Wednesday, April 6, 2011

ನಲ್ಲೆ... ನಿನ್ನ ನೆನಪಲಿ....



ವಿರಹವೆಂದರೆ..

ಹೃದಯ
ಬಾನಂಗಳದಲಿ..
ಪ್ರೇಮ ಭಾವ.. 
ತರಂಗದಿ....
ಮನದ
ಮೇಘದ ಜೊತೆ...


ನೀ.. 
ಮರೆಯಾದ ಮೇಲೆ..


ನಲ್ಲೆ..


ನನಗೆ 
ನಾನೇ..
ನೋವಲಿ..
ಬಿಡಿಸಿಕೊಂಡ..

ನಿನ್ನ
ಪ್ರೇಮದ..
ಚಂದದ ಚಿತ್ತಾರ ಕಣೆ...

(ಮಿತ್ರರಾದ ಪರಾಂಜಪೆಯವರ, ಆಜಾದರ  ಹಾಗೂ  ಮುಂಬೈ ಮಿತ್ರ "ಅಶೋಕ್ "ರವರ ಪ್ರತಿಕ್ರಿಯೆಗಳು  ಮಸ್ತ್ ಇದೆ .. ದಯವಿಟ್ಟು ನೋಡಿ...)

16 comments:

  1. ಮೇಘಕೊಂದು ಆಗಲಿದೆ ಮೇಘದ ಸವಾಲು
    ಕಪ್ಪು ಮೋಡ ಕೇಳಿತು ಬಿಳಿಮೋಡದ ಅಹವಾಲು
    ನೀನು ತುಂಬಿಕೊಂಡು ಕಪ್ಪು ನಾನು ಬರಿದೇ
    ಓಲಾಡುತಿರುವೆ ಹಗುರಾಗಿ ಒಂದೆಡೆ ನಿಲ್ಲದೇ
    ನೀನಿಲ್ಲೋ ಅಲ್ಲೋ ಎಲ್ಲೋ ಒಂದೆಡೆ ಸುರಿವೆ
    ನಾ ಹೀಗೇ ಗಾಳಿಹೋದೆಡೆ ನಿಲ್ಲದೇ ಅಲಿವೆ
    ಹೇಳಿ ಬಿಡು ಬಿಟ್ಟು ಕೊಡು ಗುಟ್ಟನಿಂದು ನನಗೆ
    ನಾನೂ ನಿನ್ನಂತೆ ಹೇಗಾಗಲಿ ಸಾರ್ಥಕ ಇಳೆಗೆ.

    ನನ್ನ ಭಾವ ಕಲಕಿ ಹೊರಚಿಮ್ಮಿಸಿದ ಕವನದ ಸಾಲುಗಳು...ಪ್ರಕಾಶ್ ಚಿತ್ರ ಸೂಪರ್...ಅದಕ್ಕೆ ಮಿತ ಪದಗಳ ಹಿತ ಹೊದಿಕೆ ಇನ್ನೂ ಸೂಪರ್...

    ReplyDelete
  2. ಪ್ರಕಾಶಣ್ಣ ಸುಂದರ ಚಿತ್ರಕ್ಕೆ ಕವಿತೆ ಮೆರಗು ನೀಡಿದೆ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  3. ಕೃಷ್ಣಮೂರ್ತಿಯವರೆ.. ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ವಿರಹವೆಂದರೆ..
    ಸಂಜೆ
    ಬಾನಂಗಳದಿ..
    ಹನಿಗೂಡದ..
    ಮೇಘ
    ಬಿಡಿಸುವ..
    ಅಂದದ ಚಿತ್ತಾರ..
    ಅಳಬೇಕೆನ್ನಿಸುವ..
    ಏಕಾಂತದ
    ದುಃಖದಲ್ಲೂ..
    ನಿನ್ನ
    ಸುಂದರ
    ಚಂದದ ಕೆನ್ನೆಯ ನೆನಪು...

    ReplyDelete
  4. ಅವಳ ಪ್ರೇಮದ ಚಂದದ ಚಿತ್ತಾರ ಇಷ್ಟೊಂದು ಸುಂದರವೇ?
    ಮುಟ್ಟಿದರೆಲ್ಲಿ ವಿರಹದ ಮೋಡ ಒಡೆದು
    ಭೋರ್ಗರೆವ ಪ್ರೇಮದ ಮಳೆ ಸುರಿದೀತೇ ಅನ್ನುವ ಹಾಗೆ...

    ಎಷ್ಟೊಂದು ಆರ್ದ ಭಾವನೆ....

    ReplyDelete
  5. ಆಜಾದು... ಜೈ ಹೋ !!

    ವಿರಹವೆಂದರೆ..
    ನಲ್ಲೆ..
    ನಿನ್ನ
    ನೆನಪಲಿ..
    ನಿರಾಸೆಯ..
    ಹನಿಗಳು..
    ಕೆಳಗಿಳಿಯುವಾಗ..
    ನಿನ್ನ..
    ಚಂದದ ಕೆನ್ನೆಯ ನೆನಪು...!

    ReplyDelete
  6. ಇ೦ದ್ರನಾಸ್ಥಾನದಲಿ ನರ್ತಿಸುವ ಬಾಲೆ
    ಹೋಲಿಕೆಗೆ ನಿಲುಕದು ಈ ಮೇಘಮಾಲೆ
    ಬೆಳ್ಳಿರಥದಲಿ ಹೊರಟ ಜ೦ಬೂ ಸವಾರಿ
    ನೋಡಬೇಕೆನಿಸುತಿದೆ ನೂರೆ೦ಟು ಬಾರಿ

    ಹಲಬಗೆಯ ರೂಪವನು ತಳೆದು ಥಳಥಳಿಸಿ
    ಮೇಘವದು ಕರಗುವುದು ಜೋರು ಗುಡುಗುಡಿಸಿ
    ತಪ್ತ ಹೃದಯಕೆ ತ೦ಪು ನೀಡುವುದು ಮಳೆಯು
    ವಿರಹಿ ಪ್ರೇಮಿಕೆಯ೦ತೆ ಕಾದಿಹಳು ಇಳೆಯು

    ಮುತ್ತಿಕ್ಕು ಭೂಮಿಯನು ಮಳೆಯ ಹನಿ ಸುರಿಸಿ
    ಹತ್ತಿಕ್ಕು ಬೇಗುದಿಯ ತಾಪವನು ಭರಿಸಿ
    ಕತ್ತು ನೋಯುತಿದೆ ಎನಗೆ ಆಗಸವ ನೋಡಿ
    ತಡವ ಮಾಡದೆ ನೀನು ತೋರುವೆಯಾ ಮೋಡಿ

    ReplyDelete
  7. "ಮನದ ಮೇಘದ ಜೊತೆ... ನೀ.. ಮರೆಯಾದ ಮೇಲೆ.." ಹಾಗು "ನನಗೆ
    ನಾನೇ..ನೋವಲಿ..ಬಿಡಿಸಿಕೊಂಡ.. ನಿನ್ನ ಪ್ರೇಮದ..ಚಂದದ ಚಿತ್ತಾರ"
    ಈ ಸಾಲುಗಳಲ್ಲಿ ಮೂಡಿ ಬಂದಿರುವ ಹೋಲಿಕೆಗಳು ತುಂಬಾ ಚೆನ್ನಾಗಿದೆ!

    ReplyDelete
  8. Prakashanna,

    Sooperrrr......Jai Ho......

    ನೀಲಿ ಬಾನಂಗಳದಿ ಕಾರ್ಮೋಡ ಕವಿದಿದೆ
    ಮೇಘಗಳ ಭಾರಕ್ಕೆ ಗಗನವದು ಬಾಗಿದೆ
    ಸುತ್ತ ಮುತ್ತಲೂ ಎಲ್ಲಾ ಕತ್ತಲೆಯು ಕವಿದಿದೆ
    ಹಗಲು ಹೊತ್ತು ಕೂಡ ಇರುಳೆನಿಸಿ ಬಿಟ್ಟಿದೆ

    ಆಗಿಹುದು ಢಿಕ್ಕಿ ಮೋಡಕ್ಕೆ ಮೋಡ
    ನೋವಲ್ಲಿ ಬಿಕ್ಕಿ ಬಿಕ್ಕಿ ಅಳುತಿಹುದ ನೋಡ
    ಕಣ್ಣೀರ ಧಾರೆ ಹರಿದಿಹುದು ಧರೆಗೆ
    'ಮಳೆ' ಎನ್ನುವೆವು ಈ 'ಕಣ್ಣೀರ ಕೋಡಿ' ಗೆ...

    ReplyDelete
  9. ಈ ದಟ್ಟವಾದ ಮೋಡಗಳು ಹೊಡೆದು
    ಭೋರ್ಗರೆವ ಮಳೆಯಾಗಿ
    ಭೂಮಿಯ ಸ್ಪರ್ಶವಾಗಿ
    ಭೂಮಿ ಎಲ್ಲೆಡೆ ಸಮೃದ್ಧಿಯಾಗಲಿ

    ReplyDelete
  10. ಮೇಘ ಸ೦ದೇಶ

    ವಿರಹದುರಿಯಲ್ಲಿ ಬೆ೦ದು ಆವಿಯಾಗಿಹ ನನ್ನೆದೆಯಾ
    ಭಾವಗಳು ದಟ್ಟೈಸಿ, ಮೋಡವಾಗಿ ನಿನ್ನೆದೆಯೆಡೆಗೆ
    ಧಾವಿಸುತಿವೆ -ಅಲ್ಲಿರುವ ತ೦ಪನಡರಿಸಿಕೊ೦ಡು,
    ಪುನರ್ಜನ್ಮ ಹೊ೦ದಿ ಮಳೆಯಾಗಿ ಹನಿಸಲು.
    ಹಿಡಿದುಕೋ ಗೆಳತಿ... ಮಳೆಗರೆಯಿಸಿಕೋ......

    ReplyDelete