Wednesday, June 3, 2015

ಅಧರದಲಿ ಬಚ್ಚಿಟ್ಟ ಮಧುರ ಮಾತುಗಳ ಹಾಗೆ...

ಅಧರದಲಿ
ಬಚ್ಚಿಟ್ಟ
ಮಧುರ  ಮಾತುಗಳ ಹಾಗೆ
ಮೌನ ಕಣೆ 
ನಿನ್ನ 
ನೆನಪುಗಳು...

ಖಾಲಿ
ಖಾಲಿ ಏಕಾಂತದಲಿ
ಚುಕ್ಕಿ
ತಾರೆಗಳು ಕತ್ತಲಲಿ ಹಾಡುತ್ತವಲ್ಲೇ...
ನೀ
ಬಿಟ್ಟು 
ಹೋದ ನಗುವಿನ ಹಾಗೆ....

ಬಾ
ತಬ್ಬಿಬಿಡು ನನ್ನೆದೆಯ..
ಬೆಳ್ಳಿ
ಬೆಳದಿಂಗಳು 
ನನ್ನ
ಒಂಟಿತನವ 
ಆವರಿಸುವ ಹಾಗೆ...






8 comments:

  1. ಹಾಗೇ... ಅದು ಹಾಗೇ... ಚದುರದ ಬೆಳದಿಂಗಳಲಿ ದೂರದಿಂದ ನಮಗೆ ಮಾತ್ರ ಕೇಳುವ ಮಧುರ ವಾಣಿಯ ಹಾಗೆ.
    ಪ್ರಕಾಶ್ ಜೀ, ನಿಮ್ಮ ಕವನಗಳೆಂದರೆ ಅವು ಕೇವಲ 'ನಿಮ್ಮ' ಕವನಗಳಲ್ಲ ; ನಮ್ಮವು ಕೂಡ...
    ಅಭಿನಂದನೆಗಳು.

    ReplyDelete
  2. ಚುಕ್ಕಿ ತಾರೆಗಂತೆ
    ಲೆಕ್ಕವಿಲ್ಲದ ಪ್ರೀತಿ ..
    ಬೆಳದಿಂಗಳಾ ಜೊತೆ
    ಬರುವಭಾವ ಲಹರಿ...

    ಮಾತೆಲ್ಲ ಮುತ್ತಾಗಿ
    ಚಲುವೊಂದು ಜೊತೆಯಾಗಿ
    ಮತ್ತೆಲ್ಲಿ..ಒಂಟಿತನ..!!!
    ಗುಡಿಸಿಟ್ಟುಕೊ..ನಿನ್ನ ಒಲವೆಲ್ಲವಾ..
    ಎಂದೆಂದೂ ..ತುಂಬಿರಲಿ..
    ಈ..ಕವಿಯ ಭಾವಕಣಜ...

    ReplyDelete
  3. ಬಾ ತಬ್ಬಿಬಿಡು ನನ್ನೊಮ್ಮೆ.. ಮನದಮನೆಗೆ ಹೊಕ್ಕಲು ಬಂದ ಒಂಟಿತನ, ನಿರಾಶೆ, ನೋವುಗಳೆಲ್ಲ ಎದೆಬಾಗಿಲಲೆ ಉಸಿರುಗಟ್ಟಿ ಸಾಯುವಂತೆ. ಚಂದದ ಸಾಲುಗಳು., ಪ್ರೀತಿಯೇ ಹಾಗೆ

    ReplyDelete
  4. ಬಾ ತಬ್ಬಿಬಿಡು ನನ್ನೊಮ್ಮೆ.. ಮನೆಮನೆಗೆ ಹೊಕ್ಕಲು ಬಂದ ಒಂಟಿತನ, ನಿರಾಶೆ, ನೋವುಗಳೆಲ್ಲ ಎದೆಬಾಗಿಲಲೆ ಉಸಿರುಗಟ್ಟಿ ಸಾಯುವಂತೆ. ಚಂದದ ಸಾಲುಗಳು., ಪ್ರೀತಿಯೇ ಹಾಗೆ

    ReplyDelete
  5. CASINOS AT CASINOS HOTEL, LAS VEGAS - JMT Hub
    CASINOS HOTEL, LAS VEGAS. (KRJ) 영천 출장안마용인 출장안마 CASINOS HOTEL in 김제 출장샵 Las Vegas, NV 이천 출장안마 - Check out total 남양주 출장마사지 gaming space, meeting rooms, and request a proposal

    ReplyDelete