Wednesday, May 15, 2013

ಸುಂದರ ಹೂವುಗಳೂ .. ನಗುತ್ತವೆ ನನ್ನೊಡನೆ... !

ಗೊತ್ತೇ..
ಇರಲಿಲ್ಲ ಕಣೆ ಹುಡುಗಿ... !

ನನ್ನೆದೆಯ
ಢವ 
ಢವದಲ್ಲಿ
ಏನೆಲ್ಲ ಮಾತಾಡುತ್ತವೆ...
ಈ 
ಕಣ್ಣುಗಳು... !

ಒಳಗೊಳಗೇ..
ಗುನುಗುತ್ತವೆ.. ಹಾಡುಗಳು... !

ಸುಂದರ
ಹೂವುಗಳೂ ..
ನಗುತ್ತವೆ...  ನನ್ನೊಡನೆ  ! ! 

ಗೊತ್ತೇ..
ಇರಲಿಲ್ಲ  ಕಣೆ  ಹುಡುಗಿ...
ನಾ... 
ನಿನ್ನ ನೋಡುವ  ಮೊದಲು !


( ರೂಪದರ್ಶಿ ::  ಅರ್ಪಿತಾ ಕೂರ್ಸೆ.. )

14 comments:

  1. ಅದು ಹಾಗೇ ಮನದ ಮಾತಿಗೆ ಮೌನ ಬೇಲಿ...ಕಣ್ಣ ನೋಟಕೆಲ್ಲಿದೆ ಗೋಲಿ...ಆದರೂ ಗುರಿ ತಪ್ಪದು, ಘಾಸಿಗೊಳಿಸದು ಗಾಯಮಾಡದು ಆದರೂ ನೋವು ಆಗುತ್ತೆ ಹಿತವಾಗಿ ...ಸುಂದರ ಚಿತ್ತಾರಕೆ ಅಷ್ಟೇ ಸುಂದರ ಪದಮುತ್ತುಗಳು.

    ReplyDelete
  2. Thank uuuuuuuuuuuuuuuuuuuu DOSTAAAAA.......

    ReplyDelete
  3. Jeevandalli ondu hudugi praveshisidare.. jeevanada jothe jothege putta putta anubhootigala madhura khushigalannu tandukodaballalaa ??

    chandada photo.. adakkinta chandavo saalugalu...

    ReplyDelete
    Replies
    1. ಸಂಧ್ಯಾ ಪುಟಾಣಿ...

      ಇಂಥಹ ಅನುಭಾವಗಳೇ ಬಲು ಚಂದ....

      ಬದುಕು ..
      ಸವೇದು ಹೋದರೂ..
      ಮತ್ತೆ..
      ಮತ್ತೆ ಚಿಗುರಿಸುವ ನೆನಪುಗಳು !

      ..
      ಹೂ..
      ನೋಡಿದ್ದೆ...
      ಮೊಗ್ಗರಳಿ
      ನಕ್ಕಿದ್ದು ನೋಡೇ ಇರಲಿಲ್ಲ ಕಣೆ..
      ನಿನ್ನ
      ನೋಡುವ ಮೊದಲು...

      Thank you putani...

      Delete
  4. ಬಹಳ ಚೆನ್ನಾಗಿದೆ... ನಿಮ್ಮ ಕವನಗಳು ನನಗೆ ಬಹಳ ಇಷ್ಟ... ಯಾಕೆ ಗೊತ್ತಾ ಪ್ರಕಾಶಣ್ಣ? ಎಷ್ಟೇ ವ್ಯಸ್ಥತೆ ಇದ್ದರೂ ಎರಡೇ ನಿಮಿಷದಲ್ಲಿ ಸುಲಭವಾಗಿ ಓದಿಬಿಡಬಹುದು.. ಮನಕೂ ಒಪ್ಪುತ್ತದೆ!

    ReplyDelete
    Replies
    1. ಅವಳು ಕತ್ತಲೆಯಲ್ಲಿದ್ದಳು..
      ಕುಣಿ..
      ನಲಿ ನಲಿಯುವ..
      ಹೊಸ ಶೃಂಗಾರ ಕನಸು ಕಟ್ಟುವ ಕಾಲದಲ್ಲಿ..
      ಅವಳು ಕತ್ತಲೆಯಲ್ಲಿದ್ದಳು..

      ಸಮಯವೋ..
      ಅದೃಷ್ಟವೊ..
      ದುರಂತದ ಮೋಸವಾಗಿ..
      ಬದುಕಿನಲ್ಲಿ ಜಿಗುಪ್ಸೆಯಾಗಿ..
      ಜೀವ ಸಾಕೆನಿಸಿ..
      ಅವಳು ಕತ್ತಲೆಯಲ್ಲಿದ್ದಳು..

      ಒಬ್ಬ
      ಈಗ
      ಬಂದಿದ್ದಾನೆ..
      ಅಹಲ್ಯೆಗೆ ರಾಮನಂತೆ..
      ಹೊಸ
      ಹಸಿರು ಕನಸುಗಳ...
      ಆಸೆ ಹುಟ್ಟಿಸಿದ್ದಾನೆ..

      ಹೊಸ ಬದುಕಿಗಾಗಿ ಕಾದು ಕುಳಿತ ನಮ್ಮ ಶಬರಿಯ ಬಾಳು ಬಂಗಾರವಾಗಲಿ...

      ಅವಳಿಗಾಗಿ ಈ ಸಾಲುಗಳು ಅರ್ಪಿತ...

      ( ಈ ಚಿತ್ರದ ರೂಪದರ್ಶಿಗೂ..
      ಮೇಲಿನ ಸತ್ಯ ಘಟನೆಗೂ ಯಾವುದೇ ಸಂಬಂಧವಿಲ್ಲ..
      ಈ ರೂಪದರ್ಶಿ ನನ್ನ ಕುಟುಂಬ ಸ್ನೇಹಿತರ ಮಗಳು..)

      ಧನ್ಯವಾದಗಳು ಪ್ರದೀಪು....

      Delete
  5. ನಿಮ್ಮ ಆಶಯ ನಿಜವಾಗಲಿ, ಆಕೆಯ ಬದುಕು ಹಾಸನಾಗಲೀ. ಆಕೆಯ ಮನೆಯಲ್ಲಿ ನಗುವು ಮನೆ ಮಾಡಲಿ.

    ರೂಪದರ್ಶಿಯಾ ಚಿತ್ರ ಬಹಳ ಸಹಜವಾಗಿ ತೆಗೆದಿದ್ದೀರಾ ಸಾರ್.

    ReplyDelete
  6. ಆಸೆಯ ಭಾವಕ್ಕೆ ಬಲ ಬಂದಾಗ ಕತ್ತಲೆ ಎಷ್ಟು ಹೊತ್ತು ನಿಲ್ಲಲು ಸಾಧ್ಯ . ಮಂಜಿನ ಹನಿ ಕರಗಿದಂತೆ
    ಹೂವಿನ ಸುಂದರತೆ ಕಂಡ ಹಾಗೆ ದುಃಖದ ಕ್ಷಣಗಳು ಆವಿಯಾಗಿಬಿಡುತ್ತದೆ. ಸುಂದರ ಆಶಯ ಸುಂದರ ಚಿತ್ರ...

    ReplyDelete
  7. ಮುಂಜಾನೆಗೆ ಮತ್ತೊಂದು ಕವನಪುಷ್ಪ ನಮ್ಮ ಪ್ರಕಾಶ್ ಹೆಗಡೆ ಎಂಬ ಮಾಯಕಾರನಿಂದ... ! ವಾಹ್...!

    ReplyDelete
  8. ಮೃದು ಮಧುರ ಭಾವ ....ತುಂಬಾ ಚೆನ್ನಾಗಿದೆ ಪ್ರಕಾಶಣ್ಣ ಈ ಒಲವ ಪರಿ
    ಇಷ್ಟವಾಯ್ತು

    ReplyDelete
  9. ಪ್ರಕಾಶಣ್ಣನ ಪ್ರತಿ ಎದೆಯ ಬಡಿತದಲ್ಲು
    ಒಂದೊಂದು ಕವನ ಪುಷ್ಪವಿದ್ದೀತು.....

    ಭಯ ಪಡಿಸೋದ್ ಬೇಡಾಂತ
    ಸುಮ್ನಿರೋ ಹಾಗಿದೆ....

    ತುಂಬಾ ಚನ್ನಾಗಿದೆ.....

    ReplyDelete
  10. ಚಂದದ ನಗುವಿಗೆ ಅತಿ ಸುಂದರ ಸಾಲುಗಳು....ಸೂಪರ್...

    ReplyDelete