ನೀನೆಂದರೆ
ನನಗೆ ನೀನೇ .. ಕಣೆ... !
ಏನೆಲ್ಲ
ನಕ್ಕರೂ ನನ್ನ ತುಟಿಗಳು...
ನನ್ನೊಳಗಿನ
ಒಂಟಿ..
ಮುಗುಳ್ನಗು ನೀನು ಕಣೆ...
ನನ್ನೆಲ್ಲ
ಆವರಿಸಿದ..
ನನ್ನಿಷ್ಟದ ಮೌನ..
ಮಾತು
ಹಾಡುವ ಸುಂದರ ಅವ್ಯಕ್ತ ಭಾವ ನೀನು ... !
ನನ್ನ...
ತುಮುಲಗಳ ..
ಪ್ರೇಮ ಛಾಯೆಯ ಚಿತ್ತಾರ ..
ನಿನ್ನ ನೋಟ
ಒಳಗೊಳಗೆ ಮುತ್ತಿಕ್ಕುವದು.....
ಹೇಯ್ ..
ಹುಡುಗಿ
ನನಗೆ ..
ನೀನೆಂದರೆ ನೀನೇ ... ಕಣೆ... !!!
(ರೂಪದರ್ಶಿ :: ಸಮನ್ವಯಾ ಸುದರ್ಶನ್ )