Wednesday, April 25, 2012

ಕಣ್ಮುಚ್ಚಿ ಬಾ...ಗೆಳೆಯಾ..ಬೆಳ್ಳಿ ಮೋಡದಾಚೆ ..!!

ಹಸಿರು..
ಹಳದಿ ರಂಗಿನ...
ಬಣ್ಣ 
ಬಣ್ಣದ  ಕನಸು ಕಟ್ಟುವೆ...
ಬಾ...

ಬಾರೋ..
ಬಾ..  ಗೆಳೆಯಾ ..
ಕಣ್ಮುಚ್ಚಿ..
ಬೆಳ್ಳಿ ಮೋಡದಾಚೆ  ..

ನೀಲಿ ಗಗನದ..
ನನ್ನ...
ಪ್ರೇಮ ಸೆರಗಿನಂಚಿನಲಿ...



Wednesday, April 4, 2012

ನನ್ನ ಕತ್ತಲೆಯ .. ತಾರೆಗಳ ಜೊತೆಯಲ್ಲಿ...

ಬಣ್ಣವಿಲ್ಲದ
ಗೆರೆಗಳು..
ರಂಗು  ರಂಗಿನ  ಚಿತ್ತಾರವಾಗುತ್ತಿವೆ..

ನನ್ನ 
ಕತ್ತಲೆಯ ..
ತಾರೆಗಳ  ಜೊತೆಯಲ್ಲಿ...
ನಿನ್ನ
ಮುಗುಳು  ನಗೆಯನ್ನು  ಬಿಡಿಸುತ್ತಿವೆ...

ಏಯ್ ..ಹುಡುಗೀ..

ಎಷ್ಟೆಲ್ಲ..
ಮಾತುಗಳು ..
ಉಳಿದು  ಬಿಟ್ಟಿವೆಯಲ್ಲೆ.....
ಇನ್ನೂ..
ಒಂಟಿಯಾಗಿ...
ಒಳಗೊಳಗೆ..  ನನ್ನೊಳಗೆ...!!

Thursday, March 8, 2012

ಕಣ್ಣು.. ಕಣ್ಣಾಲಿಯಲಿ ನೀನಂದ ಮಾತು.. ..



ಕಣ್ಣು..
ಕಣ್ಣಾಲಿಯಲಿ  ನೀನಂದ 
ಮಾತು..
ನೀ..
ಅಂದು..
ಜೊತೆ ಜೊತೆಯಲಿ
ಇಟ್ಟ..
ಹೆಜ್ಜೆ ..
ಗುರುತುಗಳು..
ಸದ್ದಿಲ್ಲದೆ
ಗೆಜ್ಜೆಯ ದನಿಯಾಗುತ್ತಿವೆ ...
ನನ್ನೆದೆಯಲ್ಲಿ 
ಇಂದಿಗು...
ಎಂದೆಂದಿಗೂ....

Wednesday, February 8, 2012

ನಿನ್ನ.. ಕಣ್ಣುಗಳೊಡನೆ ಇನ್ನೊಮ್ಮೆ... ಮತ್ತೊಮ್ಮೆ..!!

ಕಾಲ..
ಕನಸುಗಳಲಿ....
ನಾ..
ಕಳೆ
ಕಳೆದುಕೊಳ್ಳುವ ಮೊದಲು...

ನಿನ್ನ..
ಕಣ್ಣುಗಳೊಡನೆ...
ಮಾತಾಡುತ್ತಲೇ..ಇರಬೇಕು    ಕಣೆ...
ನಾನೊಬ್ಬನೇ..

ಮೌನವಾಗಿ..
ನೀ..
ನುಡಿಯದೆ ಮಿಡಿಯುವ ಭಾವಗಳ ಜೊತೆ..
ಒಮ್ಮೆ...
ಇನ್ನೊಮ್ಮೆ...
ಮತ್ತೊಮ್ಮೆ...... 
....... ..... ............

Wednesday, January 18, 2012

ನನ್ನ.. ಮೌನ ಗುನುಗುವ ಹಾಡು....


ನನ್ನ..
ಒಂಟಿ..
ಏಕಾಂತದ  ..
 ಮೌನ  ಗುನುಗುವ  ಹಾಡುಗಳಿಗೆ.. 
ನಿನ್ನ..
ಪ್ರೀತಿ ನೋಟದ..
ಭಾವ.. 
ದ್ವನಿಯೇ.. ಸಾಕು    ಕಣೋ ....!

Thursday, January 12, 2012

ಕಚಗುಳಿಯ ಮುಂಗುರುಳಾಗಿ....


ಬಳಿ..
ಇಲ್ಲದಿರೆ  ಏನಂತೆ...
ಇಟ್ಟಿರುವೆ...
ತುಂಬು  ಗಲ್ಲದಲಿ..
ಕೆಂಪು ..
ರಂಗಿನ ಕೆನ್ನೆಯ  ಮೇಲೆ...

ನನ್ನೆಲ್ಲ ಪ್ರಿತಿಯನು...
ನಿನ್ನ..
ಕಣ್ಣಾಲಿಯ  ನಸು  ನಾಚಿಕೆಯ..
ಕಚಗುಳಿಯ ..
ಮುಂಗುರುಳಾಗಿ...!!



Thursday, December 22, 2011

ಒಂಟಿ.. ಮೌನದಲಿ .. ಪಿಸು ಮಾತಾಗಿ...!!


ಹಗಲಿನ..
ಹುಚ್ಚಾಸೆಗಳಿಗೆ..
ಸಂಜೆ.. ರಂಗಿನ ಬಣ್ಣ ಬಳಿದು..

ಬೆಳದಿಂಗಳ ..
ತಾರೆ ..
ಚಂದಿರನ ಕನಸು .. ಕೊಟ್ಟು.. 

.. ಕಾಡುವೆಯಲ್ಲ ..
ಒಂಟಿ..
ಮೌನದಲಿ ..
ಪಿಸು ಮಾತಾಗಿ...
ಕೆನ್ನೆಯಲಿ ನಾಚಿಕೆಯ ಬಣ್ಣ ಬಳಿದು..!