಾಶಣ್ಣ ಹೆಂಗಿದ್ದು ನೋಡು.....
  ಕವನ ನೋಡಿ ನೀನು ಫೋಟೋ ತೆಗೀತೆ....
  ಫೋಟೋ ನೋಡಿ ಅವು ಕವನ ಬರೀತೋ....
  ಏನೇ ಹೇಳು... 99.99% ಕ್ರಿಯೇಟಿವಿಟಿ ಪಾ....

  ಎರಡೂ ಚನ್ನಾಗಿದ್ದು...

  ReplyDelete
 10. prakashanna its ur nice thoughts..go ahead u came write better than this...all the best

  ReplyDelete
 11. ಸು೦ದರ ಚಿತ್ರಕ್ಕೆ ಒಪ್ಪುವ ಪುಟ್ಟ ಸಾಲುಗಳ ಉತ್ತಮ ಕವನ. ಅಭಿನ೦ದನೆಗಳು. ಸುಗುಣಾ ಅವರ ಕವನವು ಬಹಳ ಚೆನ್ನಾಗಿದೆ.ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.

  ReplyDelete