Sunday, September 26, 2010

ಅಳಿಸಲಾಗದ...ಬಣ್ಣ..




ನೀ   ನೆಂದರೆ......


ನನ್ನೊಳಗೆ..


ನಾ..
ಬಿಡಿ..
ಬಿಡಿಯಾಗಿ..
ಬಿಡಿಸಿಟ್ಟು.....


ಬಚ್ಚಿ...
ಬಚ್ಚಿ..
ಬಚ್ಚಿಟ್ಟು..
ಬರಿದಾದರೂ...


ತೋರಿಸಲಾಗದ...


ನೀ...
ಅಳಿಸಿ..
ಅತ್ತರೂ...
ಅಳಿಸಲಾಗದ...


ನಿನ್ನ...
ಅಂದಿನ..
ಆ..
ಬಣ್ಣ  ಬಣ್ಣದ.....ಚಿತ್ರ  ..





26 comments:

  1. ಪ್ರಕಾಶಣ್ಣ.......
    ವ್ಹಾ, ವ್ಹಾ,
    ಕ್ಯಾ ಬಾತ್ ಹೈ!

    ReplyDelete
  2. Bravo...Bravo....Bravo... verry nice. And an equally nice photograph, especially the angle.I personally would have preferred classic Black n White version though.

    ReplyDelete
  3. ಚಿತ್ರ ಮತ್ತು ಕವನ ಎರಡೂ ಸೂಪರ್.

    ReplyDelete
  4. ಪ್ರಕಾಶ...
    ನೀ ನೆಂದರೆ
    ನನ್ನೊಳಗೆ
    ನಾ
    ಬಿಡಿ ಬಿಡಿಯಾಗಿ
    ಬಿಡಿಸಿಟ್ಟು......ಈ ಸಾಲುಗಳು ಸೂಪರ್ರು
    ಆದ್ರೆ ಇದೇ ಲಯಕ್ಕೆ
    ಬಚ್ಚಿ
    ಬಚ್ಚಿಟ್ಟು
    ಬರಿದಾದರೂ....ಇಲ್ಲಿ ಏನೊ ಮಿಸ್ಸಿಂಗ್ ಅನ್ನಿಸ್ತಿದೆ....!!?? ಹಾಗೆ ನನಗೆ ಅನ್ನಿಸ್ತಿದೆಯೋ...ಗೊತ್ತಿಲ್ಲ....
    ಬೆಚ್ಚಿ
    ಬಚ್ಚಿಟ್ಟು ...ಅಂತಾದರೆ..ಹೇಗೆ....?? ಹಹಹ...
    ಸಾಲುಗಳಂತೂ ...ಸೂಪರ್..ಚಿತ್ರದೊಟ್ಟಿಗೆ -ಒಟ್ಟಿಗೆ..

    ReplyDelete
  5. ಪ್ರಕಾಶಣ್ಣ,
    ಆಹಾ...! ಕಪ್ಪು ಬಿಳುಪಿನ ಚಿತ್ರ ಕಥೆ ಬರೆದದ್ದಕ್ಕೆ ಅತ್ತಿಗೆಗೆ ಬೇಸರವಾಗದಿರಲೆಂದು ಈ ಕವಿತೆ ಬರೆದ ಹಾಗಿದೆ.......
    ತುಂಬಾ ಚೆನ್ನಾಗಿದೆ.....

    ReplyDelete
  6. ಪ್ರವೀಣ್...

    ನೀ..
    ತುಂಬಿದ್ದೆ..
    ಕನಸು..
    ಮನಸುಗಳಲ್ಲಿ..

    ನಾ..

    ಬಚ್ಚಿ...
    ಬಚ್ಚಿಟ್ಟು..
    ಬರೀ..
    ಬರಿದಾದೆ..

    ಆ..

    ನಿನ್ನ..
    ನಗು..
    ಮಾತು..
    ನೆನಪುಗಳಲ್ಲಿ....

    ಹೇಳಲಾಗದ..
    ಆ..
    ಭಾವಗಳಲ್ಲಿ..

    ಚಿತ್ರ.. ಸಾಲುಗಳನ್ನು ಇಷ್ಟಪಟ್ಟಿದ್ದಕ್ಕೆ.. ಧನ್ಯವಾದಗಳು...

    ReplyDelete
  7. ಜಿತೇಂದ್ರ..

    ನೀ..

    ಹಚ್ಚಿದ್ದು...
    ಬರಿದಾದ

    ನನ್ನ..

    ಭಾವಗಳಲ್ಲಿ..
    ಪ್ರೇಮದ..
    ಹುಚ್ಚಿನ..

    ಹಚ್ಚ
    ಹಸುರಿನ..
    ಸಿರಿಯ ಬಣ್ಣ..!

    ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

    ReplyDelete
  8. ಮಾಮ,
    ಚೆನ್ನಾಗಿವೆ
    ಬಿಡಿ . .
    ಬಿಡಿಯಾಗಿ . .
    ಬಿಡಿಸಿಟ್ಟ
    ಮನ
    ತೆರೆ . .
    ತೆರೆದು . .
    ಬರೆದಿಟ್ಟ
    ಪದಗಳು . . . .

    ReplyDelete
  9. ಕಿಷನ್ ಭಾಯ್...

    ನಿಜ..
    ಕಪ್ಪು ಬಿಳುಪು ಇನ್ನೂ ಚೆನ್ನಾಗಿ ಬರ್ತಿತ್ತೇನೋ..
    ಮೊದಲು ಹೀಗೆ ಸೇಫಿಯಾ ಮಾಡಿದೆ..
    ಇದನ್ನು ನೋಡಿ ಮತ್ತೆ ಬದಲಿಸಬೇಂದು ಅನ್ನಿಸಲಿಲ್ಲ...

    ಹುಡುಗಿ..
    ನೀ..
    ನಿದ್ದೆ..
    ನನ್ನ ಕನಸಲ್ಲಿ..
    ಮನಸಲ್ಲಿ..
    ನಿನ್ನ..
    ಪ್ರೇಮದ..
    ಹುಚ್ಚಿನಿಂದ..
    ನೀ.. ತುಂಬಿದ್ದೆ..
    ನನ್ನ ಬರಿದಾದ ಭಾವಗಳಲ್ಲಿ...

    ಪ್ರೋತ್ಸಾಹಕ್ಕೆ.. ಮೆಚ್ಚುಗೆಗೆ ತುಂಬುಹೃದಯದ ಧನ್ಯವಾದಗಳು..

    ReplyDelete
  10. ಕೃಷ್ಣಮೂರ್ತಿಯವರೆ..

    ನೀ..
    ಅಳಿಸಿದ್ದೆ..
    ನಿನ್ನ..
    ನೆನಪುಗಳಲ್ಲಿ..
    ನೀನೇ..
    ಬಿಡಿಸಿದ..
    ಬಣ್ಣ ಬಣ್ಣದ..
    ಕನಸಿನ..
    ಚಿತ್ರಗಳು....
    ಅಳಿಸಲಾಗದೆ..
    ಉಳಿದು ಬಿಟ್ಟಿವೆ ನನ್ನೊಳಗೆ ಕಣೆ..

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.. ಡಾಕ್ಟ್ರೆ..

    ReplyDelete
  11. ಪ್ರಕಾಶ್ ಅವರೇ,
    ಕವನ ತುಂಬಾ ಚೆನ್ನಾಗಿ ಮೂಡಿದೆ.
    ಹಾಗೇ ಸೂಪರ್ ಪೋಟೋ !

    ReplyDelete
  12. ಪ್ರಕಾಶಣ್ಣ... ತುಂಬಾ ಚೆನ್ನಾಗಿದೆ ಅಳಿಸಲಾಗದ ಬಣ್ಣ...
    ನೀ...
    ಅಳಿಸಿ..
    ಅತ್ತರೂ...
    ಅಳಿಸಲಾಗದ...

    ಸಾಲುಗಳು ತುಂಬಾ ಇಷ್ಟ ಆಯ್ತು..

    ReplyDelete
  13. ಆಜಾದು...

    ಹೌದು ಕಣೊ..
    ನೆನಪುಗಳೇ.. ಹಾಗೆ.. ಕೆಲವಷ್ಟು
    ಬೇಕೆನಿಸಿದರೂ..
    ಮಿಸ್ ಆಗಿಬಿಡುತ್ತವೆ ಅಲ್ಲವಾ?


    ಕಪ್ಪುಬಿಳುಪು..
    ಹಳೆಯ
    ನೆನಪುಗಳಾಗಿದ್ದರೂ..

    ನಗು..
    ಸವಿ ಮಾತುಗಳು...
    ರಂಗು ರಂಗಿನ..
    ಬಣ್ಣಗಳು
    ಕಣೆ..
    ಅತ್ತರೂ..
    ಅಳಿಸಲಾಗದ....
    ಆ..
    ನಿನ್ನ..
    ಚಿತ್ರಗಳು...

    ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು.. ಜೈ ಹೋ..

    ReplyDelete
  14. ಇರುಳು ಕಾಡುವ ಕನಸಿನಲಿ
    ಹಗಲ ನೆನಪ ನೆಪಗಳಲಿ
    ನಿನ್ನದೇ ಛಾಯೆಯ ಚಿತ್ತಾರ...

    ಕಪ್ಪು ಬಿಳುಪು ನೆನಪುಗಳಿಗೂ
    ರಂಗು ರಂಗಿನ ಮೆರಗು
    ನಿನ್ನದೇ ಮಾಯೆಯ ವಿಸ್ತಾರ..!!

    ಅಳಿಸಿ ಅತ್ತರೂ ಅಳಿಸಲಾಗದಂತೆ ಉಳಿದು ಹೋದ ಬಣ್ಣದ ಚಿತ್ರಗಳ ಕವನ ಮತ್ತು ಚಿತ್ರ ಚೆನ್ನಾಗಿದೆ ಪ್ರಕಾಶಣ್ಣ

    ReplyDelete
  15. Super kavite....Wonderful picture Prakashanna!!!!

    ReplyDelete
  16. ಆಯಿಲ್ ಪೇಂಟ?
    ಹೀಗೆ ಅಚ್ಚಹಸಿರಾಗಿ ಉಳಿದಿರಲಿ..
    ನಿಮ್ಮ ಭಾವಬಣ್ಣ..

    ReplyDelete
  17. ದಿನಕರ್...

    ಅತ್ತಿಗೆ ಈ ಸಾಲುಗಳನ್ನು/ ಫೋಟೊ ನೋಡಿ ಫುಲ್ ಖುಷ್.. !!

    ಇಂದು
    ಕಪ್ಪು...
    ಬಿಳುಪಾಗಿದ್ದರೂ..
    ಅಂದಿನ..
    ನಿನ್ನ..
    ಮಾತು..
    ಗುಳಿ ಕೆನ್ನೆಯ..
    ಸಿಹಿ ನಗು..
    ಇನ್ನೂ...
    ಬಣ್ಣ ಬಣ್ಣ..

    ಪ್ರೋತ್ಸಾಹಕ್ಕೆ ಧನ್ಯವಾದಗಳು...

    ReplyDelete
  18. Avala olava Nage..
    Avala Moga Sirige.. andada.......<?????

    ReplyDelete
  19. ಚೆನ್ನಾಗಿದೆ ಚುಟುಕು...
    ಅಳಿಸಲಾಗದ ಬಣ್ಣದ ಚಿತ್ರದಂತೆ...
    ಕಣ್ಣಲಿಳಿದ ಬೊಂಬೆಯಂತೆ...
    ಕಣ್ಣು ಮಿನಿಗಿಸೋ ತಾರೆಯಂತೆ...

    ReplyDelete
  20. ಚಿತ್ರದ ಬಣ್ಣದಂತೆ ಬಣ್ಣನೆಯು ಸುಂದರವಾಗಿದೆ..........

    ReplyDelete