Wednesday, July 25, 2012

ಆಗಲೂ ಈಗಲೂ .. ಸಿಕ್ಕಿದ್ದವು ..ಹೂಗಳು ನನಗೆ...



ಸಿಕ್ಕಿದ್ದವು ಹೂಗಳು ನನಗೆ...


ನಕ್ಕಿದ್ದವು..
ಕೆಲವಷ್ಟು ನೂಕಿದ್ದವು...
ಚಚ್ಚಿ 
ಚುಚ್ಚಿದ್ದವು...
ರಕ್ತ ನೋವು ತಂದಿದ್ದವು...


ಸಿಕ್ಕಿದ್ದವು ಹೂಗಳು ನನಗೆ...


ಹಾರಿ
ಹೋಗಿದ್ದವು ಹಲವು...
ಹಿಂದೆ 
ಉಳಿದು ಬಿಟ್ಟಿದ್ದವು ..
ಕೆಲವು
ಬಿಸಿಲಿಗೆ ಬಾಡಿ ಹೋಗಿದ್ದವು..


ಮೊಗ್ಗು
ಅರಳಿದ್ದವು..
ಹಸಿರು ಹುಲ್ಲು ಹಾಸುಗಳಾಗಿದ್ದವು..
ಬದುಕಿನುದ್ದಕ್ಕೂ..
ಸುಂದರ 
 ಪುಳಕದ ಪಕಳೆ ಪರಿಮಳಗಳಾಗಿ..
ಜೊತೆ ಜೊತೆಯಾಗಿದ್ದವು..


ಗುರುತು
ಇಟ್ಟಿದ್ದವು ಕೆಲವು... 
ಕಾಣದೆ 
ಕಾಲದೊಳಗೆ ಕಲೆತುಹೋಗಿದ್ದವು ಹಲವು..
ಮರೆಯದೆ..
ಮರೆಯಾಗದೆ ಉಳಿದು ಬಿಟ್ಟಿದ್ದು ನನ್ನೊಲವು...


ಆಗಲೂ..
ಈಗಲೂ
ಸಿಕ್ಕಿದ್ದವು ಹೂಗಳು ನನಗೆ...


Thursday, July 12, 2012

ಎಂದಿಗೂ ದೂರಿಲ್ಲದ .. ಆ ಹತ್ತಿರದ ಬದುಕು.... ...!


ಅದೇ
ಪುಟ್ಟ ಗೂಡು...
ಬೆಚ್ಚಗಿನ 
ಆಸೆಗಳು ನೂರಾರು ಭರವಸೆ.. !


ಕಣ್ಣಂಚಿನಲೇ ..
ನಗು...
ಮೌನ
ಮಾತುಗಳ  ಕೊನೆಯಾಗದ  ಕನಸುಗಳು... !


ಹೇಯ್..
ಅಲ್ಲಿಗೇ ..
ಹೋಗೋಣ  ಬಾರೆ..
ಮತ್ತೊಮ್ಮೆ
ನಲ್ಲೆ....
ಎಂದಿಗೂ..
ದೂರಿಲ್ಲದ ..
ಆ 
   ಹತ್ತಿರದ  ಬದುಕು.... ... !

( photo :: Ashish )

Friday, June 29, 2012

ಇದ್ದುಬಿಡು ನೀ. ನನ್ನೊಳಗೆ.. ಬೆಳ್ಳಿ.. ಬಾನಿನ ನಿರ್ಮಲ ನೀಲಿಯಂತೆ.. !

ಹನಿ..
ಹನಿ  ಹನಿಸಿ..
ಹಸಿರು
ಹೂ.. ಹಾಸಿ..
ಹಾಗೇ  ..
ಹೋಗಬೇಡವೋ ಗೆಳೆಯಾ..
ಇಲ್ಲೇ
ಇದ್ದುಬಿಡು..
ನೀ...
ನಿತ್ಯ 
ನನ್ನೊಳಗೆ..
ಬೆಳ್ಳಿ..
ಬಾನಿನ ನಿರ್ಮಲ ನೀಲಿಯಂತೆ.. !

Tuesday, June 26, 2012

ನನ್ನೆಲ್ಲ .. ಮೌನದೊಳು ನಿನ್ನದೇ... ಮಾತುಗಳು...!

ಎಳೆ ..
ಬಿಸಿಲಿನ..
ಛಳಿ..
ಭಾವದೆಲೆಗಳ ನೆನಪಿನಾಳದಿ...

ಬೆಚ್ಚಗೆ  
ಬೆಳಗುವದು ...
ನಿನ್ನ..
ಪ್ರೀತಿ ಎಳೆಗಳ ಆಲಿಂಗನ....!
ನೀ ...
ನಕ್ಕು ನಗಿಸಿದ.. 
ಆ 
ಕಣ್ಣೋಟದ  ಚುಂಬನಾ.. !

ಗೆಳೆಯಾ..
ನನ್ನೆಲ್ಲ ..
ಮೌನದೊಳು..
ನಿನ್ನದೇ... ಮಾತುಗಳು...!

Sunday, June 17, 2012

ನನ್ನೆದೆಯಲಿ ನಾ.. ನಿತ್ಯ ಅಡಗಿಸಿಡುವ ಪ್ರೀತಿ... !



ಮೆಲ್ಲ..
ಮೆಲ್ಲನೆ ...
ತೆರೆಯ ಸರಿಸಿ ..
ಇಣುಕಿ ನೋಡು ನಲ್ಲಾ....

ತುಟಿಯಲಿ ಶಬ್ಧವಾಗದೇ.. ಕಂಪಿಸುವ 
ಭಾವಗಳು ...
ಒಳಗೊಳಗೇ.. ಕಾಡಿ ...
ನಿನಗಾಗಿ..
ಕಾದಿರುವ ರೀತಿ...!


ನೀ 
ಕೇಳು ಗೆಳೆಯಾ...

ನನ್ನೆದೆಯ ..
ಢವ ಢವದಲಿ ..
ನಿತ್ಯವೂ ನನ್ನೊಳಗೆ ..
ನಾ...
ಕ್ಷಣ  ಕ್ಷಣವೂ ಅಡಗಿಸಿಡುವ ಪ್ರೀತಿ...!

Friday, June 8, 2012

ಆ.. ಆಲಿಂಗನ.. ಕಣ್ಣೋಟದ ಚುಂಬನ...!

ಹಸಿರು 
ಚಂದದ ಹೂ ಹಾಸು...
ಜೊತೆ..
ಜೊತೆಯಲಿ ...
ಎಂದೂ...
ಮುಗಿಯದ ಪಿಸು ಮಾತು..!


ಭರವಸೆಯ ..
ಆ..
ಆಲಿಂಗನ..
ಕಣ್ಣೋಟದ ಸಿಹಿ ಚುಂಬನ...!

ಗೆಳೆಯಾ...
ನಿನಗಿಂತ ..
ನೀ 
ಬಿಡಿಸಿದ ..
ಅಂದಿನ  ಅಂದದ  ಚಿತ್ತಾರಗಳೇ..  ಚಂದ  !


Photo  ::   Ashish

Wednesday, May 30, 2012

ಈ.. ಸವಿ.. ಸಮಯ ಸ್ತಬ್ಧವಾಗಲಿ.. ನಲ್ಲೇ..!

ಇಳಿ
ಸಂಜೆಯ ತಿಳಿಗೆಂಪು...
ಮತ್ತದೆ...
ಅರೆ ಮುಚ್ಚಿದ ಕಂಗಳು....
ಸಿಹಿ ತುಟಿ ...
ಸರಿ..
ಸರಿದಾಡುವ..
ನಿನ್ನೀ.. ಸೆರಗಿನಂಚು..

ಈ..
ಸವಿ..
ಸಮಯ ಸ್ತಬ್ಧವಾಗಲಿ ಬಿಡು...
ನಲ್ಲೇ..
ಬಿಸಿಯುಸಿರ ಆಲಿಂಗನದಲಿ...!