Saturday, October 6, 2012

ನೀರೆ.. ನಿನ್ಯಾರೆ..? ..

ಒಳಗೆ..
ಕತ್ತಲೆ ..
ಚಂದ್ರಮನಿಲ್ಲದ ..
ತಾರೆಗಳ  ಮಿಣುಕು..
ನಿನ್ನ
ನೆನಪುಗಳ ಗಾಢ ಮೌನ.. ..

ಇಳಿದು..
ಎಳೆಯುವ.. 
ನೋವು ಎದೆಯಲಿ..
ಬಾರದ
ಹನಿ  ಹನಿಗಳ  ಭಾವ.....

ನಿಜ ಹೇಳೆ ..
ನೀರೆ..
ನಿನ್ಯಾರೆ..?
ನೀ..
ಬರಿ .. ನೀರೇ..... ?

14 comments:

  1. ಬೆಳಕಿನ ಕತ್ತಲೆ...ಕತ್ತಲೆಯ ಬೆಳಕು..ಎರಡು ಸೊಗಸು...ಒಂದು ಇಲ್ಲದ್ದಕ್ಕೆ ಇದೆ ಎನ್ನುವ ಭಾವ..ಇನ್ನೊಂದು ಇರುವುದಕ್ಕೆ ಇಲ್ಲ ಎನ್ನುವ ಭಾವ...ನೆರಳು ಬೆಳಕಿನಾಟದಲ್ಲಿ ಭಾವದ ಅಲೆಯ ದೋಣಿಯಾ ಪಯಣ ಸೊಗಸು..ರೂಪದರ್ಶಿಯ ಭಾವ..ಅದಕ್ಕೆ ನೆರಳು ಬೆಳಕಿನಾಟ..ಅದಕ್ಕೆ ಪದಗಳ ಮೆರವಣಿಗೆ...ಆಹಾ...ಇದಲ್ಲವೇ ಸುಮಧುರ ಗೀತ ಚಿತ್ರ..ಅಥವಾ ಚಿತ್ರಕ್ಕೆ ಗೀತೆ..:-)

    ReplyDelete
    Replies
    1. ಪ್ರೀತಿಯ ಶ್ರೀ...Thank you very much !!

      ಬಾರದ ಹನಿಗಳ
      ಭಾವ..
      ಹೃದಯದ ನೋವು..
      ಆರದ ಆದ್ರ..

      ಹಾಗಾಗಿ ಸಂಶಯ..

      ನೀರೆ..
      ನೀ
      ಬರಿ ನೀರೇ...?

      Delete
  2. Super lines .. ..
    Neere ennuvavalu brameyo ...athava nijavo ... Ennuva gondalada koneya nalku saalugalige hats off....

    ReplyDelete
  3. ನೀರೂ..ನಿಲ್ಲಲಾರದೇ
    ಹನಿ ಹನಿಯಾಗಿ
    ಹನಿಸುವ ಹನಿಯೇ..
    ಎನ್ನದೇನಿದು ಮಿತ್ರಮಾ
    ಹೇಳಿಬಿಡು ಸಾರಾಸಗಟಾಗಿ
    ಓ ಮೈ "ಹನಿ"ಯೇ.

    ReplyDelete
  4. Super pic... lighting, mood,costumes, expression everything is perfect...

    ReplyDelete
  5. ವಾವ್ ಕವಿವರ್ಯ.

    ಕಾವ್ಯವನ್ನು ಇಷ್ಟು ತೀವ್ರವಾಗಿ ಅದು ಹೇಗೆ ಕಟ್ಟಿಕೊಡಬಲ್ಲಿರಿ?

    ಕತ್ತಲನು ಓಡಿಸಿ ಬೆಳಕನು ಹರಡಬಲ್ಲವಳ ಬಗೆಗೆ ಉತ್ತಮವಾದ ಪ್ರಶಸ್ತಿ ಪತ್ರ ಇದು.

    ReplyDelete
  6. ಮನದ ಮರೆಯಲ್ಲಿ ಮರಳಿ ತೆರೆಯೆದ್ದು ಹೊರಡುವುದು ಒಲವಿನಾ ಅಲೆಗಳು
    ಕನವರಿಕೆಯು ಅದೇಕೆ ಮತ್ತೆ,ಅದೆಲ್ಲಾ ಮುಗಿದು ಹೋದ ಕನಸುಗಳು..
    ಮುರುಟದಿರು ವನಸುಮವೇ,ಸುಡುಬಹುದು ಕಿರಣಗಳು
    ಮುಚ್ಚಿರು ನೀ ವದನವನು,ಕಾಡುವುದು ನೆನಪುಗಳು...


    ನಮಸ್ತೆ ...

    ReplyDelete
  7. very lovely photo and poem...nice combination of chaayaageet

    ReplyDelete
  8. Sundara salugalu Prakashnna...Beautiful photo......

    ReplyDelete
  9. ಹೂಂ ನೀರೆ ಯಾವತ್ತು ನೀರೆ .....
    ನೆನಪುಗಳ ಗಾಢ ಮೌನ.. ..

    ಯಾಕೆ ಹಿಂಗೆ

    ಚಿತ್ರಕ್ಕೆ ತಕ್ಕ ಸಾಲುಗಳು

    ವಿಚಾರಕ್ಕೆ ಹಚ್ಹುವದಂತು ನಿಜ ....

    ReplyDelete