ಛಾಯಾ ಚಿತ್ತಾರಾ....
Monday, March 23, 2015
ಒಂಟಿ ಕತ್ತಲಲಿ ಸಾವಿರ ಆಸೆಗಳ ಮಿನುಗು ... !
ಒಂಟಿ
ಕತ್ತಲಲಿ
ಸಾವಿರ ಆಸೆಗಳ ಮಿನುಗು ...
ಈ
ನಿನ್ನ ಕಣ್ಣು....
ಮತ್ತೇಕೆ ಮಾತು..
ನಲ್ಲೆ
ಮತ್ತೇರುವ ಮೌನವೇ ಸಾಕು....
ಹೂ
ನಗು ಬಿರಿದು ಅರಳಲಿ
ಹರಡಲಿ
ಕಂಪು ಕೆಂದುಟಿಯಲಿ....
ಮತ್ತೇಕೆ ಮಾತು
ನಲ್ಲೆ
ಮತ್ತೇರುವ ಮೌನವೇ ಸಾಕು.....
(
ರೂಪದರ್ಶಿ
:::
" ನಾಗಶ್ರೀ "
ಕಿರು ತೆರೆ ಮತ್ತು ಯಕ್ಷಗಾನ ಪ್ರತಿಭೆ
)
Friday, February 13, 2015
ಮೆಲ್ಲನೆ ಮುದ್ದು ಮುತ್ತಿಡುವೆ ಬಾ .... ಈ ಮತ್ತಿನ ಕಣ್ಣಿನಲಿ.. !
ತುಟಿಯಲಿ
ಇದೀಗ
ಬಿರಿದ ಮೊಗ್ಗಿನಂತೆ
ಒಳಗೊಳಗೆ
ನಗುವೆಯಲ್ಲೊ...
ನನ್ನ
ನಾಚಿ ಕೆಂಪೇರಿದ ಕೆನ್ನೆಗಳಲಿ...
ಅತ್ತಿತ್ತ
ಸುಳಿದಾಡಿ
ಮೆಲ್ಲನೆ ಮುದ್ದು ಮುತ್ತಿಡುವೆ
ಬಾ
ಈ ಮತ್ತಿನ ಕಣ್ಣಿನಲಿ..
ಬಾ
ಬಾರೋ ಹುಡುಗಾ...
ಎಷ್ಟೂ
ಅಂತ ಮುಚ್ಚಿಡಲೊ
ಬಚ್ಚಿಟ್ಟ
ನಿನ್ನ ಹುಚ್ಚು ಕನಸುಗಳನು ?
Wednesday, December 24, 2014
ನನ್ನ... ಚುಕ್ಕಿ ಚಂದ್ರಮ ಬೆಳ್ಳಿ ನಗು ನಗುವಾಗ...
ಹೇಗೆ
ಹೇಳಲೇ ಹುಡುಗಿ
ನನ್ನೀ
ಬಚ್ಚಿಟ್ಟ ಭಾವಗಳ
ಢವ
ಢವಗಳ
ಗದ್ದಲದಿ
ನನ್ನೊಳಗಿನ
ಮಾತುಗಳ
ಮೌನ
ಮೌನವಾಗುವ ಮುನ್ನ....
ಒಮ್ಮೆಯಾದರೂ
ಬಾ
ನನ್ನ
ಈ
ಒಂಟೀ ಭಾವಗಳು
ಕತ್ತಲಲಿ
ತಾರೆಗಳ ಎಣಿಸುವಾಗ..
ಬೆಳ್ಳಿ
ಬೆಳದಿಂಗಳಲಿ
ಬಿದಿಗೆ ಚಂದ್ರಮ
ಚುಕ್ಕಿ
ನಗು ನಗುವಾಗ...
ಬಾ ..
ಬಾರೇ ಒಮ್ಮೆಯಾದರೂ
ನೀ ....
Wednesday, September 17, 2014
ಕಂಗಳಲಿ ನಾಚಿ.. ರಂಗಾದ ಮುತ್ತು...
ತುಟಿಗೆ
ಬಾರದ ಮಾತು
ಭಾವ...
ನನ್ನೆದೆಯ
ಢವ
ಢವದಲಿ ಹುದುಗಿ ಹೋಗುವ ಮುನ್ನ...
ಕೆನ್ನೆಯಲಿ
ನಾಚಿ
ರಂಗಾಗಿ..
ಈ
ನಿನ್ನ
ಕಂಗಳಲಿ
ಮುದ್ದಾದ
ಮುತ್ತಾಗಬಾರದೇನೆ ಹುಡುಗಿ... ?
ರೂಪದರ್ಶಿ ::::::
"ಕುಮಾರಿ ಅರ್ಪಿತಾ "
ಯಕ್ಷಗಾನ ಪ್ರತಿಭೆ
Friday, September 5, 2014
ಬೆಳ್ಳಿಚುಕ್ಕಿ... ಮಿನುಗು ತಾರೆಗಳ ತಾರೆ... ನೀ ತಾರೆ... !
ಬಾ
ಬಾರೆ ಹುಡುಗಿ
ಭಾವ
ಬಂಧನಕೆ ಭಾವವಾಗಿ..
ನನ್ನೆದೆಯ ಮೌನದಲಿ
ನೀ
ಮೌನವಾಗಿ...
ತೇಲು
ಕನಸುಗಳ ರೆಕ್ಕೆಯಾಗಿ..
ನನ್ನ
ಕತ್ತಲ
ಮಾತಲಿ ಮಿನುಗುವ
ಬೆಳ್ಳಿ
ಚುಕ್ಕಿ
ತಾರೆಗಳ ತಾರೆ...
ನೀ
ತಾರೆ...
ಬಾ
ಬಾರೆ ಹುಡುಗಿ
ಭಾವ ಗೀತೆಯಾಗಿ..
ರೂಪದರ್ಶಿ
:::
" ಕುಮಾರಿ ಅರ್ಪಿತಾ "
ಯಕ್ಷಗಾನ ಪ್ರತಿಭೆ
Saturday, August 9, 2014
ನಿನ್ನ .. ನೆನಪುಗಳ ಮಿನುಗು ಚಂದ... !!!
ಬಡಿದು
ಬಡ
ಬಡಿಸುವ
ಢವ
ಢವಗಳಿಗಿಂತ...
ಕದ್ದೂ
ಕದ್ದು
ಇಣುಕಿ ..
ಕೆಣಕುವ
ನಿನ್ನ
ನೆನಪುಗಳ ಮಿನುಗು ಇನ್ನೂ ಚಂದ... !!!
Friday, August 1, 2014
ನಾ ನಿದ್ದೆ.. ನೀ... ಸಿಹಿ ಕನಸು... !
ನಾ
ನಿದ್ದೆ..
ನೀ
ಸವಿ ಕನಸು...
ನವಿರು
ಭಾವಗಳ ಮನಸು...
ಬಾ
ಹುಡುಗಾ
ನಗುವರಳಿಸು
ಹೂ
ಕೆನ್ನೆಗಳ ಮೇಲೆ
ಸಿಹಿ
ಮುದ್ದು
ಮುತ್ತಿನ
ಮಾತುಗಳು ಬಲು ಸೊಗಸು... !
ರೂಪದರ್ಶಿ
:::::
" ಅರ್ಪಿತಾ ಖೂರ್ಸೆ "
Newer Posts
Older Posts
Home
Subscribe to:
Posts (Atom)